ಲಂಡನ್ (ಪಿಟಿಐ): ಕಿರು ಸಾಲ ಯೋಜನೆಯ ರೂವಾರಿ, ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮಹಮ್ಮದ್ ಯೂನಸ್ ಅವರು ಗ್ಲಾಸ್ಗೊ ಕ್ಯಾಲೆಡೋನಿಯಾ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಆಯ್ಕೆಯಾಗಿದ್ದಾರೆ. ಲಾರ್ಡ್ ಮ್ಯಾಕ್ಡೊನಾಲ್ಡ್ ಅವರ ಐದು ವರ್ಷಗಳ ಅಧಿಕಾರಾವಧಿ ಪೂರ್ಣಗೊಂಡಿದ್ದು, ತೆರವಾದ ಸ್ಥಾನಕ್ಕೆ ಯೂನಸ್ ನೇಮಕಗೊಂಡಿದ್ದಾರೆ.

ಬಾಂಗ್ಲಾದೇಶದಲ್ಲಿ ಕಿರು ಸಾಲ ಯೋಜನೆ ಹಾಗೂ ಗ್ರಾಮೀಣ ಬ್ಯಾಂಕಿಂಗ್ ಸೇವೆಯಲ್ಲಿ ಯೂನಸ್ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರು 1976ರಲ್ಲಿ ಸ್ಥಾಪಿಸಿದ ಗ್ರಾಮೀಣ ಬ್ಯಾಂಕ್ ಪ್ರಸ್ತುತ ಅಮೆರಿಕ ಸೇರಿದಂತೆ 100 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತದೆ.

`ಚಾನ್ಸಲರ್ ಸ್ಥಾನಕ್ಕೆ ನೀಡಿದ ಆಮಂತ್ರಣವನ್ನು ಯೂನಸ್ ಒಪ್ಪಿಕೊಂಡಿರುವುದು ತಮ್ಮ ವಿಶ್ವವಿದ್ಯಾಲಯಕ್ಕೆ ಗೌರವ ತಂದುಕೊಟ್ಟಿದೆ~ ಎಂದುಉಪ ಕುಲಪತಿ ಹಾಗೂ ಪ್ರಾಂಶುಪಾಲೆ ಪಮೇಲಾ ಗಿಲ್ಲಿ ತಿಳಿಸಿದ್ದಾರೆ. 2010ರಲ್ಲಿ ವಿವಿಯು ಬಾಂಗ್ಲಾದಲ್ಲಿ ನರ್ಸಿಂಗ್ ಕಾಲೇಜು ಸ್ಥಾಪಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.