ಮಂಗಳವಾರ, ಏಪ್ರಿಲ್ 20, 2021
29 °C

ಬ್ಯಾಡ್ಮಿಂಟನ್: ಸೆಮಿಗೆ ಗುರುಸಾಯಿದತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತದ ಆರ್‌ಎಂವಿ ಗುರುಸಾಯಿದತ್ ಮತ್ತು ಕೆ. ಶ್ರೀಕಾಂತ್ ಇಲ್ಲಿ ನಡೆಯುತ್ತಿರುವ ಮಕಾವ್ ಓಪನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಿದರು.

ಶುಕ್ರವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗುರುಸಾಯಿದತ್ 21-11, 21-14 ರಲ್ಲಿ ಹಾಂಕಾಂಗ್‌ನ ಯಾನ್ ಕಿಟ್ ಚಾನ್ ವಿರುದ್ಧ ಗೆದ್ದರು. ಇಲ್ಲಿ 12ನೇ ಶ್ರೇಯಾಂಕ ಪಡೆದಿರುವ ಗುರು 34 ನಿಮಿಷಗಳಲ್ಲಿ ಜಯ ಸಾಧಿಸಿದರು.

ಇನ್ನೊಂದು ಎಂಟರಘಟ್ಟದ ಪಂದ್ಯದಲ್ಲಿ ಶ್ರೀಕಾಂತ್ 16-21, 21-19, 21-19 ರಲ್ಲಿ ಹಾಂಕಾಂಗ್‌ನ ನಾನ್ ವಿ ಎದುರು ಪ್ರಯಾಸದ ಗೆಲುವು ಪಡೆದರು. ಗುರುಸಾಯಿದತ್ ಸೆಮಿಫೈನಲ್‌ನಲ್ಲಿ ಚೀನಾದ ಯುಕುನ್ ಚೆನ್ ಎದುರೂ, ಶ್ರೀಕಾಂತ್ ಚೀನಾದ ಹುವಾನ್ ಗಾವೊ ವಿರುದ್ಧವೂ ಪೈಪೋಟಿ ನಡೆಸುವರು.

ಅಶ್ವಿನಿ ಪೊನ್ನಪ್ಪಗೆ ಸೋಲು: ಆದರೆ ಅಶ್ವಿನಿ ಪೊನ್ನಪ್ಪ ಮಿಶ್ರ ಡಬಲ್ಸ್ ಮತ್ತು ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಸೋಲು ಅನುಭವಿಸಿದರು.

ಮಿಶ್ರ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಅಶ್ವಿನಿ- ತರುಣ್ ಕೋನ ಜೋಡಿ 9-21, 13-21 ರಲ್ಲಿ ಇಂಡೊನೇಷ್ಯದ ತೊಂತೊವಿ ಅಹ್ಮದ್ ಹಾಗೂ ಲಿಲಿಯಾನಾ ನತ್ಸಿರ್ ಎದುರು ಪರಾಭವಗೊಂಡಿತು.

ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಮತ್ತು ಪ್ರದ್ನ್ಯಾ ಗದ್ರೆ 16-21, 21-12, 15-21 ರಲ್ಲಿ ಇಂಡೊನೇಷ್ಯದ ಕೋಮಲಾ ದೇವಿ ಹಾಗೂ ಜೆನ್ನಾ ಗೊಜಾಲಿ ಎದುರು ಸೋಲು ಅನುಭವಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.