ಸೋಮವಾರ, ಜೂನ್ 21, 2021
29 °C

ಬೆನ್ನುಹುರಿ ನೋವು ಇನ್ನು ನಿರಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

71 ವರ್ಷ ವಯಸ್ಸಿನ  ತುಮಕೂರಿನ ನಾಗಭೂಷಣ ಅವರು ಪಾಶ್ವವಾಯು ಪೀಡಿತರಾಗಿದ್ದು, ತೀವ್ರತರ ಬೆನ್ನುಹುರಿಯ ನೋವಿನಿಂದಾಗಿ ಕತ್ತು, ಭುಜ ನೋವಿನಿಂದ (ಸೆರ್ವಿಕಲ್ ಸ್ಪೊಂದಿಲೊಟಿಕ್ ಮಿಲೋಪಥಿ) ಬಳಲುತ್ತಿದ್ದರು. ಅವರಿಗೆ ನಿಂತುಕೊಳ್ಳಲು, ನಡೆಯಲು ಕಳೆದ ಎರಡು ವರ್ಷಗಳಿಂದ ಆಗುತ್ತಿರಲಿಲ್ಲ. ಎರಡೂ ಕೈಗಳು ದುರ್ಬಲವಾಗಿದ್ದು, ನಿತ್ಯದ ಚಟುವಟಿಕೆಗಳಿಗಾಗಿ ಅನ್ಯರ ಸಹಕಾರ ಬೇಕಿತ್ತು.`ನಾಗಭೂಷಣ ಅವರ ಸಮಸ್ಯೆ ಸರ್ವಿಕಲ್ ಮಿಲೋ ಪಥಿ ಎಂಬುದಾಗಿದೆ. ಈ ಸ್ಥಿತಿಯಲ್ಲಿ ಬೆನ್ನು ಹುರಿಯಲ್ಲಿ ಸಮಸ್ಯೆ ಕಾಣಿಸಿಕೊಳ್ಳಲಿದೆ. ಗಾಯದಿಂದಾಗಿ ರಕ್ತದ ಚಲನೆ ಕಡಿಮೆ ಆಗುವುದು. ಬೆನ್ನು ಹುರಿಯಲ್ಲಿ ಪಾರ್ಶ್ವ ವಾಯುಗೆ ಕಾರಣವಾಗಲಿದೆ. ಇಂಥದೇ ಸಮಸ್ಯೆ ಮಿದುಳಿನಲ್ಲಿಯೂ ಕಾಣಿಸಬಹುದು~ ಎಂದು ಫೋರ್ಟಿಸ್ ಹಾಸ್ಪಿಟಲ್‌ನ ಕನ್ಸಲ್ಟಂಟ್ ನ್ಯೂರೋ ಸರ್ಜನ್ ಡಾ. ಕೆ.ಎನ್.ಕೃಷ್ಣ ತಿಳಿಸುತ್ತಾರೆ. ನಾಗಭೂಷಣ ಅವರ ವಿಷಯದಲ್ಲಿ ಒಂದೇ ಚಿಕಿತ್ಸೆ ಎಂದರೆ ಮಲ್ಟಿಲೆವೆಲ್ ಅಂಟೆರಿಯರ್ ಸೆರ್ವಿಕಲ್ ಕಾರ್ಪೆಕ್ಟೊಮಿ ಮತ್ತು ಇನ್ಸುಟ್ರುಮೆಂಟೆಡ್ ಫ್ಯೂಷನ್ ಆಗಿದೆ. ಸಾಮಾನ್ಯವಾಗಿ ಇದನ್ನು ಕತ್ತಿನ ಬಲಭಾಗದಲ್ಲಿ 3-4 ಸೆಂ.ಮೀ. ರಂಧ್ರವನ್ನು ರೂಪಿಸುವ ಮೂಲಕ ಮಾಡಲಾಗುತ್ತದೆ. ಶಸ್ತ್ರಚಿಕಿತ್ಸೆಯಲ್ಲಿ ಬೆನ್ನುಮೂಳೆಯನ್ನು ಸಂಬಂಧಿತ ಡಿಸ್ಕ್ ಮತ್ತು ಮೂಳೆಗಳಿಂದ ಬೇರ್ಪಡಿಸಿ, ರಕ್ತದ ಚಲನೆ  ಆಗುವಂತೆ ನೋಡಿಕೊಳ್ಳಲಾಗುವುದು. ಇದು, ಮತ್ತಷ್ಟು ಅಪಾಯ ಆಗುವುದನ್ನು ತಪ್ಪಿಸಲಿದೆ. ಈ ಹಂತದಲ್ಲಿ ಸವೆದ ಮೂಳೆಗಳನ್ನು ತೆಗೆದು ಕಸಿ ಮಾಡಲಾಗುತ್ತದೆ. ಈ ಕಸಿಯು ಮನುಷ್ಯನ ಜೀವನಶೈಲಿಗೆ ಉಳಿದ ಅವಧಿಗೂ ಪೂರಕವಾಗಿ ನೆರವಾಗಲಿದೆ  ಎಂದು ಡಾ. ಕೃಷ್ಣ ತಿಳಿಸುತ್ತಾರೆ.ಸರ್ವಿಕಲ್ ಸ್ಪೊಂಡಿಲೋಸಿಸ್ ಎಂಬುದು ಗಂಭೀರ ಸ್ವರೂಪದ ಸಮಸ್ಯೆಯಾಗಿದ್ದು, ಬೆನ್ನುಹುರಿ, ಕತ್ತು ಬಳಿ ನೋವು ಕಾಣಿಸಿಕೊಳ್ಳಲಿದೆ. ಸ್ಪೊಂಡಿಲೋಸಿಸ್ ವಯಸ್ಸಿನೊಂದಿಗೆ ಹೆಚ್ಚಲಿದ್ದು, ಬಳಿಕ ವಿವಿಧ ಹಂತದಲ್ಲಿ  ತೊಡಕು ಉಂಟು ಮಾಡಲಿದೆ. ಇದು, ಬೆನ್ನುಹುರಿ ಗಡುಸಾಗಲು ಕಾರಣವಾಗಲಿದ್ದು, ಇದರಿಂದ ಭಾಗಶಃ ಅಥವಾ ಪೂರ್ಣ ಪಾರ್ಶ್ವವಾಯು ತುತ್ತಾಗಬಹುದು. ಇದರಿಂದ ರೋಗಿಗಳು ವ್ಹೀಲ್ ಚೇರ್ ಆಶ್ರಯಿಸಬೇಕಿದ್ದು, ತೀವ್ರ ನೋವು ಕಾಣಿಸಿಕೊಳ್ಳಲಿದೆ. ಇದು, ಕಾಲಾನಂತರದಲ್ಲಿ ಮಧುಮೇಹ, ಅಧಿಕ ಒತ್ತಡ, ಹೃದ್ರೋಗ ಸಂಬಂಧಿತ ಸಮಸ್ಯೆಗಳಿಗೂ ಕಾರಣವಾಗಬಹುದು.ಇದಕ್ಕೂ ಮುನ್ನ ಚಿಕಿತ್ಸೆಯು ಬಹುತೇಕ ನೋವು ನಿವಾರಣೆ, ನಿರ್ವಹಣೆಯನ್ನೇ ಕೇಂದ್ರೀಕರಿಸಿತ್ತು. ಶಸ್ತ್ರಚಿಕಿತ್ಸೆ ಹೆಚ್ಚು ಅಪಾಯಕಾರಿ ಎಂಬುದು ಇದಕ್ಕೆ ಕಾರಣವಾಗಿತ್ತು. ಆದರೆ. ತಾಂತ್ರಿಕ ಅಭಿವೃದ್ಧಿಯಿಂದಾಗಿ ಡಯಾಗ್ನೋಸಿಸ್, ಬೆನ್ನುಹುರಿ ಶಸ್ತ್ರಚಿಕಿತ್ಸೆ, ಆ ನಂತರದ ಆರೈಕೆ ಸಾಧ್ಯವಾಗಲಿದೆ. ಈ ಚಿಕಿತ್ಸೆ ಕ್ರಮಗಳು ಸುರಕ್ಷಿತವು ಆಗಿದ್ದು, ರೋಗಿಗಳ ಸ್ನೇಹಪರವೂ ಆಗಿದೆ ಎಂದೂ ಪ್ರಕಟಣೆಯಲ್ಲಿ ಪ್ರತಿಪಾದಿಸಲಾಗಿದೆ.

 ಹೆಚ್ಚಿನ ಮಾಹಿತಿಗೆ ಮೊಬೈಲ್: 98455 58559

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.