ಪಟ್ನಾ (ಐಎಎನ್ಎಸ್): ಬಿಹಾರದ ಮೂರು ಜಿಲ್ಲೆಗಳಲ್ಲಿ ಹದಿನೈದು ದಿನಗಳಲ್ಲಿ ನೂರಕ್ಕೂ ಹೆಚ್ಚು ಮಕ್ಕಳನ್ನು ಬಲಿ ತೆಗೆದುಕೊಂಡ ನಿಗೂಢ ಕಾಯಿಲೆಯ `ಅಕ್ಯುಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್~(ಎಇಎಸ್) ಎಂಬ ಮಿದುಳು ಸಂಬಂಧಿ ರೋಗ ಎಂದು ಸರ್ಕಾರ ದೃಢಪಡಿಸಿದೆ.

ರೋಗ ವ್ಯಾಪಿಸಿರುವ ಜಿಲ್ಲೆಗಳಲ್ಲಿ ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಕಟ್ಟೆಚ್ಚರದಿಂದ ಇರುವಂತೆ ಸೂಚಿಸಲಾಗಿದೆ. `ಈ ಮಿದುಳು ರೋಗವನ್ನು ಗುಣಪಡಿಸಲು ಸಾಧ್ಯವಿದೆ~ ಎಂದು ಆರೋಗ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಮುಜಾಫರ್ಪುರ, ಗಯಾ ಮತ್ತು ಪಟ್ನಾ ಜಿಲ್ಲೆಗಳಲ್ಲಿ ಹದಿನೈದು ದಿನಗಳೊಳಗೆ ಈ ರೋಗಕ್ಕೆ 109 ಮಕ್ಕಳು ಬಲಿಯಾಗಿದ್ದಾರೆ. ಭಾನುವಾರದ ವರೆಗೆ `ಮಕ್ಕಳ ಸಾವಿಗೆ ಮಿದುಳು ರೋಗ ಕಾರಣ~ ಎಂಬುದನ್ನು ಸಚಿವರು ಸೇರಿದಂತೆ ಸರ್ಕಾರದ ಉನ್ನತಮಟ್ಟದ ಅಧಿಕಾರಿಗಳು ತಳ್ಳಿ ಹಾಕಿದ್ದರು. `ಸಣ್ಣ ವಿಷಯವನ್ನು ದೊಡ್ಡದಾಗಿ ಮಾಡುವ ವಿರೋಧ ಪಕ್ಷದವರ ತಂತ್ರ ಇದು~ ಎಂದು ಅಲ್ಲಗಳೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.