ಗುರುವಾರ , ಜನವರಿ 23, 2020
27 °C

ಬ್ಯಾಡ್ಮಿಂಟನ್: ನಾಲ್ಕರಘಟ್ಟಕ್ಕೆ ಸೈನಾ ನೆಹ್ವಾಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ವಾಲಾಲಂಪುರ (ಐಎಎನ್‌ಎಸ್): ಡೆನ್ಮಾರ್ಕ್‌ನ ಟಿನ್ ಬಾನ್ ಒಡ್ಡಿದ ಸವಾಲನ್ನು ಯಶಸ್ವಿಯಾಗಿ ಮೆಟ್ಟಿನಿಂತ ಸೈನಾ ನೆಹ್ವಾಲ್ ಮಲೇಷ್ಯನ್ ಓಪನ್ ಸೂಪರ್ ಸೀರಿಸ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದರು.

ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಆಟಗಾರ್ತಿ 21-13, 21-23, 21-13 ರಲ್ಲಿ ಎದುರಾಳಿಯನ್ನು ಮಣಿಸಿದರು. 56 ನಿಮಿಷಗಳ ಹೋರಾಟದ ಬಳಿಕ ಸೈನಾ ಗೆಲುವಿನ ನಗು ಬೀರಿದರು.

ನಾಲ್ಕರಘಟ್ಟದ ಪಂದ್ಯದಲ್ಲಿ ಅವರು ಚೀನಾದ ವಾಂಗ್ ಯಿಹಾನ್ ವಿರುದ್ಧ ಪೈಪೋಟಿ ನಡೆಸುವರು. ದಿನದ ಮತ್ತೊಂದು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಗ್ರಶ್ರೇಯಾಂಕದ ವಾಂಗ್ 21-13, 21-15 ರಲ್ಲಿ ಚೀನಾದವರೇ ಆದ ಕ್ಸುರುಯ್ ಲಿ ವಿರುದ್ಧ ಗೆಲುವು ಪಡೆದರು.

ಕಳೆದ ತಿಂಗಳು ನಡೆದ ವಿಶ್ವ ಸೂಪರ್ ಸೀರಿಸ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೈನಾ ಅವರು ಟಿನ್ ಬಾನ್ ಎದುರು ನೇರ ಸೆಟ್‌ಗಳ ಗೆಲುವು ಪಡೆದಿದ್ದರು. ಆದರೆ ಈ ಬಾರಿ ಡೆನ್ಮಾರ್ಕ್‌ನ ಆಟಗಾರ್ತಿ  ಸೈನಾ ಎದುರು ಸುಲಭದಲ್ಲಿ ತಲೆಬಾಗಲಿಲ್ಲ.

ಪ್ರತಿಕ್ರಿಯಿಸಿ (+)