ಶನಿವಾರ, ಜೂನ್ 19, 2021
27 °C

ಬಿಜೆಪಿಗೆ ಮರಳುವುದಿಲ್ಲ: ಕೃಷ್ಣಯ್ಯ ಶೆಟ್ಟಿ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲೂರು: ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಮಾಡಿ­ಕೊಳ್ಳದಿದ್ದಲ್ಲಿ ಕೋಲಾರ ಮೀಸಲು ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯಶೆಟ್ಟಿ ತಿಳಿಸಿದರು.ಬಿಜೆಪಿ  ಪಕ್ಷವನ್ನು  ತಾಲ್ಲೂಕಿನಲ್ಲಿ ಶಕ್ತಿಯುತವಾಗಿ ಸಂಘ­ಟಿಸಲಾಗಿತ್ತು. ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಟಿಕೆಟ್ ನೀಡದೆ ದ್ರೋಹ ಎಸಗಿದ್ದರಿಂದ ಈಗ ಬಿಜೆಪಿಗೆ ವಿದಾಯ ಹೇಳಿದ್ದೇನೆ ಎಂದು ಹೇಳಿದರು.ಯಾವೊಬ್ಬ ಬಿಜೆಪಿ ನಾಯಕರು ಸೌಜನ್ಯಕ್ಕಾದರೂ ಗಣನೆಗೆ ತೆಗೆದುಕೊಳ್ಳದೆ ನಡು ನೀರಿ­ನಲ್ಲಿ ಕೈ ಬಿಟ್ಟಿದ್ದಾರೆ. ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇಪರ್ಡೆಗೊಂಡಿದ್ದೇನೆ. ಕಾಂಗ್ರೆಸ್ ಪಕ್ಷಕ್ಕೆ ಮೂರು ದಿನಗಳಲ್ಲಿ ಅಧಿ­ಕೃತವಾಗಿ  ಪಕ್ಷಕ್ಕೆ ಬರ ಮಾಡಿ­ಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.