ಶುಕ್ರವಾರ, ಜನವರಿ 24, 2020
16 °C

ಬಿಜೆಪಿ ಗೆಲುವು: ಮೋದಿ ಅಲೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ (ಪಿಟಿಐ): ನಾಲ್ಕು ರಾಜ್ಯ­ಗಳ ಚುನಾವಣಾ ಫಲಿತಾಂಶವು ಬಿಜೆ­ಪಿಯಲ್ಲಿ ಹೊಸ ಹುಮ್ಮಸ್ಸು ಮೂಡಿ­ಸಿದೆ. ಆದರೆ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ‘ಅಲೆ’ ಕೆಲಸ ಮಾಡಿದೆ ಎಂಬು­ದಕ್ಕೆ ಯಾವುದೇ ಆಧಾರ ಇಲ್ಲ. ಮುಂಬ­ರುವ ಚುನಾವಣೆ­ಯಲ್ಲಿ ಇದೇ ರೀತಿ ಸಾಧನೆ ಮುಂದು­ವರೆಯುತ್ತದೆ ಎಂಬ ಖಾತ್ರಿಯಿಲ್ಲ ಎಂದು ಅಮೆರಿಕದ ರಾಜ­ಕೀಯ ವಿಶ್ಲೇಷಕರು ಅಭಿಪ್ರಾಯ­ಪಟ್ಟಿದ್ದಾರೆ.ಭಾರತದಲ್ಲಿ ನಡೆಯುವ ಚುನಾವಣೆ­ಯನ್ನು ಸೂಕ್ಷ್ಮವಾಗಿ ಅವಲೋಕಿಸುವ   ಈ ತಜ್ಞರು, ಬಿಜೆಪಿ ಜಯ ಸಾಧಿಸಿರುವು­ದಕ್ಕೆ ಮೋದಿ ಅಂಶ­ವೊಂದೇ ಕಾರಣ­ವಲ್ಲ ಎಂದಿದ್ದಾರೆ. ಹಾಗೆಯೇ  ‘ಆಮ್‌ ಆದ್ಮಿ ಪಕ್ಷ’ದ ಸಾಧನೆ ಆಶ್ಚರ್ಯ ಮೂಡಿ­ಸಿದೆ ಎಂದೂ ಹೇಳಿದ್ದಾರೆ.‘ಫಲಿತಾಂಶ ಬಂದ ನಾಲ್ಕೂ ರಾಜ್ಯಗಳಲ್ಲಿ ಯಾವಾ­ಗಲೂ ಬಿಜೆಪಿ ಮಾತ್ರ ಪ್ರಮುಖ ಪ್ರತಿಸ್ಪರ್ಧಿಯಾಗಿದೆ. 2003ರಲ್ಲಿ ಇದೇ ತೆರನಾಗಿ ಬಂದಿದ್ದ ಚುನಾಣಾ ಫಲಿ­ತಾಂಶ­ವೇ ಇದಕ್ಕೆ ಸಾಕ್ಷಿ. ಆಂಧ್ರ ಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಬಿಜೆಪಿ ಎಷ್ಟು ಲೋಕ­ಸಭೆ ಸ್ಥಾನ ಗೆಲ್ಲಲಿದೆ ಎಂಬುದರ ಮೇಲೆ ನಿಜವಾಗಲೂ ಬಿಜೆಪಿ ಅಲೆ ಇದೆಯೇ ಎನ್ನುವುದು ನಿರ್ಧಾರ­ವಾಗಲಿದೆ.ಏಕೆಂದರೆ ಹಿಂದಿನ ಎರಡು ಲೋಕ­ಸಭೆ ಚುನಾವಣೆಗಳಲ್ಲಿ ಬಿಜೆಪಿ ಈ ನಾಲ್ಕು ರಾಜ್ಯಗಳ ಒಟ್ಟು ಸ್ಥಾನಗಳ ಪೈಕಿ ಕೇವಲ ಒಂದರಲ್ಲಿ ಮಾತ್ರ ಜಯ ಸಾಧಿ­ಸಿತ್ತು’ ಎಂದು ಮ್ಯಾಕ್‌ಲಾರ್ಟಿ ಅಸೋಸಿ­ಯೇಟ್ಸ್‌ನ ದಕ್ಷಿಣ ಏಷ್ಯಾ ನಿರ್ದೇಶಕ ರಿಚರ್ಡ್‌ ಎಂ. ರೊಸೊ ಹೇಳಿದ್ದಾರೆ.‘ಕೆಲ ತಿಂಗಳಲ್ಲಿ ಮೋದಿ, ರಾಹುಲ್‌ ಈ  ರಾಜ್ಯಗಳಿಗೆ ಅನೇಕ ಬಾರಿ ಭೇಟಿ ನೀಡಿದ್ದು, ­ ತಮ್ಮ ಪರ ಅಲೆ ಸೃಷ್ಟಿಸಿದ್ದಾರೆ ಎನ್ನು­ವು­ದನ್ನು ಪುಷ್ಟಿ ಇಲ್ಲ’ ಎಂದಿದ್ದಾರೆ.

ಪ್ರತಿಕ್ರಿಯಿಸಿ (+)