ಹೈದರಾಬಾದ್ (ಪಿಟಿಐ): ಪ್ರಸಕ್ತ ಋತುವಿನಲ್ಲಿ ಪಡೆದ ಜಯಗಳಿಂದ ಆತ್ಮ ವಿಶ್ವಾಸ ಹೆಚ್ಚಿದ್ದು, ಮುಂದಿನ ವರ್ಷದ ಅಂತರರಾಷ್ಟ್ರೀಯ ಪಂದ್ಯ ಗಳಲ್ಲಿ ಅನುಭವಿ ಆಟಗಾರ್ತಿಯರ ಎದುರು ವಿಶ್ವಾಸದಿಂದ ಆಡುತ್ತೇನೆ ಎಂದು ಭಾರತದ ಬ್ಯಾಡ್ಮಿಂಟನ್ ‘ತಾರೆ’ ಪಿ.ವಿ ಸಿಂಧು ತಿಳಿಸಿದ್ದಾರೆ.

‘ಅಂತರರಾಷ್ಟ್ರೀಯ ಹಂತದ ಸ್ಪರ್ಧೆಗಳಲ್ಲಿ ಸ್ಪರ್ಧೆಯೂ ಕಠಿಣ ವಾಗಿರುತ್ತದೆ. ಅಗ್ರ ಶ್ರೇಯಾಂಕಿತ ಆಟಗಾರ್ತಿಯರ ಎದುರು ಆಡುವಾಗ ನಾನು ಮಾನಸಿಕ ಒತ್ತಡಕ್ಕೆ ಒಳಗಾಗುವುದಿಲ್ಲ. ನಾವು ಅನುಭವ ಗಳಿಸಿದಷ್ಟೂ ವಿಶ್ವಾಸವೂ ಹೆಚ್ಚುತ್ತದೆ’ ಎಂದು ಹೇಳಿದ್ದಾರೆ.

‘ ಈ ವರ್ಷ ನನ್ನ ಪಾಲಿಗೆ ಸ್ಮರಣೀಯ ವಾದುದು. ಮುಂದಿನ ದಿನಗಳಲ್ಲಿ ಇದೇ ಮಟ್ಟದ ಆಟವನ್ನೇ ಮುಂದುವರೆಸುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಂಧು ಈ ವರ್ಷ ಮಲೇಷ್ಯಾ ಓಪನ್, ಮಕಾವ್ ಓಪನ್ ಜೊತೆಗೆ ವಿಶ್ವ ಚಾಂಪಿಯನ್ಷಿಪ್ನಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಮುಂದಿನ ವರ್ಷ ಸೂಪರ್ ಸಿರೀಸ್, ಏಷ್ಯನ್ ಗೇಮ್ಸ್ ಹಾಗೂ ಕಾಮನ್ವೆಲ್ತ್ ಕೂಟಗಳಲ್ಲಿ ಭಾಗವಹಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.