ಮಂಗಳವಾರ, ಮೇ 11, 2021
20 °C

ಬ್ರಿಟನ್: 13 ವಯಸ್ಸಿನ ಬಾಲಕಿಯರಿಗೆ ಉಚಿತ ಗರ್ಭ ನಿರೋಧಕ ಮಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಐಎಎನ್‌ಎಸ್): ದೇಶದಾದ್ಯಂತ ಹೆಚ್ಚುತ್ತಿರುವ ಅಪ್ರಾಪ್ತ ವಯಸ್ಸಿನ ಬಾಲಕಿಯರ ಗರ್ಭಧಾರಣೆ ತಡೆಯುವ ಉದ್ದೇಶದಿಂದ ವೈದ್ಯರ ಅನುಮೋದನೆ ಮತ್ತು ಪೋಷಕರ ಅನುಮತಿ ಇಲ್ಲದೆ ಬ್ರಿಟನ್‌ನಲ್ಲಿ 13 ವರ್ಷದ ಒಳಗಿನ ಬಾಲಕಿಯರಿಗೆ ಗರ್ಭ ನಿರೋಧಕ ಮಾತ್ರೆಗಳನ್ನು ಎಲ್ಲ ಔಷಧಿ ಮಳಿಗೆಗಳಲ್ಲಿ ಉಚಿತವಾಗಿ ಪೂರೈಸಲು ಅವಕಾಶ ಕಲ್ಪಿಸಿಕೊಡಲಾಗಿದೆ.ಈ ಯೋಜನೆಯು ಪ್ರಾಯೋಗಿಕವಾಗಿ ಮ್ಯಾಂಚೆಸ್ಟರ್ ಮತ್ತು ಕ್ರೊಯ್ಡನ್ ನಗರಗಳಲ್ಲಿ ಜಾರಿಯಾಗಲಿದೆ ಎಂದು ತಿಳಿಸಿವೆ. ಆದರೆ, ಈ ಕ್ರಮ ಟೀಕೆಗಳಿಂದ ಹೊರತಾಗಿಲ್ಲ. ಈ ಯೋಜನೆ ಅಪಾಯಕಾರಿಯಾಗಿದ್ದು, ಅಪ್ರಾಪ್ತ ವಯಸ್ಸಿನವರ ಲೈಂಗಿಕ ಸಂಬಂಧಗಳನ್ನು ಕಾನೂನು ವ್ಯಾಪ್ತಿಗೆ ತರುವಂತಿದೆ ಎಂದು ಕ್ರೈಸ್ತ ಪ್ರಚಾರಕರು ಟೀಕಿಸಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.