ಬುಧವಾರ, ಏಪ್ರಿಲ್ 14, 2021
24 °C

ಬಿಸಿಲ ಝಳ: ಲೋಡ್ ಶೆಡ್ಡಿಂಗ್ ಬರೆ

ಚಿದಂಬರಪ್ರಸಾದ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಬಿಸಿಲು ನೆತ್ತಿಯ ಸುಡುತ್ತಿದ್ದರೆ, ಗಾಳಿ ಬೀಸುವ ಫ್ಯಾನ್‌ಗಳು ತಿರುಗದಂತಾಗಿವೆ. ಸುರಿಯುವ ಬೆವರಿನ ಮಧ್ಯೆ, ಮೊಂಬತ್ತಿಯ ಬೆಳಕಿ ನಲ್ಲಿ ಪಠ್ಯಪುಸ್ತಕಗಳನ್ನು ತಿರುವಿ ಹಾಕು ವುದು ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿದೆ.ಮಾರ್ಚ್ ಅರ್ಧ ತಿಂಗಳು ಮುಗಿದಿದ್ದು, ಮಕ್ಕಳಿಗೆ ಪರೀಕ್ಷೆಯ ಚಿಂತೆ ಕಾಡುತ್ತಿದೆ. ಅಂಕ ಗಳಿಸುವ ಪೈಪೋಟಿಗಾಗಿ ಓದಲೇ ಬೇಕು. ಹೀಗಾಗಿ ಇದೀಗ ವಿದ್ಯಾರ್ಥಿಗಳೆಲ್ಲ ಅಭ್ಯಾಸದಲ್ಲಿ ತಲ್ಲೆನರಾಗಿದ್ದಾರೆ. ಹಗಲು ಹೊತ್ತಿನಲ್ಲಿ ಶಾಲೆ ಮುಗಿಸಿ ಬರುವ ಮಕ್ಕಳು, ರಾತ್ರಿ ಓದಲು ಕುಳಿತುಕೊಳ್ಳುವ ಹೊತ್ತಿಗೆ ವಿದ್ಯುತ್ ದೀಪಗಳ ಬಂದಾಗುತ್ತಿವೆ. ಫ್ಯಾನ್‌ಗಳು ತಿರುಗುವುದನ್ನು ನಿಲ್ಲಿಸುತ್ತವೆ.ಹೌದು, ಕಳೆದು ಹದಿನೈದು ದಿನ ಗಳಿಂದ ನಗರದಲ್ಲಿ ವಿದ್ಯುತ್ ಲೋಡ್ ಶೆಡ್ಡಿಂಗ್ ದಿನದಿಂದ ದಿನಕ್ಕೆ ಹೆಚ್ಚು ತ್ತಿದ್ದು, ವಿದ್ಯಾರ್ಥಿಗಳ ಗೋಳು ಒಂದು ರೀತಿಯದ್ದಾದರೆ, ಜನರ ಪಾಡು ಕೇಳುವವರೇ ಇಲ್ಲದಂತಾಗಿದೆ. ಜೆಸ್ಕಾಂ ನಿಂದ ಲೋಡ್ ಶೆಡ್ಡಿಂಗ್‌ನ ಯಾವುದೇ ಸೂಚನೆ ಇರದಿದ್ದರೂ, ಪಾವರ್ ಕಟ್ ಮಾತ್ರ ನಿರಂತರವಾಗಿ ನಡೆದೇ ಇದೆ. ಬೆಳಿಗ್ಗೆ, ರಾತ್ರಿ ವಿದ್ಯುತ್ ಪೂರೈಕೆ ಕಡಿತ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ಅಭ್ಯಾಸ ಮಾಡುವುದಕ್ಕೂ ತೊಂದರೆ ಆಗುತ್ತಿದೆ.ಈಗಾಗಲೇ ದ್ವಿತೀಯ ಪಿಯುಸಿ, ಎಸ್ಸೆಸ್ಸೆಲ್ಸಿ ಪರೀಕ್ಷೆಗಳ ವೇಳಾಪಟ್ಟಿಯೂ ಪ್ರಕಟವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಅಭ್ಯಾಸದ್ದೇ ಚಿಂತೆ. ಪುಸ್ತಕಗಳು, ನೋಟ್ಸ್‌ಗಳು, ಕೈಪಿಡಿಗಳಲ್ಲಿಯೇ ಮುಳುಗಿದ್ದಾರೆ. ಶಾಲೆಯಲ್ಲಿ ಪಠ್ಯಕ್ರಮ ಮುಗಿದಿರುವುದರಿಂದ ಎಸ್ಸೆಸ್ಸೆಲ್ಸಿ, ಪಿಯುಸಿ ವಿದ್ಯಾರ್ಥಿ ಗಳು ಭರದ ತಯಾರಿಯಲ್ಲಿ ನಿರತರಾ ಗಿದ್ದಾರೆ.ಹಗಲು ಹೊತ್ತಿನಲ್ಲಿ ವಿದ್ಯುತ್ ಇರಲಿ, ಬಿಡಲಿ ಈ ವಿದ್ಯಾರ್ಥಿಗಳಿಗೆ ತೊಂದರೆ ಆಗಿಲ್ಲ. ದೊಡ್ಡ ಮರದ ಕೆಳಗೋ, ಉದ್ಯಾನದಲ್ಲಿಯೋ ಕುಳಿತು ಪಾಠ ಮಾಡುವ ವಿದ್ಯಾರ್ಥಿಗಳಿಗೆ, ರಾತ್ರಿ ಆಯಿತೆಂದರೆ ತೊಂದರೆ ಆರಂಭವಾಗುತ್ತದೆ. ವಿಪರೀತ ಸೆಖೆ, ಸೊಳ್ಳೆಗಳ ಕಾಟದ ಮಧ್ಯೆ ಓದುವುದೇ ದುಸ್ತರವಾಗುತ್ತಿದೆ. ರಾತ್ರಿ ಹೊತ್ತು ವಿದ್ಯುತ್ ಕಡಿತ ಆಗುತ್ತಿರುವುದೇ ವಿದ್ಯಾರ್ಥಿಗಳ ಬವಣೆಗೆ ಕಾರಣ ವಾಗಿದೆ.“ರಾತ್ರಿ ಓದಬೇಕ ಅಂದ್ರ ಆಗದಂಗ ಆಗೇತ್ರಿ. ದ್ವಾಮಿ ಒಂದ ಕಡೆ, ಝಳಾ ಒಂದ ಕಡೆ. ಕರೆಂಟ್ ಇರೂದುಲ್ರಿ. ಪರೀಕ್ಷಾದಾಗ ಓದೋದ ಹೆಂಗ ಅನ್ನೋದ ತಿಳಿವಾಲ್ತರಿ” ಎನ್ನುವುದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ರಮೇಶನ ನೋವು.ಹಗಲು ಉರಿಯುವ ದೀಪ: ಯಾದಗಿರಿ ನಗರದಲ್ಲಿ ವಿಚಿತ್ರವೆಂದರೆ ಹಗಲು ಹೊತ್ತಿನಲ್ಲೂ ಬೀದಿ ದೀಪಗಳು ಉರಿಯುತ್ತಲೇ ಇರುತ್ತವೆ. ಬೆಳಕು ಹರಿಯುತ್ತಿದ್ದಂತೆಯೇ ಬಂದ್ ಆಗಬೇಕಾಗಿದ್ದ ವಿದ್ಯುತ್ ದೀಪಗಳು ಮಧ್ಯಾಹ್ನವಾದರೂ ಹಾಗೆಯೇ ಉರಿಯುತ್ತವೆ. ಆದರೆ ಕತ್ತಲಾ ದೊಡನೆ ಬೆಳಗಬೇಕಾದ ವಿದ್ಯುತ್ ದೀಪಗಳು ಆರಿ ಬಿಡುತ್ತವೆ.ಹಗಲು ಹೊತ್ತಿನಲ್ಲಿ ವಿದ್ಯುತ್ ದೀಪಗಳು ಉರಿಯುತ್ತಿರುವ ಬಗ್ಗೆ ಅನೇಕ ಬಾರಿ ನಗರಸಭೆಯ ಸಾಮಾನ್ಯ ಸಭೆಗಳಲ್ಲೂ ಬಿಸಿಬಿಸಿಯಾದ ಚರ್ಚೆ ನಡೆದಿದೆ. ಆದರೂ ವ್ಯವಸ್ಥೆ ಮಾತ್ರ ಸುಧಾರಣೆ ಆಗಿಲ್ಲ. ಈ ಬಗ್ಗೆ ಜೆಸ್ಕಾಂ ನವರು ಅಷ್ಟಾಗಿ ತಲೆ ಕೆಡಿಸಿಕೊಳ್ಳು ತ್ತಿಲ್ಲ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಹಗಲು ಹೊತ್ತಿನಲ್ಲಿ ಉರಿಯುವ ದೀಪಗಳನ್ನು ಸೂಕ್ತ ಕಾಲದಲ್ಲಿ ಬಂದ್ ಮಾಡಬೇಕು. ಇದರಿಂದ ವಿದ್ಯುತ್ ವ್ಯರ್ಥವಾಗುವುದನ್ನು ತಪ್ಪಿಸಿ ದಂತಾಗುತ್ತದೆ. ಜೊತೆಗೆ ರಾತ್ರಿ ಹೊತ್ತು ಅದೇ ವಿದ್ಯುತ್ ನೀಡಲು ಅನುಕೂಲವಾಗಲಿದೆ ಎಂದು ನಗರದ ಜನರು ಹೇಳುತ್ತಾರೆ.ಕಾರ್ಖಾನೆಗಳಿಗೂ ತೊಂದರೆ: ಸೂಚನೆ ಅಥವಾ ನಿರ್ದಿಷ್ಟ ಸಮಯ ವನ್ನು ನಿಗದಿ ಪಡಿಸದೇ ವಿದ್ಯುತ್ ಕಡಿತ ಮಾಡುತ್ತಿರುವುದು ಕಾರ್ಖಾನೆ ಗಳಿಗೂ ತೊಂದರೆಯನ್ನು ಉಂಟು ಮಾಡಿದೆ. ನಗರದಲ್ಲಿ ಅನೇಕ ರೈಸ್ ಮಿಲ್ ಸೇರಿದಂತೆ ಹಲವಾರು ಉದ್ಯಮ ಗಳಿದ್ದು, ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ತೊಂದರೆ ಅನುಭವಿಸಬೇಕಾಗಿದೆ.ಹಗಲು ಹೊತ್ತಿನಲ್ಲೂ ಕೇವಲ ಎರಡು ಗಂಟೆಯಷ್ಟು ಮಾತ್ರ ವಿದ್ಯುತ್ ಸಿಗುತ್ತಿದೆ. ಇದರಿಂದ ಕಾರ್ಖಾನೆಗಳು ಉತ್ಪಾದನೆ ಮಾಡು ವುದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಉದ್ಯಮಿಗಳು ನಷ್ಟ ಅನುಭವಿಸು ವಂತಾಗಿದೆ. ವಿದ್ಯುತ್ ಕಡಿತಕ್ಕೆ ಸಮಯ ನಿಗದಿ ಮಾಡಬೇಕು. ಹಗಲು ಹೊತ್ತಿನಲ್ಲಿ ಕನಿಷ್ಠ ಐದಾರು ಗಂಟೆ ಯಾದರೂ ವಿದ್ಯುತ್ ನೀಡಿದರೆ ಒಳಿತು ಎನ್ನುತ್ತಾರೆ ಯಾದಗಿರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ವಿಶ್ವನಾಥ ಆವಂತಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.