ಬೆಂಗಳೂರು:ಘೋಷಿತ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದಿಸಿರುವ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಅವರಿಗೆ ಜುಲೈ 29ರಂದು ವಿಚಾರಣೆಗೆ ಹಾಜರಿರಲು ಸೂಚಿಸಿ, ಸಮನ್ಸ್ ಜಾರಿಗೆ ಲೋಕಾಯುಕ್ತ ವಿಶೇಷ ನ್ಯಾಯಾಲಯ ಮಂಗಳವಾರ ಆದೇಶಿಸಿದೆ.

ಘೋಷಿತ ಆದಾಯಕ್ಕಿಂತ ಶೇಕಡ 159.02ರಷ್ಟು ಹೆಚ್ಚುವರಿ ಆಸ್ತಿಯನ್ನು ವಿಶ್ವನಾಥ್ ಅವರು ಸಂಪಾದಿಸಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು 2012ರ ಆಗಸ್ಟ್ 4ರಂದು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ವಿ. ಶಶಿಧರ್ ಎಂಬುವರು 2011ರಲ್ಲಿ ಸಲ್ಲಿಸಿದ್ದ ಖಾಸಗಿ ದೂರು ಆಧರಿಸಿ, ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ್ದರು.

ವಿಶ್ವನಾಥ್, ಅವರ ಕುಟುಂಬ ಮತ್ತು ಬೇನಾಮಿ ಹೆಸರಿನಲ್ಲಿರುವ ಆಸ್ತಿಯ ಒಟ್ಟು ಮೌಲ್ಯ 9.11 ಕೋಟಿ ರೂಪಾಯಿ.
ಅವರ ಖರ್ಚು 3.50 ಕೋಟಿ ರೂಪಾಯಿ ಮತ್ತು ವೇತನ, ವ್ಯಾಪಾರ ಹಾಗೂ ಕೃಷಿ ಮೂಲಗಳಿಂದ ಅವರ ಆದಾಯ 4.87 ಕೋಟಿ ರೂಪಾಯಿಗಳು. ಆದಾಯ ಮತ್ತು ಆಸ್ತಿಯ ನಡುವೆ ಒಟ್ಟು 7.74 ಕೋಟಿ ರೂಪಾಯಿ ವ್ಯತ್ಯಾಸ ಕಂಡುಬಂದಿದೆ ಎಂದು ಪೊಲೀಸರು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.