ಬ್ಯಾಡ್ಮಿಂಟನ್: ರಿಷಿಕೇತ್, ವರ್ಷಾಗೆ ಪ್ರಶಸ್ತಿಯ ಗರಿ

7

ಬ್ಯಾಡ್ಮಿಂಟನ್: ರಿಷಿಕೇತ್, ವರ್ಷಾಗೆ ಪ್ರಶಸ್ತಿಯ ಗರಿ

Published:
Updated:

ಬೆಂಗಳೂರು: ರಿಷಿಕೇತ್ ಯಲಿಗಾರ್ ಹಾಗೂ ವರ್ಷಾ ಬಿಲ್ವಾಡಿ ಅವರು ಇಲ್ಲಿ ಮುಕ್ತಾಯವಾದ ವೇರ್ ಹೌಸ್ ಫೈವ್ ಸ್ಟಾರ್ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಪಡೆದರು.ಸದಾಶಿವನಗರ ಕ್ಲಬ್ ಅಂಗಳದಲ್ಲಿ ಮಂಗಳವಾರ ನಡೆದ ಫೈನಲ್ ಪಂದ್ಯದಲ್ಲಿ ಪುರುಷರ ವಿಭಾಗದಲ್ಲಿ ರಿಷಿಕೇತ್ 21-14, 21-14ರಲ್ಲಿ ವೆಂಕಟೇಶ್ ಪ್ರಸಾದ್ ಅವರನ್ನು ಮಣಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಎರಡೂ ಗೇಮ್‌ಗಳಲ್ಲಿ ಉತ್ತಮ ಪ್ರದರ್ಶನ ತೋರಿದ ರಿಷಿಕೇತ್‌ಗೆ ಗೆಲುವು ಒಲಿಯಿತು.ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ ವರ್ಷಾ ಬಿಲ್ವಾಡಿ 20-22, 24-22, 21-13ರಲ್ಲಿ ಜಿ.ಎಂ. ನಿಶ್ವಿತಾ ಅವರನ್ನು ಪರಾಭವಗೊಳಿಸಿ ಚಾಂಪಿಯನ್ ಆದರು. ಮೂರು ಗೇಮ್‌ಗಳಲ್ಲಿ ಉತ್ತಮ ಆಡವಾಡಿದ ವರ್ಷಾಗೆ ಮೊದಲೆರೆಡು ಗೇಮ್‌ಗಳಲ್ಲಿ ನಿಶ್ಚಿತಾ ಅವರಿಂದ ಪ್ರಬಲ ಪ್ರತಿರೋಧ ಎದುರಿಸಬೇಕಾಯಿತು. ವರ್ಷಾ ಕೊನೆಯ ಗೇಮ್‌ನಲ್ಲಿ ಸುಲಭ ಗೆಲುವು ಪಡೆದು ಪ್ರಶಸ್ತಿಯನ್ನು ಬಾಚಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry