ನಾಯಕಿಯಾಗಿ ಬೇಡಿಕೆ ಉಳಿಸಿಕೊಂಡು ಐಟಂ ಹಾಡಿನಲ್ಲಿ ಕುಣಿಯಲು ಒಪ್ಪಿಕೊಳ್ಳುವ ಬಾಲಿವುಡ್ ಬೆಡಗಿಯರ ಪಟ್ಟಿಯಲ್ಲಿ ಬಿಪಾಶಾ ಬಸು ಹೆಸರು ಸೇರ್ಪಡೆಯಾಗಿದೆ. ಬಿಪಾಶಾ `ಜೋಡಿ ಬ್ರೇಕರ್ಸ್~ ಚಿತ್ರದ ಐಟಂ ಹಾಡಿನಲ್ಲಿ ಕುಣಿಯಲು ಒಪ್ಪಿದ್ದೂ ಆಗಿದೆ ಕುಣಿದದ್ದೂ ಆಗಿದೆ. ಹಾಡಿನಲ್ಲಿ ಮೂರು ಕಾಸ್ಟ್ಯೂಮ್ಗಳಲ್ಲಿ ಕಾಣಿಸಿಕೊಳ್ಳುವ ಬಿಪ್ಸ್ ತಾನು ಹಿಂದೆಂದಿಗಿಂತಲೂ ಈ ಐಟಂ ಹಾಡಿನಲ್ಲಿ ಮಾದಕವಾಗಿ ಕಾಣಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾಳೆ. ಅಂದಹಾಗೆ ಈ ಚಿತ್ರದ ನಾಯಕಿ ಕೂಡ ಅವಳೇ. ನಾಯಕ ಮಾಧವನ್.

ಹಾಡಿನುದ್ದಕ್ಕೂ ಮೂರು ವಿಭಿನ್ನ ಕಾಸ್ಟ್ಯೂಮ್ಗಳು ಬದಲಾಗಲಿವೆ ಎಂದಿರುವ ಬಿಪಾಶಾ ಅದಕ್ಕಾಗಿ ನುರಿತ ವಸ್ತ್ರವಿನ್ಯಾಸಕರನ್ನು ಕರೆಸಿದ್ದಳಂತೆ. ಇನ್ನೊಂದು ವಿಶೇಷ ಎಂದರೆ ಈ ಹಾಡಿನ ಆರಂಭದ ಸಾಲು `ಬಿಪಾಶಾ..~ ಎಂದೇ ಇರುವುದು. `ಕಂಬಖ್ತ್ ಇಷ್ಕ್~ ಚಿತ್ರದಲ್ಲಿ ಕರೀನಾ ಕಪೂರ್ ನರ್ತಿಸಿದ್ದ ಐಟಂ ಹಾಡಿಗೆ `ಬೇಬೋ..~ ಎಂದು ಅವರ ಪೆಟ್ನೇಮ್ ಇರಿಸಲಾಗಿತ್ತು. ಅದಾದ ನಂತರ `ಶೀಲಾ..~ ಹೆಸರಿನಲ್ಲಿ ಕತ್ರೀನಾ, `ಮುನ್ನಿ..~ ಹೆಸರಿನಲ್ಲಿ ಮಲೈಕಾ ಕುಣಿದು ಜನಪ್ರಿಯರಾದರು. ಆದರೆ ಬಿಪಾಶಾಗೆ ಮಾತ್ರ ತನ್ನ ಹೆಸರಿನಲ್ಲಿಯೇ ಕುಣಿದು ಕುಪ್ಪಳಿಸುವ ಅವಕಾಶ ಸಿಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.