ಬಿಡಿಎ ನಿವೇಶನ ನಿರ್ಮಾಣ ಗಡುವು
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಿವೇಶನ ಪಡೆದು 2 ವರ್ಷಗಳಾದರೂ ಮನೆ ನಿರ್ಮಾಣ ಆರಂಭಿಸದ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ಹೈಕೋರ್ಟ್ ಸೂಚನೆಯೇನೊ ಸರಿ.
ಆದರೆ `ಬಿಡಿಎ~ ಅಭಿವೃದ್ಧಿಪಡಿಸಿ ಹಂಚಿದ ನಿವೇಶನಗಳಲ್ಲಿ ನೀರು, ವಿದ್ಯುತ್, ಒಳಚರಂಡಿ ಮತ್ತಿತರ ನಾಗರಿಕ ಸೌಲಭ್ಯಗಳನ್ನು ಒದಗಿಸದ `ಬಿಡಿಎ~ದ ಬೇಜವಾಬ್ದಾರಿಗೆ ನಿವೇಶನ ಮಾಲೀಕರು ಬಲಿಯಾಗಬೇಕೆ ಎನ್ನುವ ಪ್ರಶ್ನೆ ಇಲ್ಲಿ ಉದ್ಭವಿಸುತ್ತದೆ.
ಅರ್ಕಾವತಿ, ಅಂಜನಾಪುರ 1ನೇ -2ನೇ ಹಂತ, ವಿಶ್ವೇಶ್ವರಯ್ಯ, ಬನಶಂಕರಿ ಇತರ ಬಡಾವಣೆಗಳನ್ನು ಅಭಿವೃದ್ಧಿಪಡಿಸಿ ನಿವೇಶನ ಹಂಚಿಕೆ ಮಾಡಿದ `ಬಿಡಿಎ~, ಮನೆ-ಕಟ್ಟಡ ನಿರ್ಮಾಣಕ್ಕೆ, ಜನರ ವಾಸಕ್ಕೆ ಪೂರಕ ಮೂಲ ಸೌಕರ್ಯ ಅಭಿವೃದ್ಧಿಯ ಬಗ್ಗೆ ಕಾಳಜಿ ತೋರಿಲ್ಲ.
ಈ ಬಗ್ಗೆ ನಿವೇಶನ ಮಾಲೀಕರು ತಮ್ಮ ಹಿತಾಸಕ್ತಿ ರಕ್ಷಣೆಗೆ ಒಗ್ಗಟ್ಟಾಗಿ `ಬಿಡಿಎ~ ಮೇಲೆ ಒತ್ತಡ ತರಬೇಕಾಗಿದೆ. ಹೈಕೋರ್ಟ್ ಕೂಡ ಬಿಡಿಎಗೆ ಎಚ್ಚರಿಕೆ ನೀಡಿ ನಿವೇಶನ ಮಾಲೀಕರ ರಕ್ಷಣೆಗೆ ಮುಂದಾಗಬೇಕಾಗಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.