ಬೆಂಗಳೂರು: ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಸೋಮವಾರ ಮುಂಗಾರು ಚುರುಕಾಗಿದೆ. ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆ ಕಾರಣ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಮಂಗಳವಾರ ರಜೆ ಘೋಷಿಸಲಾಗಿದೆ.

ಮಡಿಕೇರಿ, ನಾಪೋಕ್ಲು, ಸಂಪಾಜೆ, ಭಾಗಮಂಡಲ, ಗೋಣಿಕೊಪ್ಪ, ಪೊನ್ನಂಪೇಟೆ, ಶ್ರಿಮಂಗಲ, ಸೋಮವಾರಪೇಟೆ, ಶಾಂತಳ್ಳಿ ಮತ್ತಿತರ ಪ್ರದೇಶಗಳಲ್ಲಿ ಜೋರಾಗಿ ಮಳೆ ಆಗುತ್ತಿದೆ. ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ 8 ಗಂಟೆಗೆ ಅಂತ್ಯಗೊಂಡಂತೆ 24 ಗಂಟೆಯಲ್ಲಿ 27.39 ಮಿ.ಮೀ. ಸರಾಸರಿ ಮಳೆ ದಾಖಲಾಗಿದೆ. ಜಿಲ್ಲೆಯ ಕೆಲವೆಡೆ ಮನೆ ಕುಸಿತ ಸೇರಿದಂತೆ ಆಸ್ತಿ ಪಾಸ್ತಿಗೆ ಹಾನಿ ಉಂಟಾಗಿರುವುದಾಗಿ ವರದಿಯಾಗಿದೆ.

ಹಾರಂಗಿ ಜಲಾಶಯಕ್ಕೆ ಸೋಮವಾರ ಒಂದೇ ದಿನದಲ್ಲಿ ಒಂದೂವರೆ ಅಡಿಗೂ ಹೆಚ್ಚು (1.82) ನೀರು ಬಂದು ನೀರಿನ ಮಟ್ಟವು 2,831.45 ಅಡಿಗೆ ಏರಿದೆ. ಜಲಾಶಯಕ್ಕೆ ಸೋಮವಾರ 1,091 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 388 ಕ್ಯೂಸೆಕ್ ಇತ್ತು.

ಕೆಆರ್ಎಸ್: ಮಂಡ್ಯ ಜಿಲ್ಲೆಯ ಜೀವನಾಡಿ ಕೆಆರ್ಎಸ್ ಅಣೆಕಟ್ಟೆಯ ಒಳಹರಿವು ಸೋಮವಾರ 3,223 ಕ್ಯೂಸೆಕ್ಗೆ ಇಳಿದಿದೆ.

ಜಲಾಶಯದ ಗರಿಷ್ಠ ಮಟ್ಟ 124.80 ಅಡಿ. ಸೋಮವಾರ ನೀರಿನ ಮಟ್ಟ 79.90 ಅಡಿಗೆ ಹೆಚ್ಚಿದೆ. ಕಳೆದ ವರ್ಷ ಇದೇ ದಿನ 73.50 ಅಡಿ ಇತ್ತು. ಹೊರಹರಿವು 1,195 ಕ್ಯೂಸೆಕ್ ಇದೆ.

ಕಬಿನಿ: ಎಚ್.ಡಿ. ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದ ನೀರಿನ ಮಟ್ಟ 24 ಗಂಟೆಗಳಲ್ಲಿ 2 ಅಡಿ ಹೆಚ್ಚಿ 2,276 ಅಡಿಗೆ ಏರಿದೆ.

ಜಲಾಶಯದ ಗರಿಷ್ಠ ಮಟ್ಟ 2,284 ಅಡಿ ತಲುಪಲು 8 ಅಡಿ ಬಾಕಿ ಇದೆ. ಮುಂಗಾರು ಆರಂಭವಾದಂದಿನಿಂದ ಇದುವರೆಗೆ 31 ಅಡಿ ನೀರು ಬಂದಿದೆ. ಸೋಮವಾರ ಒಳ ಹರಿವು16 ಸಾವಿರ ಕ್ಯೂಸೆಕ್ ಇದ್ದು, ಕುಡಿಯುವ ನೀರು, ವ್ಯವಸಾಯ ಹಾಗೂ ವಿದ್ಯುತ್ ಉತ್ಪಾದನೆಗಾಗಿ 5 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ.

ನೀರಿನ ಒಳಹರಿವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜೂನ್ 25ರಂದು ಮುಖ್ಯ ಗೇಟ್ನಿಂದ ನೀರನ್ನು ಹೊರಬಿಡುವ ಸಾಧ್ಯತೆ ಇದೆ ಎಂದು ಕಬಿನಿ ಜಲಾಶಯದ ಅಧಿಕಾರಿಗಳು ತಿಳಿಸಿದ್ದಾರೆ.

ಮನೆಗಳಿಗೆ ಹಾನಿ: ಎರಡು ದಿನಗಳಿಂದ ಕರಾವಳಿಯಲ್ಲಿ ಇಳಿಮುಖವಾಗಿದ್ದ ಮಳೆ ಸೋಮವಾರ ಮತ್ತೆ ಬಿರುಸುಗೊಂಡಿದ್ದು, ಸಂಜೆ ವೇಳೆಗೆ ಗಾಳಿ ಸಹಿತ ಭಾರಿ ಮಳೆ ಸುರಿದಿದೆ. ಮಂಗಳೂರು ನಗರದ ಬೋಳಾರ ಮುಳಿಹಿತ್ಲಿನಲ್ಲಿ ಯಮುನಾ ಎಂಬುವರ ಮನೆ ಮೇಲೆ ಬೃಹತ್ ಮಾವಿನ ಮರ ಬಿದ್ದು ಭಾರಿ ಹಾನಿ ಸಂಭವಿಸಿದೆ. ತಾಲ್ಲೂಕಿನ ಮುನ್ನೂರು ಗ್ರಾಮದಲ್ಲಿ ಅಮೀನಮ್ಮ ಎಂಬುವವರ ಮನೆ ಹಾಗೂ ಪಾವೂರು ಗ್ರಾಮದ ಜುಬೇದ ಎಂಬುವವರ ಮನೆಗೆ ಸಹ ಮಳೆಯಿಂದ ಭಾರಿ ಹಾನಿ ಸಂಭವಿಸಿದೆ.

ಘಟ್ಟ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ನದಿಗಳಲ್ಲಿ ನೀರಿನ ಹರಿವು ಹೆಚ್ಚತೊಡಗಿದೆ. ಉಡುಪಿ ಜಿಲ್ಲೆಯಲ್ಲಿ ಸಹ ಸೋಮವಾರದಿಂದ ಮಳೆ ಮತ್ತೆ ಬಿರುಸುಗೊಂಡಿದ್ದು, ಯಾವುದೇ ಹಾನಿಯ ವರದಿಯಾಗಿಲ್ಲ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಮೂಡಿಗೆರೆ, ಕಳಸಗಳಲ್ಲಿ ಸಾಧಾರಣೆ ಮಳೆ ಸುರಿದಿದ್ದು, ಹೆಚ್ಚಿನ ಹಾನಿಯಾಗಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಬಿರುಸುಗೊಂಡಿದ್ದು ಲಿಂಗನಮಕ್ಕಿ, ಭದ್ರಾ ಜಲಾಶಯಗಳ ಒಳ ಹರಿವು ಏರಿಕೆ ಕಂಡಿದೆ.
ಸೋಮವಾರ ಬೆಳಿಗ್ಗೆ 8ಗಂಟೆಗೆ ಲಿಂಗನಮಕ್ಕಿ ಜಲಾಶಯದ ನೀರಿನಮಟ್ಟ 1,760.80 ಅಡಿ ಇತ್ತು. ಒಳಹರಿವು 8,326 ಕ್ಯೂಸೆಕ್ಗೆ ಏರಿಕೆ ಆಗಿದೆ. ಭಾನುವಾರ ಜಲಾಶಯದಲ್ಲಿ 6,196 ಕ್ಯೂಸೆಕ್ ಒಳಹರಿವು ಇತ್ತು.

ಭದ್ರಾ ಜಲಾಶಯದಲ್ಲಿ ಸೋಮವಾರ ಬೆಳಿಗ್ಗೆ 8ಕ್ಕೆ ನೀರಿನಮಟ್ಟ 125.30 ಅಡಿ ಇತ್ತು. ಒಳಹರಿವು 4,004 ಕ್ಯೂಸೆಕ್ಗೆ ಹೆಚ್ಚಿದೆ.

ತಾಲ್ಲೂಕುವಾರು ಮಳೆ ವಿವರ: ತೀರ್ಥಹಳ್ಳಿ -49.4 ಮಿ.ಮೀ, ಸಾಗರ -24 ಮಿ.ಮೀ, ಸೊರಬ -21.2, ಹೊಸನಗರ -12.6, ಶಿಕಾರಿಪುರ -6.6 ಮಿಮೀ, ಭದ್ರಾವತಿ -4 ಮಿ.ಮೀ, ಶಿವಮೊಗ್ಗ -3.6 ಮಿ.ಮೀ ಮಳೆ ಆಗಿದೆ.

ಆಲಮಟ್ಟಿ ಜಲಾಶಯ: ಆಲಮಟ್ಟಿ ಜಲಾಶಯಕ್ಕೆ ಸೋಮವಾರ ಒಳಹರಿವು ಸ್ವಲ್ಪ ಹೆಚ್ಚಾಗಿದ್ದು ನೀರಿನ ಮಟ್ಟ 510.5 ಮೀಟರ್ ಆಗಿದೆ. ಒಳಹರಿವು 20,450 ಕ್ಯೂಸೆಕ್ ಇತ್ತು. 123 ಟಿಎಂಸಿ ಅಡಿ ಸಾಮರ್ಥ್ಯದ ಈ ಜಲಾಶಯದಲ್ಲಿ 32.50 ಟಿಎಂಸಿ ನೀರು ಸಂಗ್ರಹವಾಗಿದೆ.

ವಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಆಲಮೇಲದಲ್ಲಿ ಈ ಮುಂಗಾರಿನ ಮೊದಲ ಮಳೆ ಸುರಿದಿದ್ದು, ರೈತರು ಸಂತಸಗೊಂಡಿದ್ದಾರೆ.

ತುಂಗಭದ್ರಾ ಜಲಾಶಯದ ಒಳಹರಿವು ಸೋಮವಾರ ಇಳಿಮುಖವಾಗಿದೆ. ನೀರಿನ ಮಟ್ಟ 1590.27 ಅಡಿ (ಗರಿಷ್ಠ: 1633 ಅಡಿ) ಗಳಷ್ಟಿತ್ತು. ಜಲಾಶಯದ ಒಳಹರಿವು 6,970 ಕ್ಯೂಸೆಕ್ ಇದ್ದು ಹೊರಹರಿವು 100 ಕ್ಯೂಸೆಕ್ ಇತ್ತು.ಉತ್ತರ ಕರ್ನಾಟಕ ಭಾಗದ ವಿಜಾಪುರ, ಬಾಗಲಕೋಟೆ, ಬೆಳಗಾವಿ, ಹಾವೇರಿ, ಗದಗ, ಧಾರವಾಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸೋಮವಾರ ಚದುರಿದಂತೆ ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.