ಮಂಗಳವಾರ, ಮೇ 18, 2021
23 °C

ಭಯ ಹುಟ್ಟಿಸಿದ ಕಾಳಿಂಗ ಸರ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಸಿ: ಅತ್ಯಂತ ವಿಷಕಾರಿಯಾದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ತಾಲ್ಲೂಕಿನ ಬಂಡಲ ಸಮೀಪ ಬಾಳೆಕೊಪ್ಪದ ಮನೆಯೊಂದರಲ್ಲಿ ಕಾಣಿಸಿಕೊಂಡು ತೀವ್ರ ಭಯ ಮೂಡಿಸಿತು.ಶನಿವಾರ ಮಧ್ಯಾಹ್ನದ ವೇಳೆ ಮನೆಯ ಪಕಾಸಿನ ಸಂದಿಯಲ್ಲಿ ಹಾವನ್ನು ಕಂಡ ಬಾಳೆಕೊಪ್ಪದ ಗಣಪತಿ ನಾಯ್ಕ ತಕ್ಷಣ ಜಾನ್ಮನೆ ವಲಯ ಅರಣ್ಯಾಧಿಕಾರಿ ಹಿಮವತಿ ಭಟ್ಟ ಅವರಿಗೆ ತಿಳಿಸಿದರು. ಅವರು ಸ್ನೇಕ್‌ಸ್ಟಾರ್ ಪ್ರಶಾಂತ ಹುಲೇಕಲ್ ಸಂಪರ್ಕಿಸಿ ನಗರದಿಂದ 40 ಕಿ.ಮೀ. ದೂರದ ಬಾಳೆಕೊಪ್ಪಕ್ಕೆ ತಲುಪಿದರು. ನಿರಂತರ ಒಂದು ತಾಸು ಕಾಲ ಶ್ರಮಿಸಿ ಪ್ರಶಾಂತ 12.5 ಅಡಿ ಉದ್ದದ ಕಾಳಿಂಗ ಸರ್ಪವನ್ನು ಕೈಯಲ್ಲಿ ಹಿಡಿದು ಚೀಲಕ್ಕೆ ತುಂಬಿದರು.ಪ್ರಶಾಂತ ಹೇಳುವ ಹಾಗೆ ಹಾವಿನಲ್ಲಿ ಅತ್ಯಂತ ವಿಷಕಾರಿ ಕಾಳಿಂಗಸರ್ಪ. ಆದರೆ ಇದು ಅಪಾಯಕಾರಿಯಲ್ಲ, ಜೀವ ಭಯ ಉಂಟಾದಾಗ ಮಾತ್ರ ಇದು ದಾಳಿ ಮಾಡುತ್ತದೆ. ಮಳೆಗಾಲದಲ್ಲಿ ಆಹಾರ ಕೊರತೆಯಾಗಿ ಈ ಕಾಳಿಂಗಸರ್ಪ ಊರಿಗೆ ಬಂದಿರಬಹುದು.ಹಾವನ್ನು ಸುರಕ್ಷಿತವಾಗಿ ಅರಣ್ಯ ಇಲಾಖೆ ಸಿಬ್ಬಂದಿ ಸಹಕಾರದೊಂದಿಗೆ ಕತ್ತಲೆಕಾನಿನ ಕಾಡಿಗೆ ಬಿಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.