ಗುರುವಾರ , ಮೇ 26, 2022
29 °C

ಬೊಂಬಾಟ್ ಬಾಲಿವುಡ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೊಂಬಾಟ್ ಬಾಲಿವುಡ್

ಕಂಗನಾಳ ಅಮೀರ್ ಪ್ರೀತಿ

`ಅಮೀರ್ ಖಾನ್ ತನ್ನ ಪ್ರಿಯಕರ!~. ಇದು ಕಂಗನಾ ರಣಾವೂತ್‌ಳ ಹೇಳಿಕೆ. ಹಾಂ, ಆಕೆ ಹೇಳಿಕೊಂಡಿರುವುದು ಕನಸಿನ ಪ್ರಿಯತಮನ ಬಗ್ಗೆ. `ಅಮೀರ್ ಕನಸು ಕಾಣುತ್ತಾ ಬೆಳೆದವಳು ತಾನು. ಇವತ್ತಿಗೂ ಕೂಡ ಅಮೀರ್ ಸಿನಿಮಾಗಳನ್ನು ಚಿಕ್ಕ ವಯಸ್ಸಿನ ಅದೇ ಮುಗ್ಧತೆಯಿಂದ ನೋಡಿ ಖುಷಿ ಪಡುವೆ~ ಎಂದಿರುವ ಕಂಗನಾಗೆ ಅಮೀರ್ ಜೊತೆ ನಟಿಸುವುದು ಇನ್ನೂ ಕನಸಾಗಿಯೇ ಉಳಿದಿದೆಯಂತೆ. ಕೆಲವೊಮ್ಮೆ ಅಮೀರ್‌ಗೆ ಮತ್ತೆ ವಿಚ್ಛೇದನ ಆಗಬಾರದೇ ಎಂದು ಮನದಲ್ಲೇ ಬಯಸುವುದಾಗಿಯೂ ಕಂಗನಾ ತುಂಟತನದಿಂದ ಹೇಳಿದ್ದಾಳೆ.ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ತನ್ನ ಭೂತಕಾಲ, ವರ್ತಮಾನದ ಬಗ್ಗೆ ಗಂಟೆಗಟ್ಟಲೆ ಮಾತನಾಡಿರುವ ಕಂಗನಾಗೆ ತನ್ನ ಬಗ್ಗೆ ಅತಿಯಾದ ಆತ್ಮವಿಶ್ವಾಸ. `ಇಂಗ್ಲಿಷ್ ರಂಗಭೂಮಿಯಿಂದ ಬಂದ ನನಗೆ ಎಂಥದೇ ಪಾತ್ರವೂ ಕಷ್ಟ ಎನಿಸುವುದಿಲ್ಲ. ಕೆಲವೊಮ್ಮೆ ಇಷ್ಟು ಕಷ್ಟದ ಪಾತ್ರವನ್ನು ನಾನು ಎಷ್ಟು ಸಲೀಸಾಗಿ ನಿಭಾಯಿಸಿಬಿಟ್ಟೆ ಎಂದು ಆಶ್ಚರ್ಯವಾಗುವುದೂ ಇದೆ. ನನ್ನನ್ನು ತೆರೆಯ ಮೇಲೆ ನೋಡಿಕೊಂಡಾಗ ನಾನು ಒಳ್ಳೆಯ ನಟಿ ಎಂದು ನನಗೇ ಅನಿಸಿದ್ದು ನಿಜ~ ಎಂದಿದ್ದಾಳೆ.ಅಂದಹಾಗೆ, ಕಂಗನಾಗೆ ನಿರ್ದೇಶಕ ಮಹೇಶ್ ಭಟ್ ಬುದ್ಧಿವಂತಿಕೆ ಮೇಲೆ ಹೊಟ್ಟೆಕಿಚ್ಚಂತೆ. ಜೊತೆಗೆ ತಾನೆಷ್ಟು ಒಳ್ಳೆಯ ನಟಿಯಾದರೂ ಮನೆಯಲ್ಲಿ ಮಾತ್ರ ಸಾಮಾನ್ಯ ಹುಡುಗಿಯಾಗಿಯೇ ಇರಲು ಬಯಸುವುದು ಅವಳ ವಿಶೇಷವಂತೆ. ಹಾಗೆಯೇ ಮದುವೆಯಾದರೆ ಅದು ವೈದ್ಯರನ್ನು ಮಾತ್ರವಂತೆ.

ಬಿಪಾಶಾ ಮದುವೆ?

ಜಾನ್ ಅಬ್ರಹಾಂ ಜೊತೆಗಿನ ಹತ್ತು ವರ್ಷಗಳ ಲಿವಿಂಗ್ ರಿಲೇಷನ್‌ಶಿಪ್‌ನಿಂದ ಬಿಡುಗಡೆ ಹೊಂದಿ ಕೊಂಚ ದಿನ ಒಂಟಿಯಾಗಿದ್ದ ಬಿಪಾಶಾ ಬಸು ಇದೀಗ ಮದುವೆಯಾಲು ನಿರ್ಧರಿಸಿದ್ದಾಳೆ. ಬಿಪಾಶಾ ಮೆಚ್ಚಿರುವ ಹುಡುಗ `ದಮ್ ಮಾರೊ ದಮ್~ ಚಿತ್ರದಲ್ಲಿ ನಟಿಸಿದ್ದ ತೆಲುಗು ನಟ ರಾಣಾ ದಗುಬಟ್ಟಿ. ಇದು ಬಾಲಿವುಡ್‌ನಲ್ಲಿ ಚಾಲ್ತಿಯಲ್ಲಿರುವ ಸುದ್ದಿ.`ದಮ್ ಮಾರೊ ದಮ್~ ಚಿತ್ರದ ಚಿತ್ರೀಕರಣ ಸಮಯದಲ್ಲಿ ಇಬ್ಬರಿಗೂ ಪರಿಚಯವಾಗಿ ಸ್ನೇಹ ಬೆಳೆದಿತ್ತು. ಸಾಕಷ್ಟು ಕಡೆ ಜೊತೆಜೊತೆಯಾಗಿ ಕಾಣಿಸಿಕೊಂಡಿದ್ದರು. ಕಳೆದ ವಾರ ಹಾಲಿವುಡ್‌ನ ಪ್ಯಾರಿಸ್ ಹಿಲ್ಟನ್ ಕೊಟ್ಟ ಪಾರ್ಟಿಯಲ್ಲಿ ಅವರಿಬ್ಬರೂ ಕೈ ಕೈ ಹಿಡಿದು ಓಡಾಡುತ್ತ್ದ್ದಿದುದನ್ನು ನೋಡಿರುವ ಮಂದಿ ಬಿಪಾಶಾಳನ್ನು ವಿಚಾರಿಸಿದಾಗ ಸಿಕ್ಕ ಉತ್ತರ- `ಶೀಘ್ರದಲ್ಲೇ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು~.ಪ್ರತೀಕ್ ವಿಶ್ವಾಸ

`ಇದುವರೆಗೂ ಸಿನಿಮಾಗಳಲ್ಲಿ ಯಾರೂ ನೋಡಿದರ ವಿಕ್ಷಿಪ್ತ ಪಾತ್ರಗಳು `ಮೈ ಫ್ರೆಂಡ್ ಪಿಂಟೋ~ದಲ್ಲಿ ಇರಲಿವೆ. ಕೆಲವೊಮ್ಮೆ ಇಂಥವರೂ ಇದ್ದಾರೆಯೇ ಎಂದು ಎಲ್ಲರಿಗೂ ಆಶ್ಚರ್ಯವಾಗುವ ರೀತಿಯಲ್ಲಿ ಬಾಳುವ ಜನರನ್ನು ತೆರೆಯ ಮೇಲೆ ತೋರಿಸುವ ಮನಸ್ಸು ಮಾಡಲಾಗಿದೆ~ ಎಂದು ಪ್ರತೀಕ್ ಬಬ್ಬರ್ ಹೇಳಿಕೊಂಡಿದ್ದಾರೆ.`ಮೈ ಫ್ರೆಂಡ್ ಪಿಂಟೋ~ ಬಗ್ಗೆ ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಪ್ರತೀಕ್‌ಗೆ ಚಿತ್ರವನ್ನು ಸಂಜಯ್ ಲೀಲಾ ಬನ್ಸಾಲಿ ನಿರ್ಮಿಸುತ್ತಿರುವುದು ಮತ್ತೊಂದು ಖುಷಿಯ ಸಂಗತಿ. ಚಿತ್ರದ ನಾಯಕಿ ಕಲ್ಕಿ ಕೋಕ್ಲಿನ್. ನಿರ್ದೇಶಕ ರಾಘವ್ ದರ್. ಹಾಸ್ಯದ ನಿರೂಪಣೆಯಲ್ಲಿ ಗಂಭೀರ ವಿಚಾರಗಳನ್ನು ಹೇಳುವ ಪ್ರಯತ್ನ ತಮ್ಮ ಚಿತ್ರದಲ್ಲಿದೆ ಎಂಬುದು ನಿರ್ದೇಶಕರ ಅಭಿಪ್ರಾಯ. `ಮೈ ಫ್ರೆಂಡ್ ಪಿಂಟೋ ಚಿತ್ರ ನಿಜಕ್ಕೂ ವಿಚಿತ್ರ ನಿರೂಪಣೆಯ ಸಿನಿಮಾ. ಇದೀಗ ನಿರ್ದಿಷ್ಟ ಬಣ್ಣಗಳಿಂದ ಹೊರಬಂದು ಬಣ್ಣಬಣ್ಣದ ಚಿತ್ರಗಳನ್ನು ಮಾಡುವ ನನ್ನ ಹಂಬಲಕ್ಕೆ ಇದು ನೀರೆರೆಯಲಿದೆ~ ಎಂದು ಬನ್ಸಾಲಿ ಕೂಡ ಹೇಳಿಕೊಂಡಿರುವುದು ಸುದ್ದಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.