ಬುಧವಾರ, ಜೂನ್ 23, 2021
22 °C

ಭಯೋತ್ಪಾದಕರ ಒಳನುಸುಳುವಿಕೆ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಲೋಕಸಭೆ ಚುನಾವಣೆಗೂ ಮೊದಲು ಜಮ್ಮು ಮತ್ತು ಕಾಶ್ಮೀರದ ಗಡಿಯಲ್ಲಿ ಭಯೋ­ತ್ಪಾದಕರ ಒಳನುಸುಳುವಿಕೆ ಹೆಚ್ಚುವ  ಸಾಧ್ಯತೆಗಳಿವೆ ಎಂದು ಭದ್ರತಾ ಅಧಿಕಾರಿಗಳು ಶಂಕಿಸಿದ್ದಾರೆ. ಶ್ರೀನಗರ ಮತ್ತು ದಕ್ಷಿಣ ಕಾಶ್ಮೀರಕ್ಕೆ  ಉಗ್ರರು ಪಿರ್‌ ಪಂಜಾಲ್‌್ ವ್ಯಾಪ್ತಿಯ ಮೂಲಕ ಪ್ರವೇಶ ಪಡೆಯಲಿದ್ದಾರೆ ಎಂದು ಅವರು ಅಂದಾಜಿಸಿದ್ದಾರೆ.ಕಳೆದ ಕೆಲ ತಿಂಗಳಿಂದ ಪಿರ್ ಪಂಜಾಲ್‌ನ ದಕ್ಷಿಣದಿಂದ ಉತ್ತರದ ಗುಡ್ಡಗಾಡು ಪ್ರದೇಶದಲ್ಲಿರುವ ಉಗ್ರರ ಶಿಬಿರದ ಕಡೆ ಅವರ ಚಲನವಲನ ಹೆಚ್ಚಿದೆ. ಭಾರತ ಮತ್ತು ಪಾಕಿಸ್ತಾನದ ಗಡಿ ನಿಯಂತ್ರಣ ರೇಖೆಯ ಬದಿಯಲ್ಲಿ 42 ಉಗ್ರರ ತರಬೇತಿ ಶಿಬಿರಗಳು ಇರುವುದು ಅಧಿಕಾರಿಗಳ ನಿದ್ದೆಗೆಡಿಸಿದೆ.ಜಮ್ಮು ಮತ್ತು ಕಾಶ್ಮೀರದಲ್ಲಿ ಲೋಕಸಭೆ ಚುನಾವಣೆ ಶಾಂತಿಯುತವಾಗಿ ನಡೆದರೂ ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ನಲ್ಲಿ ನಡೆಯುವ ವಿಧಾನಸಭೆ ಚುನಾವಣೆಗೆ ಉಗ್ರರ ಕರಿನೆರಳು ಬೀಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆರು ಲೋಕಸಭಾ ಸ್ಥಾನಗಳಿರುವ ರಾಜ್ಯದಲ್ಲಿ ಏಪ್ರಿಲ್ ಮತ್ತು ಮೇನಲ್ಲಿ  ಚುನಾವಣೆ ನಡೆಯಲಿದೆ.ಜನವರಿಯಿಂದ ಮಾರ್ಚ್‌ 10ರವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳು 20 ಉಗ್ರರನ್ನು ಸಾಯಿಸಿವೆ.

ಇವರಲ್ಲಿ 11 ಜನ ಪಾಕಿಸ್ತಾನಿಯರು. ಕಳೆದ ವರ್ಷ ಇದೇ ಅವಧಿಯಲ್ಲಿ ಕೇವಲ ಮೂವರು ಉಗ್ರರು ಹತರಾಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.