ಮಂಗಳವಾರ, ಜನವರಿ 21, 2020
28 °C

ಭತ್ತದ ಗದ್ದೆಗೆ ಬೆಂಕಿ ಬೇಡ: ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುನಿರಾಬಾದ್‌:  ತುಂಗಭದ್ರಾ ಅಚ್ಚು­ಕಟ್ಟು ಪ್ರದೇಶದಲ್ಲಿ ನಿರಂತರವಾಗಿ ಬತ್ತ ಬೆಳೆಯಲಾಗುತ್ತಿದ್ದು ಸುಗ್ಗಿಯ ಬೆಳೆ­ಯನ್ನು ತೆಗೆದುಕೊಂಡ ರೈತ ಬೇಸಿಗೆ ಬೆಳೆಗೆ ತಯಾರಿ ನಡೆಸಿದ್ದು ಹೊಲಕ್ಕೆ ಬೆಂಕಿ ಹಾಕುವ ಕೆಲಸ ರೈತರಿಂದ ಅವ್ಯಾಹ­­ತವಾಗಿ ನಡೆದಿದೆ.ಗಂಗಾವತಿ ಕೃಷಿ ಸಂಶೋಧನಾ ಕೇಂದ್ರದ ತಳಿ ವಿಜ್ಞಾನಿ ಪ್ರೋ.ಮೊಹ್ಮದ್‌ ಇಬ್ರಾಹಿಂ ಹೇಳುವಂತೆ ಗ್ರಾಮೀಣ ಜನರ ಮೂಲಾಧಾರ ಬೇಸಾಯ, ಅದಕ್ಕೆ ಮೂಲಾಧಾರ ಮಣ್ಣು. ಮಣ್ಣಿ­ನಲ್ಲಿ ರೈತನ ಮಿತ್ರರಂತೆ ಕೆಲಸ ಮಾಡುವ ಅನೇಕ ಸೂಕ್ಷ್ಮಾಣು­ಜೀವಿ­ಗಳು ನೆಲೆಸಿರುತ್ತವೆ.ಆದರೆ ರೈತರು ಬತ್ತದ ಕೊಯ್ಲಿನ ನಂತರ ಉಳಿಯುವ ಪುಡಿ ಬತ್ತದ ಹುಲ್ಲನ್ನು ಬೆಂಕಿ ಹಾಕಿ ಸುಡುತ್ತಿರುವುದರಿಂದ ಅಂಥಹ ಅನೇಕ ಜೀವಿಗಳು ಸತ್ತು ಹೋಗುತ್ತವೆ ಇದರಿಂದ ಪರಿಸರ ಅಸಮತೋಲನ ಉಂಟಾಗುತ್ತದೆ.ಬೆಂಕಿಯ ಉಷ್ಣದ ಪರಿಣಾಮ ಮಣ್ಣು ತನ್ನ ಮೂಲ ಸತ್ವವನ್ನು ಕಳೆದುಕೊಳ್ಳುವ ಸಂಭವ­ವಿರುತ್ತದೆ ಅಲ್ಲದೆ ಬದುವಿನಲ್ಲಿನ ಇತರ ಗಿಡಗಳಿಗೂ  ಮಾರುಕಟ್ಟೆಯಲ್ಲಿ ಒಳ್ಳೆಯ ಬೆಲೆ ಕೂಡ ಇರಬೇಕು. ಆದರೆ ಎರಡೂ ನಮ್ಮ ನಿಯಂತ್ರಣದಲ್ಲಿಲ್ಲ.ರೈತ ಖರ್ಚನ್ನು ಕಡಿಮೆ ಮಾಡಿಕೊ­ಳ್ಳುವುದು  ಹಾಗೂ ಬತ್ತದ ಉಪ ಉತ್ಪನ್ನ­ವಾದ ಹುಲ್ಲಿಗೆ ಬೆಂಕಿ ಇಡುವ ಬದಲಿಗೆ ಅದನ್ನು ಸಂಗ್ರಹಿಸಿ ಬಳಸ­ಬಹುದು ಅಥವಾ ಮಾರಾಟ ಮಾಡಿ ಹಣ ಗಳಿಸಬಹುದಾಗಿದೆ ಎಂದು ಅಭಿ­ಪ್ರಾ­ಯಪಡುತ್ತಾರೆ. ಇದಾವು­ದನ್ನೂ ಲೆಕ್ಕಿಸದ ರೈತರು ದೊಡ್ಡ ಗಾತ್ರದ ಹುಲ್ಲನ್ನು ಮಾತ್ರ ಸಂಗ್ರಹಿಸಿ ಪುಡಿ ಹುಲ್ಲಿಗೆ ಬೆಂಕಿ ಹಾಕಿ ಸುಡುವುದನ್ನು ಮಾತ್ರ ನಿಲ್ಲಿಸುವುದಿಲ್ಲ.

ಪ್ರತಿಕ್ರಿಯಿಸಿ (+)