ಶನಿವಾರ, ಏಪ್ರಿಲ್ 17, 2021
32 °C

ಭವನ ನಿರ್ಮಾಣಕ್ಕೆ ರೂ10 ಲಕ್ಷ ಅನುದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಮೆಕ್ಯಾನಿಕ್ ಕಾರ್ಮಿಕರ ಭವನ  ನಿರ್ಮಾಣಕ್ಕಾಗಿ ತಮ್ಮ ಅನುದಾನದಲ್ಲಿರೂ10 ಲಕ್ಷ ನೀಡುವುದಾಗಿ ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಭರವಸೆ ನೀಡಿದರು.  ನಗರದ ತ.ರಾ.ಸು ರಂಗಮಂದಿರದಲ್ಲಿ ಭಾನುವಾರ ಜಿಲ್ಲಾ ದ್ವಿಚಕ್ರ ವಾಹನಗಳ ಮೆಕ್ಯಾನಿಕ್‌ಗಳ ಕಾರ್ಮಿಕರ ಸಂಘವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬಡಗಿ ಕಾರ್ಮಿಕರು ಈಗಾಗಲೇ ಸ್ವಂತ ಹಣದಲ್ಲಿ ಜಮೀನನ್ನು ಖರೀದಿಸಿದ್ದು, ಅದನ್ನು ರಾಜೀವ ಗಾಂಧಿ ಆಶ್ರಯ ಯೋಜನೆ ಅಡಿ ಸುಮಾರುರೂ16 ಕೋಟಿ ವೆಚ್ಚದಲ್ಲಿ ಮನೆಗಳನ್ನು ನಿರ್ಮಾಣ ಮಾಡಲು ಕ್ರಿಯಾ ಯೋಜನೆ ತಯಾರಿಸಿ ಕಳುಹಿಸಲಾಗಿದೆ. ಈ ಮಾದರಿಯಲ್ಲಿ ಕಾರ್ಮಿಕರು ಸಹ ಸ್ವಂತ ಮನೆಗಳನ್ನು ಮಾಡಿಕೊಳ್ಳುವಂತಹ  ಅವಕಾಶವಿದೆ ಎಂದು ಸಲಹೆ ನೀಡಿದರು.ಶಾಸಕ ಎಸ್.ಕೆ. ಬಸವರಾಜನ್ ಮಾತನಾಡಿ, ಒಗ್ಗಟಿನ ಬಲ ಇದ್ದರೆ ಸರ್ಕಾರಿ ಸೌಲಭ್ಯ ಪಡೆಯಲು ಖಂಡಿತ ಸಾಧ್ಯವಿದೆ ಎಂದು ತಿಳಿಸಿದರು.  ಈಚೆಗೆ ಎಲ್ಲಡೆ ವಾಹನಗಳ ದಟ್ಟಣೆ ಹೆಚ್ಚುತ್ತಿದೆ. ಅಷ್ಟೇ ಪ್ರಮಾಣದಲ್ಲಿ ರಿಪೇರಿಗಳು ಸಹ ನಡೆಯುತ್ತಿದೆ. ಅದಕ್ಕಾಗಿ ನಿಮ್ಮಗಳ ಅವಶ್ಯಕತೆ ಇದೆ. ಯಾವುದೇ ರೀತಿಯ ಜೀವನಾಂಶವಿಲ್ಲದೆ ನಿತ್ಯ ದುಡಿಯುತ್ತಿದ್ದೀರಿ. ಅಷ್ಟರಲ್ಲೇ ನಿಮ್ಮಗಳ ಬದುಕು ನಡೆಯಬೇಕಿದೆ ಎಂದರು.ಸಿಐಟಿಯು ರಾಜ್ಯ ಕಾರ್ಯದರ್ಶಿ ಮುಜೀಬ್ ಪ್ರಾಸ್ತವಿಕವಾಗಿ ಮಾತನಾಡಿದರು. ಜಿಲ್ಲಾ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ಸಿ.ಕೆ. ಗೌಸ್‌ಪೀರ್, ಕಾರ್ಯದರ್ಶಿ ಡಿ.ಎಂ. ಮಲಿಯಪ್ಪ, ಕಾಂಗ್ರೆಸ್ ಮುಖಂಡ ಮೆಹಬೂಬ್ ಪಾಷಾ, ಹಮೀದ್ ಉಲ್ಲಾ, ಎಸ್‌ಎಂಎಸ್‌ಟಿ ಮಾಲೀಕ ಫಯಾಜ್, ಯಮಹ ಷೋರೂಂನ ಮಹಡಿ ಶಿವಮೂರ್ತಿ, ಜಿಲ್ಲಾ ದ್ವಿಚಕ್ರ ವಾಹನಗಳ ಮೆಕ್ಯಾನಿಕ್‌ಗಳ ಕಾರ್ಮಿಕರ ಸಂಘದ ಖಜಾಂಚಿ ರಂಗಸ್ವಾಮಿ ಹಾಜರಿದ್ದರು. ಸಂಘದ ಅಧ್ಯಕ್ಷ ಅನ್ಸರ್ ಶಕೀಲ್ ಸ್ವಾಗತಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.