ಸೋಮವಾರ, ಜೂನ್ 21, 2021
20 °C

ಬೆಂಕಿ ಅವಘಡ: ರೂ 15 ಲಕ್ಷ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ನಗರದ ಮೈಷುಗರ್ ಸಕ್ಕರೆ ಕಾರ್ಖಾನೆಯಲ್ಲಿ ಮಿಲ್‌ಗೆ ಬಗಾಸ್ ಪೂರೈಸುವ ವ್ಯವಸ್ಥೆಯಲ್ಲಿ ಮಂಗಳವಾರ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿದೆ.ಬೆಳಗ್ಗೆ ಸುಮಾರು 5 ಗಂಟೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದೂ ಬಗಾಸ್ (ಉರುವಲು) ಪೂರೈಸುವ ವ್ಯವಸ್ಥೆಯು ಪೂರ್ಣ ಸುಟ್ಟು ಹೋಗಿದೆ. ತಕ್ಷಣಕ್ಕೆ ಮರು ಬಳಕೆ ಆಗದ ಸ್ಥಿತಿಗೆ ತಲುಪಿದೆ.ಬಗಾಸ್ ಸಾಗಣೆಗೆ ಅನುಗುಣವಾಗಿ ಅಳವಡಿಸಿದ್ದ ರಬ್ಬರಿನ ಷೀಟುಗಳು ಹೊತ್ತಿ ಉರಿದಿದ್ದು, ಅಗ್ನಿಶಾಮಕ ದಳದ ಎರಡು ವಾಹನಗಳು ಬಂದು ಬೆಂಕಿ ನಂದಿಸಲು ಶ್ರಮಿಸಿದವರು. ಅದೃಷ್ಟವಶಾತ್ ಯಾರಿಗೂ ಅಪಾಯ ಸಂಭವಿಸಿಲ್ಲ.ಕಾರ್ಖಾನೆ ಅಧ್ಯಕ್ಷ ನಾಗರಾಜಪ್ಪ ಅವರು, ಈ ಘಟನೆಯಿಂದ ಸುಮಾರು 15 ಲಕ್ಷ ನಷ್ಟ ಸಂಭವಿಸಿದೆ ಎಂದು ಅಂದಾಜು ಮಾಡಿದ್ದಾರೆ. ಘಟನೆಗೆ ಕಾರಣ ಗೊತ್ತಿಲ್ಲ. ಯಾರು, ಏನು ಕಾರಣ ಎಂಬುದು ಗೊತ್ತಿಲ್ಲ. ದೂರು ನೀಡಲಾಗಿದೆ. ತನಿಖೆಯ ನಂತರವೇ ಯಾರು ಕಾರಣ ಎಂಬುದು ತಿಳಿಯಲಿದೆ~ ಎಂದರು.ಈ ಸೌಲಭ್ಯಕ್ಕೆ ವಿಮೆ ಮಾಡಿಸಿದ್ದು, ಆತಂಕ ಪಡುವ ಅಗತ್ಯವಿಲ್ಲ. ಜೊತೆಗೆ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಪ್ರಕ್ರಿಯೆ ಸುಲಲಿತವಾಗಿ ನಡೆಯುವಂತೆಯೂ ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಕಾರ್ಖಾನೆಯಲ್ಲಿ ಇನ್ನೂ ಸುಮಾರು 80 ಸಾವಿರ ಟನ್ ಕಬ್ಬು ಅರೆಯುವುದು ಉಳಿದಿರುವ ಅಂದಾಜಿದೆ. ಬಳಿಕ ಈ ತಿಂಗಳ 30ರ ವೇಳೆಗೆ ಕಬ್ಬು ಅರೆಯುವಿಕೆ ಸ್ಥಗತಿಗೊಳಿಸುವ ಉದ್ದೇಶವಿದೆ. ಮತ್ತೆ ಸಿದ್ಧತೆ ಮಾಡಿಕೊಂಡು ಜುಲೈ ಎರಡನೇ ವಾರ ಕಾರ್ಖಾನೆ ಪುನಾರಂಭಿಸುವ ಗುರಿ ಇದೆ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.