ಶುಕ್ರವಾರ, ಮೇ 14, 2021
29 °C

ಬೆಂಗಳೂರಿನ ಹರ್ಷಿತಾ, ಅಕ್ಷರಾಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಇಲ್ಲಿಯ ಬಿ.ಎಲ್.ಡಿ.ಇ ಸಂಸ್ಥೆಯ ಶತಮಾನೋತ್ಸವ ಅಂಗವಾಗಿ ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ದಕ್ಷಿಣ ಮಧ್ಯ ವಲಯ ಆರ್ಕಿಟೆಕ್ಟ್ ಕಾಲೇಜು ವಿದ್ಯಾರ್ಥಿಗಳ `ನ್ಯಾಷನಲ್ ಅವಾರ್ಡ್ ಫಾರ್ ಎಕ್ಸಲನ್ಸ್ ಇನ್ ಆರ್ಕಿಟೆಕ್ಚರಲ್ ಥಿಸಿಸ್~ ಸ್ಪರ್ಧೆಯಲ್ಲಿ ಬೆಂಗಳೂರಿನ ಆರ್.ವಿ. ಆರ್ಕಿಟೆಕ್ಚರ್ ಸ್ಕೂಲ್‌ನ ಹರ್ಷಿತಾ ಶೆಟ್ಟಿ, ಅಕ್ಷರಾ ವರ್ಮಾ ವಿಜೇತರಾದರು.ಹರ್ಷಿತಾ ಶೆಟ್ಟಿ ಅವರ ಬೆಂಗಳೂರಿನ ಯುದ್ಧ ಸ್ಮಾರಕ ಮ್ಯೂಜಿಯಂ ಮತ್ತು ಪಾರ್ಕ್, ಅಕ್ಷರಾ ವರ್ಮಾ ಅವರ ನಗರ ಪ್ರದೇಶದಲ್ಲಿ ಸಾಂಸ್ಕೃತಿಕ ಪ್ರತಿ ಬಿಂಬ ಪ್ರಬಂಧಗಳನ್ನು ತೀರ್ಪುಗಾರರು ಅತ್ಯುತ್ತಮ ಕೃತಿಗಳೆಂದು ಆಯ್ಕೆ ಮಾಡಿದರು.ಬಿ.ಎಲ್.ಡಿ.ಇ. ವಿವಿ ಕುಲಪತಿ ಡಾ.ಬಿ.ಜಿ. ಮೂಲಿ ಮನಿ ಅವರು ವಿಜೇತರಿಗೆ ತಲಾ ರೂ.10 ಸಾವಿರ ನಗದು, ರೂ.5 ಸಾವಿರ ಮೌಲ್ಯದ ಪುಸ್ತಕಗಳನ್ನು ಬಹುಮಾನವಾಗಿ ನೀಡಿದರು.ಈ ಸ್ಪರ್ಧೆಯಲ್ಲಿ ಎಂಟು ಉತ್ತಮ ಪ್ರಬಂಧಗಳನ್ನು ಸಹ ಆಯ್ಕೆ ಮಾಡಿ, ಅವರಿಗೆ ತಲಾ ರೂ. 5 ಸಾವಿರ ನಗದು, ರೂ. 5ಸಾವಿರ ಮೌಲ್ಯದ ಪುಸ್ತಕಗಳ ಬಹು ಮಾನ ರೂಪದಲ್ಲಿ ವಿತರಿಸಲಾಯಿತು.ಬಹುಮಾನ ವಿತರಣಾ ಸಮಾರಂಭದಲ್ಲಿ ಮುಂಬೈನ ವಂದನಾ ರಣಜಿತ್‌ಸಿಂಗ್, ದೆಹಲಿಯ ಸ್ನೇಹಾಂಶು ಮುಖರ್ಜಿ, ಅಹ್ಮದಾಬಾದ್‌ನ ಶರತ್ ಪಂಚಾಲ, ಪುಣೆಯ ನ್ಯಾಷನಲ್ ಇನ್ಸ್‌ಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡೀಸ್ ಇನ್ ಆರ್ಕಿಟೆಕ್ಚರ್ ಸಂಯೋಜಕ ಪುಸ್ಕರ ಕನ್ವಿಂದೆ, ಪ್ರಾಚಾರ್ಯ ಡಾ.ವಿ.ಪಿ. ಹುಗ್ಗಿ, ವಿಠ್ಠಲ ಟಂಕಸಾಲಿ, ಅನಿಲ ಜಂಬುರೆ, ಗಂಗಾರೆಡ್ಡಿ, ದೀಪಾ ಜಂಬುರೆ ಮತ್ತಿತರರು ಭಾಗವಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.