ನವದೆಹಲಿ: ಶಂಕರ ಮಹಾದೇವ ಬಿದರಿ ಅವರನ್ನು ಪೊಲೀಸ್ ಮಹಾನಿರ್ದೇಶಕ ಮತ್ತು ಮಹಾನಿರೀಕ್ಷಕ (ಡಿಜಿ ಮತ್ತು ಐಜಿ) ಹುದ್ದೆಯಿಂದ ಬದಲಾಯಿಸಿ ಎ.ಆರ್. ಇನ್ಫಂಟ್ ಅವರನ್ನು ನೇಮಕ ಮಾಡಲು ಸೂಚಿಸಿದ್ದ ಹೈಕೋರ್ಟ್ ತೀರ್ಪು ಜಾರಿಗೆ ಸುಪ್ರೀಂಕೋರ್ಟ್ ಮಂಗಳವಾರ ತಡೆಯಾಜ್ಞೆ ನೀಡಿತು. ಆದರೆ, ಮುಂದಿನ ಡಿಜಿಪಿ ಯಾರಾಗಬೇಕೆಂದು ತೀರ್ಮಾನಿಸುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ಬಿಟ್ಟುಕೊಟ್ಟಿತು.

ಹೈಕೋರ್ಟ್ ತೀರ್ಪು ಪ್ರಶ್ನಿಸಿ ಶಂಕರ ಬಿದರಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ. ಅಫ್ತಬ್ ಆಲಂ ಹಾಗೂ ನ್ಯಾ. ಸಿ. ಕೆ. ಪ್ರಸಾದ್ ಅವರನ್ನು ಒಳಗೊಂಡ ನ್ಯಾಯಪೀಠವು, ಡಿಜಿಪಿ ನೇಮಕಾತಿ ವಿವಾದ ಕುರಿತು ಪುನಃ ವಿಚಾರಣೆ ನಡೆಸಿ ಮೇ 31ರೊಳಗೆ ಇತ್ಯರ್ಥಪಡಿಸುವಂತೆ ಸೂಚಿಸಿ ಕಡತವನ್ನು ಹೈಕೋರ್ಟ್ಗೆ ವಾಪಸ್ ಕಳುಹಿಸಿತು. ಬಿದರಿ ನೇಮಕ ರದ್ದು ಮಾಡಿದ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಯ ಮಾರ್ಚ್ 16ರ ತೀರ್ಪನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿತು.

2004ರಲ್ಲಿ ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ವೇಳೆ ಎಸ್ಟಿಎಫ್ ನಡೆಸಿತೆನ್ನಲಾದ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಹೈಕೋರ್ಟ್ ಬಿದರಿ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಕಾರ್ಯಪಡೆ ನೇತೃತ್ವ ವಹಿಸಿದ್ದ ಬಿದರಿ ಸದ್ದಾಂ ಹುಸೇನ್ ಮತ್ತು ಗಡಾಫಿ ಅವರಿಗಿಂತ ಕಡೆ ಎಂದು ಟೀಕಿಸಿತ್ತು.

ಆದರೆ, ಸದಾಶಿವ ಆಯೋಗ ಮತ್ತು ಮಾನವ ಹಕ್ಕು ಆಯೋಗದ ವರದಿ ಪರಿಶೀಲಿಸಿದ ಸುಪ್ರೀಂ ಕೋರ್ಟ್ ಬಿದರಿ ವಿರುದ್ಧ ವರದಿಯಲ್ಲಿ ಏನೂ ಹೇಳಿಲ್ಲ. ಮೇಲ್ನೋಟಕ್ಕೆ ನೋಡಿದರೆ ಈ ಅಧಿಕಾರಿ ವಿರುದ್ಧ ಯಾವುದೇ ಆರೋಪವಿದ್ದಂತಿಲ್ಲ ಎಂದು ಹೇಳಿತು. ರಾಜ್ಯ ಸರ್ಕಾರ, ಬಿದರಿ ಮತ್ತು ಇನ್ಫಂಟ್ ಪರ ವಕೀಲರ ವಾದಗಳನ್ನು ಕೇಳಿದ ಬಳಿಕ ಕರ್ನಾಟಕ ಮತ್ತು ತಮಿಳುನಾಡು ಗಡಿ ಭಾಗಗಳಲ್ಲಿ ನಡೆದಿರುವ ದೌರ್ಜನ್ಯದ ಪೂರ್ಣ ವರದಿಯನ್ನು ಹೈಕೋರ್ಟ್ನಲ್ಲಿ ಮಂಡಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿತು.

ಹೈಕೋರ್ಟ್ ತೀರ್ಪು ಕಲ್ಪನೆ ಮೇಲೆ ನಿಂತಿದೆ. ವೀರಪ್ಪನ್ ವಿರುದ್ಧದ ಕಾರ್ಯಾಚರಣೆ ವೇಳೆ ಕರ್ನಾಟಕ ಮತ್ತು ತಮಿಳುನಾಡು ಗಡಿಗಳಲ್ಲಿ ಜನರ ಮೇಲೆ ಎಸ್ಟಿಎಫ್ ನಡೆಸಿತೆನ್ನಲಾದ ದೌರ್ಜನ್ಯ ಕುರಿತು ವಿಚಾರಣೆ ನಡೆಸಿದ ಸದಾಶಿವ ಆಯೋಗ ಮತ್ತು ಮಾನವ ಹಕ್ಕು ಆಯೋಗದ ವರದಿ ಹೈಕೋರ್ಟ್ಗೆ ಸಲ್ಲಿಕೆ ಆಗಿಲ್ಲ. ವಿಚಾರಣಾ ಆಯೋಗಗಳ ಮುಂದೆ ಸರ್ಕಾರೇತರ ಸಂಸ್ಥೆಗಳು (ಎನ್ಜಿಒ) ಪ್ರಮಾಣ ಪತ್ರ ರೂಪದಲ್ಲಿ ಸಲ್ಲಿಸಿರುವ ಕೆಲವು ದಾಖಲೆಗಳನ್ನು ಮಾತ್ರ ಇನ್ಫಂಟ್ ಕೇಂದ್ರ ಆಡಳಿತಾತ್ಮಕ ನ್ಯಾಯ ಮಂಡಳಿ (ಸಿಎಟಿ) ಮುಂದೆ ಸಲ್ಲಿಸಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ಸದಾಶಿವ ಆಯೋಗದ ವರದಿಯನ್ನು ಹೈಕೋರ್ಟ್ ಮುಂದೆ ಮಂಡಿಸದ ರಾಜ್ಯ ಸರ್ಕಾರವನ್ನು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿತು. ಇನ್ಫಂಟ್ ಪರ ಹಾಜರಾದ ಹಿರಿಯ ವಕೀಲ ಅಲ್ತಾಫ್ ಅಹಮದ್, ವರದಿಯ ಕೆಲ ಭಾಗಗಳನ್ನು ಓದಿದರು. ದೌರ್ಜನ್ಯಗಳು ನಡೆದಾಗ ಬಿದರಿ ಜಂಟಿ ಕಾರ್ಯಪಡೆ ಉಪ ಮುಖ್ಯಸ್ಥರಾಗಿದ್ದರು. ಆಗ ನಡೆದ 66 ಎನ್ಕೌಂಟರ್ಗಳಲ್ಲಿ 36 ಪ್ರಕರಣಗಳು ಸಂಶಯಾಸ್ಪದವಾಗಿವೆ ಎಂದು ವಾದಿಸಿದರು.

`ಹಾಗಾದರೆ ಪ್ರತಿ ಎನ್ಕೌಂಟರ್ಗೂ ಡಿಜಿಪಿ ಅವರೇ ಹೊಣೆಗಾರರಾಗಬೇಕಾಗುತ್ತದೆ ಅಲ್ಲವೆ?~ ಎಂದು ನ್ಯಾಯಪೀಠ ಕೇಳಿತು. ರಾಜ್ಯ ಸರ್ಕಾರದ ಪರ ವಕೀಲರು `ಸದ್ದಾಂ ಹುಸೇನ್ ಹಾಗೂ ಗಡಾಫಿ ಹೆಸರು ಪ್ರಸ್ತಾಪಿಸಲು ಕಾರಣವೇನು ಎಂದು ನ್ಯಾಯಪೀಠ ತನ್ನ ಮುಂದೆ ಹಾಜರಾದ ಸರ್ಕಾರದ ವಕೀಲ ಯು.ಯು ಲಲಿತ್ ಅವರನ್ನು ಪ್ರಶ್ನಿಸಿತು. `ಇದೊಂದು ದೊಡ್ಡ ತಪ್ಪು~. ಅಲ್ಲದೆ, `ಸದಾಶಿವ ಆಯೋಗದ ವರದಿಯನ್ನು ಹೈಕೋರ್ಟ್ನಲ್ಲಿ ಮಂಡಿಸದೆ ಇರುವುದು ಭಾರಿ ಪ್ರಮಾದ~ ಎಂದು ಲಲಿತ್ ಒಪ್ಪಿಕೊಂಡರು.

ಶಂಕರ ಬಿದರಿ ಪರ ಹಾಜರಾದ ಹಿರಿಯ ವಕೀಲ ಗೋಪಾಲ ಸುಬ್ರಮಣ್ಯಂ ಅವರು ಸದಾಶಿವ ಆಯೋಗದ ವರದಿ ಬಿದರಿ ಮೇಲೆ ದೋಷಾರೋಪ ಮಾಡಿಲ್ಲ. ಕೇಂದ್ರ ಲೋಕಸೇವಾ ಆಯೋಗವು ಬಿದರಿ ಅವರ ಸೇವಾ ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದೆ ಎಂದರು. ರಾಜ್ಯದ ಡಿಜಿ ಮತ್ತು ಐಜಿ ಆಗಿ ಶಂಕರ ಬಿದರಿ ಅವರನ್ನು ನೇಮಕ ಮಾಡಿದ ಸರ್ಕಾರದ ಆದೇಶವನ್ನು ಮಾರ್ಚ್ 30ರಂದು ಹೈಕೋರ್ಟ್ ರದ್ದುಪಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.