ಸೋಮವಾರ, ಮೇ 16, 2022
27 °C

ಭಯೋತ್ಪಾದನೆಗೆ ಅಂತರ್ಜಾಲ ಬಳಕೆ: ಪಿಳ್ಳೈ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಯುವಕರನ್ನು ಭಯೋತ್ಪಾದನೆಯತ್ತ ಸೆಳೆಯಲು ಹಾಗೂ ದೇಶದಾದ್ಯಂತ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಲು ಅಂತರ್ಜಾಲ ಮಾಧ್ಯಮವನ್ನೇ ಪ್ರಬಲ ಅಸ್ತ್ರವನ್ನಾಗಿ ಉಗ್ರಗಾಮಿಗಳು ಬಳಸುತ್ತಿದ್ದಾರೆ ಎಂದು ಗೃಹ ಕಾರ್ಯದರ್ಶಿ ಜಿ. ಕೆ. ಪಿಳ್ಳೈ ಸೋಮವಾರ ತಿಳಿಸಿದರು.‘ಮುಂಬೈಯಲ್ಲಿ ನಡೆದಂತಹ ಭಯೋತ್ಪಾದನಾ  ಚಟುವಟಿಕೆಗಳು ಇಂಟರ್‌ನೆಟ್ ಮೂಲಕವೇ ನಡೆಯುತ್ತಿದ್ದು, ಉಗ್ರಗಾಮಿಗಳು ತಮ್ಮ ಸಂಘಟನೆಗಳಿಗೆ ಯುವಕರನ್ನು ನೇಮಕಾತಿ ಮಾಡಲು ಇಂಟರ್‌ನೆಟ್ ಅನ್ನೇ ಪ್ರಬಲ ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ’ ಎಂದು ಅವರು ಹೇಳಿದರು.ಈ ನಿಟ್ಟಿನಲ್ಲಿ ರಾಷ್ಟ್ರೀಯ ಸೈಬರ್ ಸುರಕ್ಷಾ ಕಾರ್ಯತಂತ್ರವನ್ನು ಪುನರ್‌ಪರಿಶೀಲಿಸಲು ಸರ್ಕಾರ ಕ್ರಮ ತೆಗೆದುಕೊಳ್ಳಲಿದೆ ಎಂದು ಪಿಳ್ಳೈ ತಿಳಿಸಿದರು.ನಾಸ್‌ಕಾಮ್ ಏರ್ಪಡಿಸಿದ್ದ ಸೈಬರ್ ಅಪರಾಧದ ಸವಾಲುಗಳ ಕುರಿತ ಸಮ್ಮೇಳನದಲ್ಲಿ ಅವರು ಮಾತನಾಡುತ್ತಿದ್ದರು.ಸರ್ಕಾರ ಈ ನಿಟ್ಟಿನಲ್ಲಿ ಬಿಕ್ಕಟ್ಟು ನಿರ್ವಹಣಾ ಯೋಜನೆಯೊಂದನ್ನು ತಯಾರಿಸಿದ್ದು ರಾಷ್ಟ್ರೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯಾ ತಂಡ (ಸರ್ಟ್-ಇನ್) ರೂಪಿಸಿದೆ ಎಂದೂ ಅವರು ಹೇಳಿದರು.ಸೈಬರ್ ಸುರಕ್ಷಾ ಸರ್ಟಿಫೀಕೇಶನ್ ವ್ಯವಸ್ಥೆಯನ್ನು ಬಲಪಡಿಸಬೇಕಾದ ಅಗತ್ಯವನ್ನು ಅವರು ಇದೇ ವೇಳೆ ಒತ್ತಿ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.