ಗುರುವಾರ , ಮೇ 13, 2021
22 °C

ಬ್ಲಾಗ್‌ನಲ್ಲಿ ಅಡ್ವಾಣಿ ಭಾವ ಲಹರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಣಜಿ (ಐಎಎನ್‌ಎಸ್): ಅನಾರೋಗ್ಯದಿಂದಾಗಿ ಬಿಜೆಪಿ ಕಾರ್ಯಕಾರಿಣಿಯಲ್ಲಿ ಗೈರುಹಾಜರಿದ್ದ ಪಕ್ಷದ ಹಿರಿಯ ಮುಖಂಡ ಎಲ್.ಕೆ.ಅಡ್ವಾಣಿ ಅವರು ಪೌರಾಣಿಕ ಹಾಗೂ ಐತಿಹಾಸಿಕ ವ್ಯಕ್ತಿಗಳನ್ನು ಪ್ರಸ್ತಾಪಿಸುವ ಮೂಲಕ ಕಾರ್ಯಕರ್ತರೊಂದಿಗೆ ತಮ್ಮ ಭಾವನೆಯನ್ನು ಹಂಚಿಕೊಂಡಿದ್ದಾರೆ.`ಕೃಷ್ಣನ ವಿಶ್ವರೂಪ, ಭೀಷ್ಮ ಪಿತಾಮಹ, ಸರ್ವಾಧಿಕಾರಿಗಳಾಗಿದ್ದ ಹಿಟ್ಲರ್, ಮುಸಲೋನಿ...ಹೀಗೆ ಹರಿಯುತ್ತ ಹೋಗುತ್ತದೆ ಬ್ಲಾಗ್‌ನಲ್ಲಿ ಅಡ್ವಾಣಿ ಭಾವ ಲಹರಿ.ತಮ್ಮ ಈಗಿನ ಸ್ಥಿತಿಯನ್ನು ಅವರು ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮನಿಗೆ ಹೋಲಿಸಿಕೊಳ್ಳುತ್ತಾರೆ. ಸರ್ವಾಧಿಕಾರಿಗಳಾಗಿದ್ದ ಹಿಟ್ಲರ್ ಮತ್ತು ಮುಸಲೋನಿ ಕುರಿತ ಕಥಾನಕವೊಂದನ್ನು ಅಡ್ವಾಣಿ ತಮ್ಮ ಬ್ಲಾಗ್‌ನಲ್ಲಿ ಉಲ್ಲೇಖಿಸಿದ್ದಾರೆ.` ಅದು ಎರಡನೇ ಮಹಾಯುದ್ಧದ ಕಾಲ. ನಾವಿಬ್ಬರು ಮಾಡಿದ ಪಾಪಕ್ಕೆ ಸತ್ತ ಮೇಲೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಹಿಟ್ಲರ್ ಮುಸಲೋನಿಗೆ ಹೇಳುತ್ತಾನೆ. ಸ್ವರ್ಗಕ್ಕೆ ಹೋಗಲು ಪೋಪ್ ನೆರವು ಪಡೆಯುವುದಾಗಿ ಮುಸಲೋನಿ ಮರು ನುಡಿಯುತ್ತಾನೆ. ಹಿಟ್ಲರ್ ಕೂಡ ಇದೇ ಮಾತು ಹೇಳುತ್ತಾನೆ. ಕೊನೆಗೆ ಈ ಇಬ್ಬರು ಸರ್ವಾಧಿಕಾರಿಗಳು ನರಕಕ್ಕೆ ಹೋದರೆ, ಪೋಪ್ ಮಾತ್ರ ಸ್ವರ್ಗ ಸೇರಿದರು' ಎಂಬಲ್ಲಿಗೆ ಕಥೆ ಮುಗಿಯುತ್ತದೆ.ಮೋದಿಗೆ ಪಕ್ಷದಲ್ಲಿ ಮಹತ್ವದ ಪಾತ್ರ ನೀಡುವುದನ್ನು ವಿರೋಧಿಸಿದ್ದಕ್ಕೆ ಪ್ರತಿಭಟನೆ ಎದುರಿಸಿದ ಬೆನ್ನಲ್ಲಿಯೇ ಅಡ್ವಾಣಿ ತಮ್ಮ ಬ್ಲಾಗ್‌ನಲ್ಲಿ ಸರ್ವಾಧಿಕಾರಿಗಳ ಪ್ರಸ್ತಾಪ ಮಾಡಿದ್ದಾರೆ ಎನ್ನುವುದು ಗಮನಾರ್ಹ ಸಂಗತಿ. ಕೆಲ ದಿನಗಳ ಹಿಂದೆ ಗೋವಾದ ಕಾಂಗ್ರೆಸ್ ಸಂಸದ ಶಾಂತಾರಾಂ ನಾಯ್ಕ ಕೂಡ ಮೋದಿ ಅವರನ್ನು ` ಹಿಟ್ಲರ್'ಗೆ ಹೋಲಿಸಿದ್ದರು.ಅಡ್ವಾಣಿಗೆ ವಿವಾದ ಹೊಸದಲ್ಲ...

ಹಿಂದೆಯೂ ಅವರು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು.2012, ಮೇ 26: ಮುಂಬೈನಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಬಳಿಕ ನಡೆದ ರ‍್ಯಾಲಿಯಲ್ಲಿ ಗೈರುಹಾಜರಿ. ನಿತಿನ್ ಗಡ್ಕರಿ ಅವರನ್ನು ಎರಡನೇ ಅವಧಿಗೆ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಅಸಮಾಧಾನಗೊಂಡು ರ‍್ಯಾಲಿ ತಪ್ಪಿಸಿಕೊಂಡ ಅಡ್ವಾಣಿ.2012, ಸೆಪ್ಟೆಂಬರ್ 3:  ಕಾಂಗ್ರೆಸ್ ಹಾಗೂ ಬಿಜೆಪಿಯೇತರ ರಾಜಕಾರಣಿ ದೇಶದ ಮುಂದಿನ ಪ್ರಧಾನಿಯಾಗಲಿ ಎಂದು ನಿರೀಕ್ಷಿಸುತ್ತೇನೆ.2013, ಮಾರ್ಚ್ 9: ಈಗ ಆಡಳಿತದಲ್ಲಿರುವ ಪಕ್ಷವನ್ನು ಜನ ವಿರೋಧಿಸುತ್ತಿದ್ದಾರೆ. ಅದೇ ರೀತಿ ಬಿಜೆಪಿ ಬಗ್ಗೆಯೂ ಅವರಿಗೆ ಭ್ರಮನಿರಸನವಾಗಿದೆ.2013, ಮೇ 12: ಕರ್ನಾಟಕದಲ್ಲಿ ಬಿಜೆಪಿ ಗೆದ್ದಿದ್ದರೆ ನನಗೆ ಅಚ್ಚರಿಯಾಗುತ್ತಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.