ಶನಿವಾರ, ಮಾರ್ಚ್ 6, 2021
18 °C

ಬಿಎಂಟಿಸಿ ಬಸ್ಸಿನ ತೊಂದರೆ

ನೊಂದ ನಾಗರಿಕರು Updated:

ಅಕ್ಷರ ಗಾತ್ರ : | |

ಬಿಎಂಟಿಸಿ ಬಸ್ಸಿನ ತೊಂದರೆ

ವಿಧಾನಸೌಧ ಬಡಾವಣೆ ಮತ್ತು ಲಕ್ಷ್ಮೀದೇವಿ ನಗರ ಪ್ರದೇಶವು ಮುಖ್ಯರಸ್ತೆಯಿಂದ ಸುಮಾರು 2 ಕಿ.ಮೀ. ಒಳಭಾಗದಲ್ಲಿದೆ. ಬಿಎಂಟಿಸಿ ಇಂದ ಓಡಾಡುತ್ತಿದ್ದ 77ಡಿ/1, 77ಎ/1, 79ಜಿ/12, 80ವಿ, 98ಇ/2 ಮಾರ್ಗಸೂಚನೆಗಳನ್ನು ಘಟಕ 22ರಿಂದ ಆಚರಣೆ ಮಾಡುತ್ತಿಲ್ಲ.ಇದರಿಂದ ಸ್ಥಳೀಯ ನಾಗರಿಕರಿಗೆ ತೊಂದರೆಯಾಗುತ್ತಿದೆ. ಬಿಎಂಟಿಸಿಯ ಉತ್ತರ ವಿಭಾಗೀಯ ನಿಯಂತ್ರಕರು, ವ್ಯವಸ್ಥಾಪಕರು (ಆಚರಣೆ) ಮುಂತಾದ ಹಿರಿಯ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದರೂ ಬಿಎಂಟಿಸಿ ಬಸ್‌ ಆಚರಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.ಬೆಳಿಗ್ಗೆ 6ರಿಂದ 8ರವರೆಗೆ ಮಧ್ಯಾಹ್ನ 12.30ರಿಂದ 3ರವರೆಗೆ ಮತ್ತು ರಾತ್ರಿ 8ರ ನಂತರ ಈ ಪ್ರದೇಶಕ್ಕೆ ಯಾವುದೇ ಬಿಎಂಟಿಸಿ ವಾಹನದ ಆಗಮನವಾಗಲಿ, ನಿರ್ಗಮನವಾಗಲಿ ಇರುವುದಿಲ್ಲ.ಆದ್ದರಿಂದ ಸ್ಥಳೀಯ ನಾಗರಿಕರು ರಾತ್ರಿ 8ರ ನಂತರ ಸೋನಲ್‌ ಗಾರ್ಮೆಂಟ್‌ ಅಥವಾ ರಾಜ್‌ಕುಮಾರ್‌ ಪುಣ್ಯಭೂಮಿ ಬಸ್‌ ನಿಲ್ದಾಣದಿಂದ ಬಸ್‌ ಇಳಿದು ತಮ್ಮ ಮನೆಗಳಿಗೆ ನಡೆದುಕೊಂಡೇ ಹಿಂದಿರುಗಬೇಕು. ಇದು ಮಹಿಳೆಯರಿಗಾಗಲಿ, ವಿದ್ಯಾರ್ಥಿಗಳಿಗಾಗಲಿ, ಹಿರಿಯ ನಾಗರಿಕರಿಗಾಗಲಿ, ವಿಕಲಚೇತನರು, ಅಂಧರಿಗೆ ಸುರಕ್ಷಿತ ಪ್ರದೇಶವಲ್ಲ.ಬಿಎಂಟಿಸಿಯು ಲಕ್ಷ್ಮೀದೇವಿ ನಗರ ಮುಖ್ಯರಸ್ತೆಯು 40 ಅಡಿಗಿಂತ ಕಿರಿದಾಗಿರುವುದರಿಂದ ಚಕ್ರ ಸಾರಿಗೆ ಮಾದರಿ 30 ಆಸನಗಳ ಅಶೋಕ್‌ ಲೈಲೆಂಡ್‌ ಉದ್ದ ಕಡಿಮೆ ಇರುವ ಮಿನಿ ವಾಹನಗಳನ್ನು ಆಚರಣೆ ಮಾಡಲಿ ಹಾಗೂ 2010 ಜುಲೈವರೆಗೆ ಆಚರಣೆಯಲ್ಲಿದ್ದಂತೆ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10ರವರೆಗೆ ವಾಹನಗಳ ಸಂಚಾರ ಇರುವಂತೆ ಮಾಡಲಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.