ಯಾದಗಿರಿ: ತಾಲ್ಲೂಕಿನ ತಾತಳಗೇರಾ ಬೆಟ್ಟದಲ್ಲಿರುವ ಆಂಜನೇಯ ದೇವಸ್ಥಾನಕ್ಕೆ ಮುಳ್ಳು– ಕಂಟಿಗಳನ್ನು ಸ್ವಚ್ಛಗೊಳಿಸುವುದರ ಮೂಲಕ ಗ್ರಾಮಸ್ಥರು ಮಂಗಳವಾರ ರಸ್ತೆ ನಿರ್ಮಾಣ ಮಾಡಿದರು. ‘ಆಂಜನೇಯ ದೇವಸ್ಥಾನವು ಮುಖ್ಯ ರಸ್ತೆಯಿಂದ 3.5 ಕಿ.ಮೀ ದೂರವಿದೆ. ಮುಳ್ಳು– ಕಂಟಿಗಳ ಮೂಲಕ ಸಾಗುವ ಬೆಟ್ಟದ ದಾರಿ ಇದಾಗಿದೆ.

ಮಳೆ ಬಾರದಿರುವಾಗ ಬೆಳೆಗಳು ನಾಶವಾಗುವ ಸಮಯದಲ್ಲಿ ರೈತರು ಸಂಕಷ್ಟದಲ್ಲಿದ್ದಾಗ ಈ ದೇವರ ದರ್ಶನ ಪಡೆದು ಭಕ್ತಿಯಿಂದ ಪೂಜಿಸಿದರೆ ಸಾಕು ವಾರದೊಳಗೆ ಮಳೆಬಂದ ನಿದರ್ಶನಗಳು ಬಹಳಷ್ಟು ಇವೆ’ ಎಂದು ಗ್ರಾಮಸ್ಥರು ಹೇಳುತ್ತಾರೆ. ಈ ದೇವಸ್ಥಾನಕ್ಕೆ ಸುತ್ತಲಿನ ಗ್ರಾಮಗಳಾದ ಅರಿಕೇರಾ, ರಾಮಸಮುದ್ರ, ಬೆಳಗೇರಾ, ಆಶನಾಳ, ಯಂಪಾಡ ಗ್ರಾಮಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.

‘ಆಂಜನೇಯ ದೇವಸ್ಥಾನವು ಬಹಳ ಪುರಾತನವಾಗಿದ್ದು, ಒಂದೇ ಕಂಬದಲ್ಲಿ ಮೂರ್ತಿ ಇಲ್ಲಿದೆ. ಆದರೆ, ದೇವಸ್ಥಾನದ ಕಟ್ಟಡ ಇಲ್ಲ. ಮಳೆ ಬಂದರೆ ಭಕ್ತರಿಗೆ ಆಶ್ರಯ, ನೀರಿನ ವ್ಯವಸ್ಥೆ ಇರುವುದಿಲ್ಲ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ನೀರಿನ ಅವಶ್ಯಕತೆ ಇರುತ್ತದೆ. ಅದಕ್ಕಾಗಿ ಶೀಘ್ರದಲ್ಲಿ ಈ ಸ್ಥಳದಲ್ಲಿ ಬೋರ್ವೆಲ್ ಹಾಕಿಸಿ ಭಕ್ತಾದಿಗಳ ಬೇಡಿಕೆ ಈಡೇರಿಸಬೇಕು ಎಂದು ಯಾದಗಿರಿ ಜಿಲ್ಲಾ ಟೋಕರಿ ಕೋಲಿ (ಕಬ್ಬಲಿಗ) ಸಮಾಜದ ಅಧ್ಯಕ್ಷ ಉಮೇಶ ಮುದ್ನಾಳ್ ಅವರ ನೇತೃತ್ವದಲ್ಲಿ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ದೇವಸ್ಥಾನಕ್ಕೆ ಹೋಗುವ ಮಾರ್ಗವನ್ನು ಗ್ರಾಮಸ್ಥರೇ ಸ್ವಯಂ ಪ್ರೇರಣೆಯಿಂದ ಮುಳ್ಳು ಕಂಟಿಗಳನ್ನು ಸ್ವಚ್ಛಗೊಳಿಸಿ ರಸ್ತೆ ನಿರ್ಮಿಸಿದರು. ನಂತರ ಉಮೇಶ ಮುದ್ನಾಳ್ ನೇತೃತ್ವದಲ್ಲಿ ಸಭೆ ನಡೆಸಿದರು. ಹುಸನಪ್ಪ, ಜಲ್ಲಪ್ಪ, ನಾಗಪ್ಪ, ಮಹೇಶ, ಶರಣಪ್ಪ, ದೇವಪ್ಪ, ಶರಣಪ್ಪ ದುರ್ಗದ, ಮಲ್ಲಿಕಾರ್ಜುನ, ಸಿದ್ದಲಿಂಗಪ್ಪ, ಕಾಶಪ್ಪ, ರಾಮಪ್ಪ, ಹಣಮಂತ, ಸಾಬಣ್ಣ, ಮರಗಪ್ಪ, ಮರಗಪ್ಪ ಅಗಸರ, ಮಲ್ಲಿಕಾರ್ಜುನ ದುರ್ಗದ, ಸಾಬಣ್ಣ ಮಲೆಪಲ್ಲಿ, ಭೀಮಶಪ್ಪ, ಕಾಶಪ್ಪ ದುರ್ಗದ, ನಾಗಪ್ಪ ಅಗಸರ, ಮಾರೆಪ್ಪ ನಂದಳ್ಳಿ, ನಾಗಪ್ಪ ಬಾಗ್ಲಿ ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.