ಶುಕ್ರವಾರ, ಜೂನ್ 18, 2021
24 °C

ಬಿರುಸಿನ ವ್ಯಾಯಾಮ ಜ್ವರ, ನಿಶ್ಯಕ್ತಿಗೆ ಮದ್ದು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |


ಲಂಡನ್‌ (ಐಎಎನ್‌ಎಸ್‌): ಬೊಜ್ಜು ಕರಗಿಸುವುದಕ್ಕಷ್ಟೇ ವ್ಯಾಯಾಮ ಅವಶ್ಯಕ ಎಂದು ಅನೇಕರು ತಿಳಿದಿರುತ್ತಾರೆ. ಆದರೆ ಬೆವರಿಳಿಯು­ವಂತಹ ಚಟುವಟಿಕೆ ಮಾಡುವುದ­ರಿಂದ ಜ್ವರ ಮತ್ತು  ಜ್ವರದಿಂದಾಗುವ ನಿಶ್ಯಕ್ತಿ ಕಡಿಮೆಯಾಗುತ್ತದೆ ಎಂದು ಹೊಸ ಅಧ್ಯಯನ ತಿಳಿಸಿದೆ. 

 

ಹೆಚ್ಚು ಶ್ರಮಭರಿತ ವ್ಯಾಯಾಮಗ­ಳಾದ ಓಟ, ಸೈಕ್ಲಿಂಗ್‌ ಮತ್ತು ಬಿರುಸಿನ ನಡೆದಾಟಗಳನ್ನು ಮಾಡುವುದರಿಂದ ಜ್ವರವನ್ನು ತಡೆಗಟ್ಟ­ಬ­ಹುದು ಎಂದು ಈ ಕುರಿತು ಅಧ್ಯಯನ ನಡೆಸಿದ ‘ಲಂಡನ್‌ ಸ್ಕೂಲ್‌ ಆಫ್‌ ಹೈಜೆನ್‌ ಎಂಡ್‌ ಮೆಡಿಸಿನ್‌’ನಲ್ಲಿನ ತಜ್ಞರು ತಿಳಿಸಿದ್ದಾರೆ. 

 

ಚಳಿಗಾಲದಲ್ಲಿ ವೈರಲ್ ಜ್ವರದಿಂದ ಬಳಲುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಆದರೆ ಈ ಸಂಬಂಧ ಕಳೆದ ವರ್ಷ ನಡೆಸಿದ ಸಮೀಕ್ಷೆ ಪ್ರಕಾರ ಜ್ವರದಿಂದ ಬಳಲುವವರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿರುವುದು ಕಂಡುಬಂದಿದೆ. 

 

ಆರೋಗ್ಯ ಕಾಪಾಡಿಕೊಳ್ಳಲು ಇದಕ್ಕೆ ವ್ಯಾಯಮದ ಬಗ್ಗೆ ಅರಿವು ಮೂಡಿರು­ವುದೇ ಕಾರಣ ಎಂದು ಸಂಶೋಧಕ ಆಲ್ಮಾ ಅಡ್ಲರ್‌ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.