ಸೋಮವಾರ, ಜನವರಿ 27, 2020
28 °C

ಬುದ್ಧಿ ಚುರುಕಾಗಿದ್ದಾಗ ಅಂಗವೈಕಲ್ಯ ನೆಪವಷ್ಟೆ...

ಪ್ರಜಾವಾಣಿ ವಾರ್ತೆ /ಮುಕ್ತೇಶ್‌ ಪ್ರ. ಕೂರಗುಂದಮಠ. Updated:

ಅಕ್ಷರ ಗಾತ್ರ : | |

ರಾಣೆಬೆನ್ನೂರು: ಹುಟ್ಟುತ್ತಲೇ ಎರಡೂ ಕಾಲುಗಳನ್ನು ಕಳಕೊಂಡು, ಕೈ ಊರಿ ಅಡ್ಡಾಡಬೇಕಾಗಿತ್ತು. ವಯಸ್ಸು 40, ಕಾಲಿಲ್ಲದಿದ್ದರೇನು? ಕ್ರೀಯಾಶೀಲತೆ ಇರುವಾಗ, ಅಂಗವೈಕಲ್ಯವಿದ್ದರೇನು? ಬುದ್ಧಿ ಚುರುಕಾಗಿರುವಾಗ? ಅಂಗವಿಕಲತೆ ನೆಪ ಮಾತ್ರ. ಇಂತಹ ಕ್ರೀಯಾಶೀಲತೆ ಹೊಂದಿರುವ ವ್ಯಕ್ತಿಯನ್ನು ನಗರದ ಸೈಕಲ್‌ಗಾರ ಗಲ್ಲಿಯಿಂದ ದೆಹಲಿಯವರೆಗೂ ಕರೆದುಕೊಂಡು ಹೋಯಿತು.ದೆಹಲಿಯ ಅಂಗವಿಕಲರ ಸಮಾವೇಶದಲ್ಲಿ ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರು ಇಮ್ಮಿಯಾಜ್‌ ಕಚವಿಗೆ ಅಂಗವಿಕಲರಿಗೆ ನೆರವಾಗಿದ್ದ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿದಾಗ, ಕಚವಿಯ ಮನದಲ್ಲಿ ಸಂತಸ ಉಂಟಾಗಿ ಕಣ್ಣಾಲೆಗಳು ತುಂಬಿ ಮಾತು ಮೌನವಾಗಿದ್ದ ಆ ಕ್ಷಣ ಇಂದಿಗೂ ತಮ್ಮ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿದೆ ಎನ್ನುತ್ತಾರೆ ಇಮ್ತಿಯಾಜ್‌ ಅಹ್ಮದ್‌ ಕಚವಿ.ತ್ರಿಚಕ್ರ ಸೈಕಲ್‌ ತಯಾರಿಕಾ ಸಣ್ಣ ಕೈಗಾರಿಕೆಯನ್ನು ನಡೆಸುತ್ತಾ ಬಿಡುವಿನ ವೇಳೆಯಲ್ಲಿ ‘ಸಬಲೀಕರಣ’ ಎಂಬ ಸಂಸ್ಥೆ ಮೂಲಕ ಕಣ್ಣು ಕಾಣದವರಿಗೆ ಸಾರ್ವಜನಿಕ ಸ್ಥಳಗಳಲ್ಲಿ ಸಾಮಾನ್ಯರಂತೆ ಹೇಗೆ ಇರಬೇಕು, ಡ್ರೆಸ್‌ ಕೋಡ್‌, ಕಟಿಂಗ್‌, ಸ್ವಚ್ಛತೆ ಬಗ್ಗೆ ಮತ್ತು ಸಾಕು ಪ್ರಾಣಿಗಳ ಬಗ್ಗೆ ತರಬೇತಿ ನೀಡುತ್ತಿದ್ದಾರೆ.ಓದಿದ್ದು ಬಿಎಸ್‌ಸಿ, ಮೂರು ಹೆಣ್ಣುಮಕ್ಕಳು ಮತ್ತು ಪತ್ನಿಯೊಂದಿಗೆ ತುಂಬ ಕುಟುಂಬ ನಡೆಸುತ್ತಿದ್ದಾರೆ. ರಾಜ್ಯ ಮತ್ತು ಜಿಲ್ಲೆಗಳಲ್ಲಿ ತ್ರಿ ಚಕ್ರ ಸೈಕಲ್‌ ಮೇಳಗಳಲ್ಲಿ ಭಾಗವಹಿಸಿದ್ದಾರೆ. ಅಡೆತಡೆ ರಹಿತ ಸೈಕಲ್‌ ತಯಾರಿಸಿದ್ದಕ್ಕೆ ಎನ್‌ಸಿಪಿಎಡಿ ಸಂಸ್ಥೆ ‘ಎಕ್ಸಿಬಿಲಿಟಿ’ ಆವಾರ್ಡ್‌ ನೀಡಿದೆ.ಜ್ಯ ಸರ್ಕಾರ ಬೆಸ್ಟ್‌ ಹೋರಾಟಗಾರ ಪ್ರಶಸ್ತಿ ನೀಡಿದೆ. ಸರಳವಾಗಿ ಒಂದು ಕಡೆಯಿಂದ ಇನ್ನೊಂದೆಡೆಗೆ ಚಲಿಸಲು ಸಹಾಯಕವಾಗುವಂತೆ ತ್ರಿಚಕ್ರದ ಚಿಕ್ಕ ಸೈಕಲ್ಲನ್ನು ತಯಾರಿಸಿದ್ದು ಹೀಗೆಯೇ...ಇಂತಹದ್ದೊಂದು ಸೈಕಲ್‌ ತಯಾರಿಸಿದರೆ ತನಗಷ್ಟೇ ಅಲ್ಲ, ತನ್ನಂತೆ ಕಾಲಿಲ್ಲದ ಸಾವಿರಾರು ಜನರಿಗೆ ಅನುಕೂಲವಾಗುತ್ತದೆಯೆಂದು ಯೋಚಿಸಿ ಅಡಿಕೆ ವ್ಯಾಪಾರ ಬಿಟ್ಟು ಕಚವಿ ಸೈಕಲ್‌ ಬಿಡಿಭಾಗಗಳನ್ನು ತಯಾರಿಸಿಯೇ ಬಿಟ್ಟರು.ತನ್ನ ಎರಡೂ ಕಾಲು ಇಲ್ಲದೇ ಇರುವುದರಿಂದ ಸೈಕಲ್‌ ಬಿಟ್ಟು, ಬೈಕ್‌ ಸವಾರಿ ಮಾಡಬೇಕು ಎಂದು ಕನಸು ಹೊಂದಿ ಈಚೆಗೆ ಬಜಾಜ್‌ ಕಂಪನಿಯ ಮೋಟಾರ್‌ ಬೈಕ್‌ಗೆ ಕೈಯಿಂದಲೇ ಎಲ್ಲ ಆಪರೇಟ್‌ ಮಾಡುವಂತೆ ಎಲ್ಲ ಬಿಡಿಭಾಗಳನ್ನು ಜೋಡಿಸಿಕೊಂಡು, ಗೇರ್‌ ಬದಲಾಯಿಸುವ ಹ್ಯಾಂಡಲ್‌, ಎಕ್ಸಲರೇಟರ್‌ ಮತ್ತು ಆಲ್ಟರ್‌ನೇಟ್‌ ಬ್ರೇಕ್‌ ಒಂದು ಇಲ್ಲದೇ ಹೋದರೂ ಇನ್ನೊಂದು ಬ್ರೇಕ್‌ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಸುಲಭವಾಗಿ ಹತ್ತಲು ಇಳಿಯಲು  ಅನುಕೂಲ ಮಾಡಿದ್ದಾರೆ.ಬೈಕ್‌ನಲ್ಲಿ ಪೆಟ್ರೋಲ್‌ ಇಲ್ಲದಾಗ ಕೈಯಿಂದಲೇ ತಿರುಗಿಸಿಕೊಂಡು ಹೋಗುವ ಸರಳ ವಿಧಾನವನ್ನು ಜೋಡಿಸುವ ಉದ್ದೇಶ ಹೊಂದಿದ್ದಾರೆ.  ಸಂಪರ್ಕಕ್ಕಾಗಿ 9886808045.

 

ಪ್ರತಿಕ್ರಿಯಿಸಿ (+)