ಬುಧವಾರ, ಮೇ 25, 2022
29 °C

`ಭವನ' ಕುಸಿತ: ದುರಸ್ತಿಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ತಾಲ್ಲೂಕಿನ ದುಬಲಗುಂಡಿ ಗ್ರಾಮದಲ್ಲಿ ಕುಸಿದುಬಿದ್ದ ಮಾದಿಗ ಸಮಾಜ ಸಮೂದಾಯ ಭವನ ಕಟ್ಡಡ ದುರುಸ್ತಿ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂದು ಕಾಂಗ್ರೆಸ್ ಮುಖಂಡ ವಿಜಯಕುಮಾರ ನಾತೆ ಆಗ್ರಹಿಸಿದ್ದಾರೆ.ಆ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ನಿರ್ಮಿಸಲಾದ ಕಾಮಗಾರಿ ಕಳೆಪೆ ಆಗಿದ್ದರಿಂದ ಕಳೆದ ಒಂದು ವರ್ಷದ ಹಿಂದೆ ಕುಸಿದು ಬಿದ್ದಿರುವ ವಿಷಯ ಸರ್ವರ ಗಮನಕ್ಕೆ ಇದ್ದರೂ ಅದರ ಅಭಿವೃದ್ಧಿ ಕೈಗೊಳ್ಳುವ ಮನಸ್ಸು ಯಾರೂ ಮಾಡುತ್ತಿಲ್ಲ.ಸಮುದಾಯ ಭವನದಲ್ಲಿ ವಿವಿಧ ಸಾಮಗ್ರಿಗಳು ಇಡುವುದಕ್ಕೆ ಹಾಗೂ ಸಭೆ ಸಮಾರಂಭ ನಡೆಸುವುದಕ್ಕೆ ಸ್ಥಳವಿಲ್ಲದೇ ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ.ಸ್ಥಳ ಇಲ್ಲದ ವಿಷಯ ಜಿಲ್ಲಾ ಪಂಚಾಯಿತಿ ಸದಸ್ಯೆ ಚಂದ್ರಮ್ಮ ಗಂಗಶೆಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಚಂದ್ರಕಲಾ ಶಿರಶೆಟ್ಟಿ ಅವರ ಗಮನಕ್ಕೂ ತರಲಾಗಿದೆ. ಆದರೇ ಈವರೆಗೆ ಯಾವುದೇ ಪ್ರಯೋಜನ ಆಗಿಲ್ಲ ಎಂದು ವಿಜಯಕುಮಾರ ನಾತೆ ಮೊದಲಾದವರು ಆಪಾದಿಸಿದ್ದಾರೆ.ದಕ್ಷ ಆಡಳಿತಕ್ಕೆ ಹೆಸರಾದ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿಗಳು ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಬೇಕು ಎಂದು ಅವರು ಈ ಮೂಲಕ ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.