ಜಾದವಪುರ (ಕೋಲ್ಕತ್ತ): ಬುದ್ಧದೇವ್ ಭಟ್ಟಾಚಾರ್ಯ ಅವರಿಗೆ ಇದು ‘ಅಗ್ನಿ ಪರೀಕ್ಷೆ’ ಕಾಲ. ಹನ್ನೊಂದು ವರ್ಷಗಳ ಹಿಂದೆ ಜ್ಯೋತಿ ಬಸು ಉತ್ತರಾಧಿಕಾರಿಯಾಗಿ ನೇಮಕಗೊಂಡಾಗ ಮುಂದೊಂದು ದಿನ ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕಾಗಿ ‘ದೊಡ್ಡ ಹೋರಾಟ’ ನಡೆಯಬಹುದು ಎಂದು ಅವರು ಊಹಿಸಿರಲಿಕ್ಕಿಲ್ಲ.

ಮುಖ್ಯಮಂತ್ರಿ ಈಗ ನಿಜಕ್ಕೂ ಕಷ್ಟದಲ್ಲಿದ್ದಾರೆ. 34ವರ್ಷಗಳ ಸುದೀರ್ಘ ಪರಂಪರೆ ಹೊಂದಿರುವ ಸರ್ಕಾರವನ್ನು ರಕ್ಷಿಸಿಕೊಳ್ಳುವ ಜತೆಗೆ, ತಮ್ಮದೇ ‘ಕುರ್ಚಿ’ ಉಳಿಸಿಕೊಳ್ಳಬೇಕಾದ ಮಹತ್ವದ ಹೊಣೆಗಾರಿಕೆ ಅವರ ಹೆಗಲ ಮೇಲೆ ಬಿದ್ದಿದೆ.

ಮುಖ್ಯಮಂತ್ರಿ 24 ದಕ್ಷಿಣ ಪರಗಣ ಜಿಲ್ಲೆಯ ಜಾದವಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ. ‘ಮುಖ್ಯಮಂತ್ರಿ ಕ್ಷೇತ್ರ’ ಎಂಬ ಹೆಗ್ಗಳಿಕೆ ಪಡೆದ ಜಾದವಪುರ ಸಿಪಿಎಂ ಭದ್ರಕೋಟೆ. ಆದರೆ, ‘ರಾಜಕೀಯ ಪರಿವರ್ತನೆ ಗಾಳಿ’ ಬೀಸುತ್ತಿರುವ ಹೊತ್ತಿನಲ್ಲಿ ಈ ಮಾತು ಹೇಳಲಾಗದು. ಇದರಿಂದ ಭಟ್ಟಾಚಾರ್ಯ ಒತ್ತಡಕ್ಕೆ ಸಿಕ್ಕಿದ್ದಾರೆ. ಮತದಾರರ ಮನವೊಲಿಸಲು ಶತಾಯಗತಾಯ ಪ್ರಯತ್ನ ಮಾಡುತ್ತಿದ್ದಾರೆ.

ಸೋಲು ಬುದ್ಧದೇವ್ ಅವರಿಗೆ ಹೊಸದೇನೂ ಅಲ್ಲ. ಕಾಶಿಪುರ ವಿಧಾನಸಭಾ ಕ್ಷೇತ್ರದಲ್ಲೊಮ್ಮೆ ಸೋತಿದ್ದರು. ಅನಂತರ ಕೋಲ್ಕತ್ತ ನಗರದ ಕೆಲಭಾಗಗಳನ್ನು ಒಳಗೊಂಡಿರುವ ಜಾದವಪುರಕ್ಕೆ ವಲಸೆ ಬಂದಿದ್ದಾರೆ. ಅಲ್ಲಿಂದ ಇಲ್ಲಿಯವರೆಗೂ ಕ್ಷೇತ್ರ ಅವರನ್ನು ಕೈಬಿಟ್ಟಿಲ್ಲ. ನಿರಂತರವಾಗಿ ನಿಷ್ಠೆ ವ್ಯಕ್ತಪಡಿಸುತ್ತಲೇ ಬಂದಿದೆ. ಈ ಸಲ ಮುಖ್ಯಮಂತ್ರಿ ಗೆಲುವು ಸುಲಭ ಎಂದು ಹೇಳುವಂತಿಲ್ಲ. ಈ ಸತ್ಯ ಅವರಿಗೂ ಗೊತ್ತಿದೆ. ಹೀಗಾಗಿ ಹೆಚ್ಚು ಸಮಯವನ್ನು ಜಾದವಪುರದಲ್ಲೇ ಕಳೆಯುತ್ತಿದ್ದಾರೆ.

ಮುಖ್ಯಮಂತ್ರಿ ಸಮಯ ಸಿಕ್ಕಾಗಲೆಲ್ಲ ಮತದಾರರ ಮನೆ ಕದ ತಟ್ಟುತ್ತಿದ್ದಾರೆ. ‘ಆಡಳಿತದಲ್ಲಿ ಲೋಪವಾಗಿದ್ದರೆ ತಿದ್ದುಕೊಳ್ಳತ್ತೇವೆ. ಯಾವ ಕಾರಣಕ್ಕೂ ಕೈ ಬಿಡಬೇಡಿ’ ಎಂದು ಮನವಿ ಮಾಡುತ್ತಿದ್ದಾರೆ. ಜಾದವಪುರ ಕ್ಷೇತ್ರದಲ್ಲಿ 27ರಂದು ಮತದಾನ ನಡೆಯಲಿದೆ. ಭಾನುವಾರ ಸಂಜೆವರೆಗೂ 40 ಪ್ರಚಾರ ಸಭೆಗಳನ್ನು ನಡೆಸಿದ್ದಾರೆ.

‘ಹಿಂದೆ ಯಾವ ಚುನಾವಣೆಯಲ್ಲೂ ಮುಖ್ಯಮಂತ್ರಿ ಇಷ್ಟೊಂದು ಸಲ ಕ್ಷೇತ್ರದಲ್ಲಿ ಅಡ್ಡಾಡಿರಲಿಲ್ಲ. ಹೆಚ್ಚಿನ ಸಮಯವನ್ನು ಬೇರೆ ಕ್ಷೇತ್ರಗಳಲ್ಲಿ ಕಳೆಯುತ್ತಿದ್ದರು. ಈ ಸಲ ಬೇರೆ ಕ್ಷೇತ್ರಗಳಿಗೆ ಹೋಗಿಲ್ಲ. ಇಲ್ಲಿಯೇ ಕುಳಿತುಬಿಟ್ಟಿದ್ದಾರೆ. ಅವರಿಗೂ ಆತ್ಮ ವಿಶ್ವಾಸ ಕಡಿಮೆಯಾಗಿದೆ’ ಎಂಬ ಮಾತು ಜಾದವಪುರದಲ್ಲಿ ಕೇಳಿಬರುತ್ತಿದೆ. ಸಿಪಿಎಂ ಕಾರ್ಯಕರ್ತರೂ ‘ಬುದ್ಧದೇವ್ ಗೆಲುವು ಹಿಂದಿನಷ್ಟು ಸುಲಭವಲ್ಲ’ ಎಂದು ಒಪ್ಪಿಕೊಳ್ಳುತ್ತಿದ್ದಾರೆ.

ಜಾದವಪುರದಲ್ಲಿ ಬುದ್ಧದೇವ್ ವಿರುದ್ಧ ನಿಂತವರು ಮತ್ತೊಬ್ಬ ಜನ ನಾಯಕನಲ್ಲ. ರಾಜಕಾರಣದಲ್ಲಿ ಪಳಗಿದ ಮನುಷ್ಯರೂ ಅಲ್ಲ. ಐಎಎಸ್ ಅಧಿಕಾರಿಯಾಗಿ ಮುಖ್ಯ ಕಾರ್ಯದರ್ಶಿ ಹುದ್ದೆವರೆಗೆ ಏರಿ ನಿವೃತ್ತಿಯಾದ ಮನಿಷ್ ಗುಪ್ತಾ ಟಿಎಂಸಿ ಅಭ್ಯರ್ಥಿ. ಬುದ್ಧದೇವ್ ಅವರಿಂದಲೂ ಆದೇಶ- ಸೂಚನೆಗಳನ್ನು ಪಡೆದಿರುವ ಗುಪ್ತಾ ಈಗ ಅವರಿಗೇ ಸೆಡ್ಡು ಹೊಡೆದಿದ್ದಾರೆ. ಇಲ್ಲಿ ಮನಿಷ್ ಗುಪ್ತಾ ನೆಪ ಮಾತ್ರ. ರೈಲ್ವೆ ಸಚಿವೆ ಮಮತಾ ಅವರೇ ನಿಜವಾದ ಅಭ್ಯರ್ಥಿ.

ಮುಖ್ಯಮಂತ್ರಿ ಪ್ರಾಮಾಣಿಕ ರಾಜಕಾರಣಿ. ಬುದ್ಧಿವಂತ ಮನುಷ್ಯ. ವರ್ಚಸ್ಸುಳ್ಳ ನಾಯಕ. ನಂದಿಗ್ರಾಮ ಮತ್ತು ಸಿಂಗೂರ್ ಗಲಾಟೆ ಬಳಿಕ ವರ್ಚಸ್ಸು ಕುಗ್ಗಿದೆ. 2006ರಲ್ಲಿ 58ಸಾವಿರಕ್ಕೂ ಅಧಿಕ ಮತಗಳಿಂದ ಆಯ್ಕೆಯಾಗಿದ್ದರು. ಲೋಕಸಭೆ ಚುನಾವಣೆಯಲ್ಲಿ ಸಿಪಿಎಂ ಅಭ್ಯರ್ಥಿಯನ್ನು ಟಿಎಂಸಿ ಸೋಲಿಸಿತು. ಕಳೆದ ವರ್ಷದ ಪಾಲಿಕೆ ಚುನಾವಣೆಯಲ್ಲೂ ಕ್ಷೇತ್ರದ ಹತ್ತು ವಾರ್ಡ್ಗಳಲ್ಲಿ ಆರನ್ನು ಟಿಎಂಸಿ ಗೆದ್ದುಕೊಂಡಿದೆ. ನಾಲ್ಕರಲ್ಲಿ ಸಿಪಿಎಂ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ ಬುದ್ಧದೇವ್ ಅವರಿಗೆ ತೊಂದರೆ ಆಗಬಹುದು.

‘ಸಿಪಿಎಂ ಸರ್ಕಾರದ ನೀತಿಗಳು ಬುದ್ಧದೇವ್ ಅವರಿಗೂ ತೊಡಕಾಗಿವೆ. ಕ್ಷೇತ್ರದ ಜನ ಖಾಸಗೀಕರಣ ನೀತಿ ಕುರಿತು ಮಾತನಾಡುತ್ತಿದ್ದಾರೆ. ಸಿಪಿಎಂ ಕಾರ್ಯಕರ್ತರ ದೊಡ್ಡಣ್ಣನ ಧೋರಣೆ ಬಗ್ಗೆ ಬೊಟ್ಟು ಮಾಡುತ್ತಿದ್ದಾರೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಪಶ್ಚಿಮ ಬಂಗಾಳ ತೀರಾ ಹಿಂದುಳಿದಿದೆ. ಮೂಲಸೌಲಭ್ಯ ಅಭಿವೃದ್ಧಿ ಆಗಿಲ್ಲ ಎಂಬ ಭಾವನೆ ಇದೆ. ಈ ಭಾವನೆಯನ್ನು ಮತಗಳಾಗಿ ಪರಿವರ್ತಿಸಲು ಪ್ರಯತ್ನ ನಡೆದಿದೆ’ ಎಂದು ಜಾದವಪುರ ಟಿಎಂಸಿ ನಾಯಕರಾದ ರಂಜನ್ ಮುಖರ್ಜಿ, ಬಿನಯ್ ಕುಮಾರ್ ಸೇನ್ ಮತ್ತು ಸಜಲ್ ದಾಸ್ ಹೇಳುತ್ತಾರೆ.

ಸಿಪಿಎಂ ವಿರುದ್ಧದ ಕೆಲವು ಆರೋಪಗಳನ್ನು ಪಕ್ಷದ ಮುಖಂಡರಾದ ಬಿಕಾಸ್ ರಂಜನ್ ಭಟ್ಟಾಚಾರ್ಯ, ಸಪ್ನ ಬಸು ಒಪ್ಪಿಕೊಳ್ಳುತ್ತಾರೆ. ‘ಕಾರ್ಯಕರ್ತರ ನಡವಳಿಕೆ ತಿದ್ದುವ ಕೆಲಸ ನಡೆಯುತ್ತಿದೆ. ಕೆಟ್ಟದಾಗಿ ನಡೆದುಕೊಂಡಿರುವ ಸಾವಿರಾರು ಕಾರ್ಯಕರ್ತರನ್ನು ಪಕ್ಷದಿಂದ ಹೊರಕ್ಕೆ ಹಾಕಲಾಗಿದೆ. ಪಕ್ಷ ಶುದ್ಧಗೊಳಿಸುವ ಪ್ರಕ್ರಿಯೆ ಸಾಗಿದೆ. ನಾವು ತಪ್ಪು ಮಾಡಿದ್ದೇವೆ ನಿಜ. ಮನ್ನಿಸಿ ಬೆಂಬಲಿಸಿ ಎಂದು ಕೇಳುತ್ತಿದ್ದೇವೆ’ ಎಂದು ಸ್ಪಷ್ಟಪಡಿಸುತ್ತಾರೆ.

ಸುಶಿಕ್ಷಿತ ಮತದಾರರು ಬುದ್ಧದೇವ್ ಅವರನ್ನು ಬೆಂಬಲಿಸುತ್ತಾರೆ. ಹೊಸ ಪೀಳಿಗೆ ಬದಲಾವಣೆಗೆ ತುಡಿಯುತ್ತಿದೆ. ‘ಹತ್ತು ವರ್ಷಗಳಲ್ಲಿ ಸಾಕಷ್ಟು ಕೆಲಸ ಆಗಿದೆ. ಹತ್ತಾರು ಮೇಲು ಸೇತುವೆಗಳು ನಗರದಲ್ಲಿ ತಲೆ ಎತ್ತಿವೆ. ಹಿಂದೆ ಏನೇನೂ ಇರಲಿಲ್ಲ. ಮುಖ್ಯಮಂತ್ರಿ ಪ್ರಾಮಾಣಿಕರು. ಮೂಲಸೌಲಭ್ಯ ಅಭಿವೃದ್ಧಿ ಕುರಿತು ಕಾಳಜಿ ಇದೆ. ಅವರ ಸಹೊದ್ಯೋಗಿಗಳು ಯಾರೋ ಕೆಲಸ ಮಾಡದಿರಬಹುದು. ಅದಕ್ಕಾಗಿ ಈ ಸಲ ಹೊಸ ಮುಖಗಳನ್ನು ಪರಿಚಯಿಸುತ್ತಿದ್ದಾರೆ’ ಎಂದು ಖಾಸಗಿ ಕಂಪೆನಿ ಅಧಿಕಾರಿಗಳಾದ ಪಾರ್ಥದೇವ್ ಶರ್ಮ ಹಾಗೂ ಪ್ರಾಣವೇಶ್ ಸೆನ್ ಗುಪ್ತಾ ಅಭಿಪ್ರಾಯಪಡುತ್ತಾರೆ.

‘ಮಮತಾ ಬ್ಯಾನರ್ಜಿ ಕೂಡಾ ಪ್ರಾಮಾಣಿಕರೇ. ಅವರ ಪಕ್ಷದ ಎಲ್ಲ ಮುಖಂಡರ ಬಗೆಗೂ ಈ ಮಾತು ಹೇಳಲಾಗದು’ ಎಂಬುದು ಇವರ ಪ್ರತಿಪಾದನೆ. ‘ಮುಖ್ಯಮಂತ್ರಿ ಗೆಲ್ಲುತ್ತಾರೆ. ಹಿಂದಿನ ಅಂತರ ಸಾಧ್ಯವಾಗದಿರಬಹುದು’ ಎಂಬುದು ಇವರಿಬ್ಬರ ನಿರೀಕ್ಷೆ. ಇದಕ್ಕೆ ತದ್ವಿರುದ್ಧ ನಿಲುವು ಸಂದೀಪ್ ದಾಸ್, ಶ್ಯಾಮಲ್ ದೇವ್, ಸೌರವ್ ದತ್ತ ರಾಯ್ ಅವರದ್ದು. ‘ಶಿಕ್ಷಣ, ಆರೋಗ್ಯ, ಮೂಲಸೌಲಭ್ಯ ಹಾಗೂ ಔದ್ಯೋಗಿಕ ಹೀಗೆ ಎಲ್ಲ ರಂಗಗಳಲ್ಲೂ ಪಶ್ಚಿಮ ಬಂಗಾಳದ ಸ್ಥಿತಿ ಶೋಚನೀಯ’ ಎಂಬುದು ಇವರೆಲ್ಲರ ಟೀಕೆ.
ಒಂದಂತೂ ಸತ್ಯ. ಬುದ್ಧ ಬಾಬು ರಾಜಕೀಯ ವಿರೋಧಿಗಳೂ ಅವರನ್ನು ಅಪ್ರಾಮಾಣಿಕರು ಎಂದು ಹೇಳುವುದಿಲ್ಲ. ‘ನಾವು ಸಕಾರಾತ್ಮಕ ಬದಲಾವಣೆ ಬಯಸಿದ್ದೇವೆ. ಅದು ಸರ್ಕಾರದ ಬದಲಾವಣೆಯಿಂದಲೇ ಆಗಬೇಕಾಗಿಲ್ಲ. ಎಡರಂಗ ಸರ್ಕಾರ ಅಧಿಕಾರ ಉಳಿಸಿಕೊಂಡರೆ ನೀತಿ- ನಿಲುವುಗಳನ್ನು ಬದಲಾಯಿಸಿಕೊಂಡು ಸಕಾರಾತ್ಮಕ ಬದಲಾವಣೆ ತರಬಹುದು’. ಸದ್ಯಕ್ಕೆ ಮತದಾರರ ಮನಸು ಹೀಗೇ ಎಂದು ಊಹಿಸುವುದು ಕಷ್ಟ. ಪೈಪೋಟಿಯಂತೂ ಕಂಡುಬರುತ್ತಿದೆ ಎಂದು ಬಿಪಿಒ ಉದ್ಯೋಗಿ ರುದ್ರಸಾರಥಿ ದತ್ತ ವಿವರಿಸುತ್ತಾರೆ.

ಜಾದವಪುರದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಮನಿಷ್ ಗುಪ್ತಾ ಮುಖ್ಯಮಂತ್ರಿ ಅವರಿಗೆ ಸರಿಸಾಟಿ ಅಭ್ಯರ್ಥಿಯಂತೂ ಅಲ್ಲ. ‘ಪರಿವರ್ತನೆ ಗಾಳಿ’ ಅವರನ್ನು ವಿಧಾನಸಭೆವರೆಗೂ (ರೈಟರ್ಸ್ ಕಟ್ಟಡ) ಎಳೆದುಕೊಂಡು ಹೋಗಬೇಕಷ್ಟೆ. ಒಟ್ಟಿನಲ್ಲಿ ಬುದ್ಧದೇವ್ ಸುಲಭವಾಗಿ ಸೋಲು ಒಪ್ಪಿಕೊಳ್ಳುವವರಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.