ಮೆಲ್ಬರ್ನ್ (ಪಿಟಿಐ): ಬುಕ್ಕಿ ಮಜರ್ ಮಾಜಿದ್ ಜೊತೆಗೆ ತಮ್ಮ ಕ್ರಿಕೆಟ್ ಆಟಗಾರರ ಸಂಪರ್ಕವಿತ್ತು ಎನ್ನುವ ಆರೋಪವನ್ನು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಸಾರಾಸಗಟಾಗಿ ತಳ್ಳಿಹಾಕಿದೆ.

`ಪ್ರತಿಯೊಂದು ಸರಣಿಯ ಸಂದರ್ಭದಲ್ಲಿ ಆಸ್ಟ್ರೇಲಿಯಾ ತಂಡದ ಎಲ್ಲ ಆಟಗಾರರ ಮೇಲೆ ನಿಗಾ ಇಡಲಾಗುತ್ತಿದೆ. ತಂಡದ ಆಡಳಿತದ ಅನುಮತಿ ಇಲ್ಲದೆಯೇ ಆಟಗಾರರು ಎಲ್ಲಿಯೂ ಹೋಗುವುದಿಲ್ಲ. ಅನುಮಾನಾಸ್ಪದ ವ್ಯಕ್ತಿಗಳು ಸಂಪರ್ಕಿಸಿದಾಗಲೆಲ್ಲ ನಮ್ಮ ಕ್ರಿಕೆಟಿಗರು ಮಾಹಿತಿ ನೀಡುತ್ತಾ ಬಂದಿದ್ದಾರೆ~ ಎಂದು ಸಿಎ ಮುಖ್ಯಸ್ಥ ಜೇಮ್ಸ ಸುತರ್ಲೆಂಡ್ ಅವರು ಸ್ಪಷ್ಟಪಡಿಸಿದ್ದಾರೆ.

ಲಂಡನ್ನಲ್ಲಿ ನಡೆಯುತ್ತಿರುವ ಪಾಕಿಸ್ತಾನ ಕ್ರಿಕೆಟಿಗರ ವಿರುದ್ಧದ ಸ್ಪಾಟ್ ಫಿಕ್ಸಿಂಗ್ ಆರೋಪದ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಲಯದ ಮುಂದೆ ಬಂದ ಅಂಶಗಳನ್ನು ಸಿಎ ತಳ್ಳಿಹಾಕಿದೆ. ಮಾರುವೇಷದ ಕಾರ್ಯಾಚರಣೆ ಸಂದರ್ಭದಲ್ಲಿ ಪತ್ರಕರ್ತನ ಮುಂದೆ ಬುಕ್ಕಿ ಹೇಳಿಕೊಂಡಿರುವ ಅಂಶಗಳು ಸುಳ್ಳು ಎಂದು ಅದು ತಿಳಿಸಿದೆ.

ಕಾಂಗರೂಗಳ ನಾಡಿನ ಯಾವುದೇ ಆಟಗಾರನನ್ನು ಈ ಬುಕ್ಕಿ ಸಂಪರ್ಕಿಸಿದ್ದರೆ ಅದನ್ನು ಕ್ರಿಕೆಟಿಗರೇ ನೇರವಾಗಿ ತಂಡದ ಆಡಳಿತಕ್ಕೆ ಇಲ್ಲವೆ ಕ್ರಿಕೆಟ್ ಮಂಡಳಿಗೆ ತಿಳಿಸುತ್ತಿದ್ದರು. ಅಂಥ ಯಾವುದೇ ಅಂಶವು ಸಿಎ ಗಮನಕ್ಕೆ ಬಂದಿಲ್ಲವೆಂದು ಅವರು ವಿವರಿಸಿದ್ದಾರೆ.

`ಆಸ್ಟ್ರೇಲಿಯಾ ಕ್ರಿಕೆಟಿಗರು ಪಂದ್ಯದ ಯಾವುದೇ ಒಂದು ಹಂತದಲ್ಲಿ ಬುಕ್ಕಿ ನಿಗದಿ ಮಾಡಿದಂತೆ ಆಡುವಲ್ಲಿ ಖ್ಯಾತರು. ಪಂದ್ಯದ ನಿರ್ಧಿಷ್ಟ ಅವಧಿಯಲ್ಲಿ ಎಷ್ಟು ರನ್ಗಳು ಬರಬೇಕೆಂದು ಈ ತಂಡದ ಆಟಗಾರರನ್ನು ಫಿಕ್ಸ್ ಮಾಡಬಹುದು~ ಎಂದು ಬುಕ್ಕಿ ವಿಚಾರಣೆ ಸಂದರ್ಭದಲ್ಲಿ ಹೇಳಿ ಕೊಂಡಿದ್ದಾನೆ. ನ್ಯಾಯಾಲಯದ ಮುಂದೆ ಈ ವಿವರವು ಬಂದಿದ್ದು ಪತ್ರಿಕೆಗಳಲ್ಲಿಯೂ ವರದಿಯಾಗಿದೆ. ಅದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿರುವ ಸಿಎ `ಇದು ಸುಳ್ಳು. ನಮ್ಮ ಆಟಗಾರರ ಜೊತೆಗೆ ಈ ಬುಕ್ಕಿ ಸಂಪರ್ಕ ಹೊಂದಿಲ್ಲ~ ಎಂದು ಸ್ಪಷ್ಟಪಡಿಸಿದ್ದಾರೆ.

`ಆರೋಪಗಳನ್ನು ಯಾವುದೇ ಸಾಕ್ಷಿ ಇಲ್ಲದೆಯೇ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಕ್ರಿಕೆಟ್ ಆಟವು ಭ್ರಷ್ಟಾಚಾರದಿಂದ ಮುಕ್ತವಾಗಿರಬೇಕು. ಆ ನಿಟ್ಟಿನಲ್ಲಿ ಸಿಎ ಸದಾ ಪ್ರಯತ್ನ ಮಾಡುತ್ತಿದೆ. ಒಂದು ವೇಳೆ ಈ ಆರೋಪಗಳು ನಿಜವಾದವೆಂದು ಖಾತ್ರಿಯಾದರೆ ಅಗತ್ಯ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ~ ಎಂದು ಭರವಸೆ ನೀಡಿದ್ದಾರೆ.

`ತಪ್ಪಿತಸ್ಥ ಆಟಗಾರರ ವಿರುದ್ಧ ಆಜೀವ ನಿಷೇಧ ಹೇರುವ ಧೈರ್ಯವೂ ಇದೆ. ಬುಕ್ಕಿ ಮಾಜಿದ್ ಮಾಡಿರುವ ಆರೋಪಗಳ ಕುರಿತು ಸೂಕ್ತ ತನಿಖೆ ನಡೆಸುವುದಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ಕೇಳಿಕೊಳ್ಳಲಾಗುವುದು~ ಎಂದ ಜೇಮ್ಸ `ಮಾಜಿದ್ ಮನಬಂದಂತೆ ಮಾತನಾಡುವ ವ್ಯಕ್ತಿ. ಎದುರಿಗೆ ಇದ್ದವರನ್ನು ನಂಬಿಸಲು ಎಷ್ಟಾದರೂ ಸುಳ್ಳು ಹೇಳುತ್ತಾನೆ. ತನಗೆ ಹಾಲಿವುಡ್ ಸ್ಟಾರ್ ಬ್ರಾಡ್ ಪಿಟ್ ಹಾಗೂ ಟೆನಿಸ್ ತಾರೆ ರೋಜರ್ ಫೆಡರರ್ ಕೂಡ ಗೊತ್ತೆಂದು ಹೇಳುವ ಮಟ್ಟಕ್ಕೆ ಹೋಗಿದ್ದಾನೆ. ಇದನ್ನು ನಂಬುವುದಕ್ಕೆ ಸಾಧ್ಯವೇ?~ ಎಂದು ಮರು ಪ್ರಶ್ನೆ ಎಸೆದಿದ್ದಾರೆ.

ಭೇಟಿಯಾಗಿಲ್ಲ: `ಮಾಜಿದ್ ಯಾರೆಂದು ಗೊತ್ತಿಲ್ಲ. ಅವನನ್ನು ಭೇಟಿಯೇ ಆಗಿಲ್ಲ~ ಎಂದು ರಿಕಿ ಪಾಂಟಿಂಗ್ ಸ್ಪಷ್ಟಪಡಿಸಿದ್ದಾರೆ. ಪಾಂಟಿಂಗ್ ಅವರ ವ್ಯವಸ್ಥಾಪಕ ರಾಬ್ ಹಾರ್ಟನ್ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು `ಎಲ್ಲರ ಮೇಲೂ ಕೆಸರು ಎರಚುವ ಪ್ರಯತ್ನ ಮಾಡುತ್ತಿದ್ದಾರೆ ಈ ವ್ಯಕ್ತಿ. ಅವನ ಮಾತಿನಲ್ಲಿ ಹುರುಳಿಲ್ಲ~ ಎಂದಿದ್ದಾರೆ.

ಈ ನಡುವೆ ಆಸ್ಟ್ರೇಲಿಯಾ ವೇಗದ ಬೌಲರ್ ನೇಥನ್ ಬ್ರೇಕನ್ ಅವರು `ಬಾಯಿಗೆ ಬಂದಿದ್ದೆಲ್ಲ ಮಾತಾಡಿರುವ ಆ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ~ ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.