ಗುರುವಾರ , ಮೇ 19, 2022
24 °C

ಬೀದಿ ಕಾಮಣ್ಣರ ಕಾಟ ತಪ್ಪಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೆ. ಪಿ. ನಗರ 4ನೇ ಹಂತ 16 ಮತ್ತು 17ನೇ ಕ್ರಾಸಿನ ಸರ್ಕಲ್ ಹತ್ತಿರ, ಬೇಕರಿ ಹತ್ತಿರ, ರಿಯಲ್ ಎಸ್ಟೇಟ್ ಬಳಿ ಬೀದಿ ಕಾಮಣ್ಣರ ಕಾಟ ಶುರುವಾಗಿದೆ.ಇವರು ರಸ್ತೆಯಲ್ಲಿ ಓಡಾಡುವ ಹೆಣ್ಣುಮಕ್ಕಳು ಮತ್ತು ಕಾಲ್‌ಸೆಂಟರ್ ಹುಡುಗಿಯರನ್ನು ಚುಡಾಯಿಸುತ್ತಾರೆ. ಕೇಳಲು ಹೋದರೆ ಸಿಗರೇಟ್ ಹೊಗೆಯನ್ನು ಮುಖಕ್ಕೆ ಬೀರುತ್ತಾರೆ.ಇಲ್ಲಿರುವ ಕೆಲ ರಿಯಲ್ ಎಸ್ಟೇಟ್ ದಂಧೆ ನಡೆಸುವರ ಕಾಟದಿಂದ ಮನೆ ಮಾಲಿಕರು ಹಾಗೂ ಬಾಡಿಗೆದಾರರು ಬೇಸತ್ತು ಹೋಗಿರುತ್ತಾರೆ. ಬಲವಂತವಾಗಿ ಕಮೀಷನ್ ವಸೂಲಿ ಮಾಡುತ್ತಾರೆ. ಹೊರ ರಾಜ್ಯದ ಹುಡುಗರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಾರೆ. ಹೊರ ರಾಜ್ಯದ ಹುಡುಗರು, ಹುಡುಗಿಯರು ಈ ಬಡಾವಣೆಯಲ್ಲಿ ಜಾಸ್ತಿ ಇರುವುದರಿಂದ ಹಲವು ಅನೈತಿಕ ಚಟುವಟಿಕೆಗಳು ಇಲ್ಲಿ ಹೆಚ್ಚು. ಇಲ್ಲಿ ಯಾವುದೇ ಬೀಟ್ ಪೊಲೀಸರು ಗಸ್ತು ತಿರುಗುವುದಿಲ್ಲ.ರಾತ್ರಿಯಾದರೆ ಹುಡುಗರ ಪುಂಡಾಟ ಜಾಸ್ತಿಯಾಗಿದೆ. ಮೆಡಿಕಲ್ ಸ್ಟೋರ್, ಬೇಕರಿ ಹತ್ತಿರ, ಅಂಗಡಿಗಳ ಹತ್ತಿರ ಬೀದಿ ಕಾಮಣ್ಣರದೇ ದರ್ಬಾರು. ಪೊಲೀಸ್ ಆಯುಕ್ತರು ಮತ್ತು ಡಿಸಿಪಿಯವರು ಈ ಬಡಾವಣೆಗೆ ಮಫ್ತಿ ಪೊಲೀಸರನ್ನು ನಿಯೋಜಿಸಿ ಅಕ್ರಮಗಳನ್ನು ತಪ್ಪಿಸಿ ಬಡಾವಣೆಯ ಹಿರಿಯ ನಾಗರಿಕರಿಗೆ, ನೊಂದ ಮಹಿಳೆಯರಿಗೆ ನ್ಯಾಯ ದೊರಕಿಸಿ ಕೊಡಬೇಕಾಗಿ ವಿನಂತಿ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.