ಬ್ಯಾಸ್ಕೆಟ್‌ಬಾಲ್: ಗ್ರೀನ್ಸ್‌ಗೆ ಜಯ

7

ಬ್ಯಾಸ್ಕೆಟ್‌ಬಾಲ್: ಗ್ರೀನ್ಸ್‌ಗೆ ಜಯ

Published:
Updated:

ಬೆಂಗಳೂರು: ಡಾವಣಗೆರೆ ಗ್ರೀನ್ಸ್ ತಂಡದವರು ಇಲ್ಲಿ ನಡೆಯುತ್ತಿರುವ ರಾಜ್ಯ ಜೂನಿಯರ್ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್ ಟೂರ್ನಿಯ ಬಾಲಕರ ವಿಭಾಗದಲ್ಲಿ ಗೆಲುವು ಪಡೆದರು.ಇಲ್ಲಿನ ಕಂಠೀರವ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಗ್ರೀನ್ಸ್ ತಂಡ 46-32ಪಾಯಿಂಟ್‌ಗಳಿಂದ ಭಾರತ್ ತಂಡವನ್ನು ಸೋಲಿಸಿತು. ವಿರಾಮಕ್ಕೆ ಮೊದಲು ವಿಜಯಿ ತಂಡ 29-16ಪಾಯಿಂಟ್‌ಗಳ ಮುನ್ನಡೆ ಹೊಂದಿತ್ತು.ಇದೇ ಚಾಂಪಿಯನ್‌ಷಿಪ್‌ನ ಇತರ ಪಂದ್ಯಗಳಲ್ಲಿ ಹುಲಸೂರು ತಂಡ 56-34ರಲ್ಲಿ ಕನಕ ಕೋಲಾರ ತಂಡದ ಎದುರೂ, ಜೆಎಸ್‌ಸಿ ತಂಡ 47-23 ಪಾಯಿಂಟ್‌ಗಳಿಂದ ಸ್ಪೋರ್ಟ್ಸ್ ಹಾಸ್ಟೆಲ್ ಮೇಲೂ ವಿಜಯ ಸಾಧಿಸಿ ಮುಂದಿನ ಸುತ್ತಿಗೆ ಮುನ್ನಡೆಯಿತು.ವಿಜಯಿ ತಂಡ ಆರಂಭದಿಂದಲೂ ಪಾಯಿಂಟ್ ಗಳಿಕೆಯಲ್ಲಿ ಮುಂದಿತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry