ಸೋಮವಾರ, ಮೇ 10, 2021
21 °C

ಬಿಎಸ್‌ವೈಗೆ ಸ್ಥಾನಮಾನ: ಈಶ್ವರಪ್ಪ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಮುಖ್ಯಮಂತ್ರಿಯಾಗಿದ್ದ ವೇಳೆ ಬಿ.ಎಸ್. ಯಡಿಯೂರಪ್ಪ ಉತ್ತಮ ಆಡಳಿತ ನೀಡಿದ್ದರು. ಕೆಲವು ವಿರೋಧಿಗಳಿಂದ ಅವರು ಅಧಿಕಾರ ಕಳೆದುಕೊಳ್ಳಬೇಕಾಯಿತು. ಅವರಿಗೆ ಹೈಕಮಾಂಡ್ ಆದಷ್ಟು ಬೇಗ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಒತ್ತಾಯಿಸಿದರು.ನಗರದಲ್ಲಿ ಗುರುವಾರ ಭೇಟಿ ಯಾದ ಸುದ್ದಿಗಾರರ ಜತೆ ಮಾತನಾ ಡಿದ ಅವರು, ಈಗಾಗಲೇ ನ್ಯಾಯಾಲ ಯದಲ್ಲಿನ ಅವರ ಮೇಲಿನ ಪ್ರಕರ ಣದ ಒಂದು ತೀರ್ಪು ಹೊರಬಂದಿದೆ. ಹಾಗಾಗಿ, ಕೇಂದ್ರದ ನಾಯಕರು ಆದಷ್ಟು ಬೇಗ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದರು.  ಯಡಿಯೂರಪ್ಪ ಅವರಿಗೆ ಅವರ ವಿರೋಧಿಗಳಿಂದ ಅನ್ಯಾಯವಾಗಿದೆ. ಅವರಿಗೆ ಸೂಕ್ತ ಸ್ಥಾನಮಾನಕ್ಕೆ ನಾನೂ ಭಗವಂತನಲ್ಲಿ ಪ್ರಾರ್ಥಿ ಸುತ್ತೇನೆ. ಹೈಕಮಾಂಡ್ ಎಷ್ಟು ಬೇಗ ನಿರ್ಧಾರ ತೆಗೆದುಕೊಳ್ಳುತ್ತದೆಯೋ ಅಲ್ಲಿಯವರೆಗೂ ಯಡಿಯೂರಪ್ಪ ಕಾಯಬೇಕು ಎಂದರು.ಯಡಿಯೂರಪ್ಪ ಅವರಿಗೆ ಆಡಳಿತ ದಲ್ಲಿ ಸಾಕಷ್ಟು ಅನುಭವವಿದೆ. ಈ ಹಿನ್ನೆಲೆಯಲ್ಲಿ ಬರಪೀಡಿತ ಪ್ರದೇಶ ಗಳ ಅಧ್ಯಯನ ನಡೆಸಲು ತೆರಳಿ ದ್ದಾರೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿ ಸುವುದು ಸರಿಯಲ್ಲ ಎಂದ ಅವರು, ಅವರು ಏಕೆ ಪ್ರವಾಸ ಮಾಡ ಬಾರದು? ಎಂದು ಮರು ಪ್ರಶ್ನೆ ಹಾಕಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.