ಒಡೆನ್ಸ್: ಭಾರತದ ಸಾತ್ವಿಕ್ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ, ಡೆನ್ಮಾರ್ಕ್ ಓಪನ್ ಸೂಪರ್ 750 ಟೂರ್ನಿಯ ಸೆಮಿಫೈನಲ್ನಲ್ಲಿ ನಿರಾಸೆ ಅನುಭವಿಸಿದರು. ಜಪಾನ್ನ ತಕುರೊ ಹೊಯಿ– ಯುಗೊ ಕೊಬಯಾಶಿ ಜೋಡಿ ಮೂರು ಗೇಮ್ಗಳ ಸೆಣಸಾಟದಲ್ಲಿ ಗೆದ್ದು ಫೈನಲ್ ತಲುಪಿತು.

ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿರುವ ಜಪಾನ್ನ ಜೋಡಿ ಶುಕ್ರವಾರ ನಡೆದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ 23–21, 18–21, 21–16 ರಿಂದ ಭಾರತದ ಜೋಡಿಯ ಮೇಲೆ 68 ನಿಮಿಷಗಳಲ್ಲಿ ಜಯಗಳಿಸಿತು. ಇದರಿಂದ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿತು.

ಹಾಂಗ್ಕಾಂಗ್ ಸೂಪರ್ 500 ಟೂರ್ನಿ ಮತ್ತು ಚೀನಾ ಮಾಸ್ಟರ್ಸ್ ಸೂಪರ್ 750 ಟೂರ್ನಿಯಲ್ಲೂ ತಕುರೊ– ಕೊಬಯಾಶಿ ಜೋಡಿ ಫೈನಲ್ ತಲುಪಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.