ಬ್ಯಾಡ್ಮಿಂಟನ್: ರಾಜೀವ್ ಶುಭಾರಂಭ

7

ಬ್ಯಾಡ್ಮಿಂಟನ್: ರಾಜೀವ್ ಶುಭಾರಂಭ

Published:
Updated:

ಬೆಂಗಳೂರು: ಎಚ್‌ಬಿಸಿಸಿಯ ರಾಜೀವ್ ರಾಜಗೋಪಾಲ ಅವರು ಇಲ್ಲಿ ಆರಂಭವಾದ ಯೊನೆಕ್ಸ್ ಸನ್ ರೈಸ್ ರಾಜ್ಯ ಬ್ಯಾಡ್ಮಿಂಟನ್ ಟೂರ್ನಿಯ 10 ವರ್ಷದೊಳಗಿನವರ ಬಾಲಕರ ವಿಭಾಗದಲ್ಲಿ ಶುಭಾರಂಭ ಮಾಡಿದರು.ಶನಿವಾರ ಇಲ್ಲಿನ ದೇವನಹಳ್ಳಿ ಕ್ಲಬ್‌ನಲ್ಲಿ ನಡೆದ ಪಂದ್ಯದಲ್ಲಿ ರಾಜೀವ್ 21-14, 21-7ರಲ್ಲಿ ಜೆಜಿಆರ್‌ವಿಕೆಯ ಎಸ್.ಆರ್. ಅನಿರುಧ್ ವಿರುದ್ಧ ಗೆಲುವು ಪಡೆದರು. ಇದೇ ವಿಭಾಗದಲ್ಲಿ ಬೆಳಗಾವಿಯ ಯಶ್ ಪಾಟೀಲ್ 21-4, 21-5ರಲ್ಲಿ ಹುಬ್ಬಳ್ಳಿಯ ಕೆ. ತರುಣ್ ರಮಣ್ ಮೇಲೂ, ಸನೀತ್ ಎಸ್. ದಯಾನಂದ್ 21-7, 21-7ರಲ್ಲಿ ಶಿವಮೊಗ್ಗದ ಯಶವಂತ ವಿರುದ್ಧವೂ, ಚಿನ್ಮಯ ವೇಂಕಟೇಶ್ 21-6, 21-7ರಲ್ಲಿ ಕೆ.ಜಿ. ಅರ್ಜುನ್ ಕೃಷ್ಣ ಮೇಲೂ, ಶಿವದೀಪ್ ಜಯಂತ್ 21-4, 21-5ರಲ್ಲಿ ಆರ್. ಆದಿತ್ಯ ವಿರುದ್ಧ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry