ಭಾನುವಾರ, ಜೂನ್ 20, 2021
28 °C

ಬ್ಯಾಡ್ಮಿಂಟನ್: ಕ್ವಾರ್ಟರ್‌ ಫೈನಲ್‌ಗೆ ಸೈನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬರ್ಮಿಂಗ್‌ಹ್ಯಾಮ್‌: ಪ್ರಬಲ ಪೈಪೋಟಿ ಎದುರಾದರೂ ದಿಟ್ಟ ಹೋರಾಟ ತೋರಿದ ಭಾರತದ ಸೈನಾ ನೆಹ್ವಾಲ್‌ ಇಲ್ಲಿ ನಡೆಯುತ್ತಿರುವ ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.ವಿಶ್ವ ರ್‍ಯಾಂಕ್‌ನಲ್ಲಿ ಏಳನೇ ಸ್ಥಾನ ಹೊಂದಿರುವ ಸೈನಾ ಗುರುವಾರ ರಾತ್ರಿ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ

24–22, 18–21, 21–19ರಲ್ಲಿ ಅಮೆರಿಕದ ಬೆಯಿವೆನ್‌ ಜಾಂಗ್‌ ಅವರನ್ನು ಮಣಿಸಿದರು.ಹೈದರಾಬಾದ್‌ನ ಆಟಗಾರ್ತಿ ಸೈನಾ ಎಂಟರ ಘಟ್ಟದ ಹೋರಾಟದಲ್ಲಿ ಚೀನಾದ ವಾಂಗ್‌ ಶಿಕ್ಸಿಯಾನ್‌ ಸವಾಲನ್ನು ಎದುರಿಸಲಿದ್ದಾರೆ.

ಸಿಂಧುಗೆ ಸೋಲು: ಭಾರತದ ಭರವಸೆ ಎನಿಸಿದ್ದ ಪಿ.ವಿ. ಸಿಂಧು ಮೊದಲ ಸುತ್ತಿನ ಪಂದ್ಯದಲ್ಲಿಯೇ ನಿರಾಸೆ ಕಂಡರು. ವಿಶ್ವ ರ್‍ಯಾಂಕ್‌ನಲ್ಲಿ 10ನೇ ಸ್ಥಾನದಲ್ಲಿರುವ ಸಿಂಧು ಬುಧವಾರ ನಡೆದ ಪಂದ್ಯದಲ್ಲಿ 16–21, 15–21ರಲ್ಲಿ ಚೀನಾದ ಸನ್‌ ಯೂ ಎದುರು ಪರಾಭವಗೊಂಡರು.ಈ ಪಂದ್ಯ 47 ನಿಮಿಷ ನಡೆಯಿತು. ಎರಡೂ ಗೇಮ್‌ಗಳಲ್ಲಿ ಸಿಂಧು ಉತ್ತಮ ಹೋರಾಟ ತೋರಿದರಾದರೂ ಅದನ್ನು ಗೆಲುವಾಗಿ ಪರಿವರ್ತಿ ಸುವಲ್ಲಿ ವಿಫಲರಾದರು. ಮಿಶ್ರ ಡಬಲ್ಸ್‌ನಲ್ಲಿ ತರುಣ್‌ ಕೋನಾ ಮತ್ತು ಅಶ್ವಿನ್‌ ಪೊನ್ನಪ್ಪ ಜೋಡಿಯೂ ಮೊದಲ ಸುತ್ತಿನಲ್ಲಿಯೇ ಈಗಾಗಲೇ ಸೋಲು ಕಂಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.