ಶುಕ್ರವಾರ, ಮಾರ್ಚ್ 5, 2021
30 °C
ನಿಗಾ ಇಡಲು ಕೇಂದ್ರ ಸಚಿವ ನಡ್ಡಾ ಸೂಚನೆ

ಭಾರತಕ್ಕೂ ‘ಜಿಕಾ’ ವೈರಸ್‌ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತಕ್ಕೂ ‘ಜಿಕಾ’ ವೈರಸ್‌ ಭೀತಿ

ಜಿನಿವಾ, ನ್ಯೂಯಾರ್ಕ್(ಪಿಟಿಐ): ಚಿಕೂನ್ ಗುನ್ಯಾ ಮತ್ತು ಡೆಂಗಿ ಹರಡುವ ಈಡೀಸ್ ಇಜಿಪ್ತಿ ವೈರಸ್‌ನ ಸಂಬಂಧಿ ಎಂದೇ ಗುರುತಿಸಲಾಗಿರುವ ಮಾರಕ ‘ಜಿಕಾ’ ವೈರಸ್ ಅಮೆರಿಕಾ, ಬ್ರೆಜಿಲ್‌, ಸೇರಿದಂತೆ 22 ರಾಷ್ಟ್ರಗಳಿಗೆ ಹರಡಿದ್ದು, ಭಾರತವೂ ಸೇರಿದಂತೆ ಎಲ್ಲಾ ರಾಷ್ಟ್ರಗಳಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.ನಿಗಾ ಇಡಲು ಸೂಚನೆ(ನವದೆಹಲಿ ವರದಿ): ‘ಜಿಕಾ’ ವೈರಸ್ ಹರಡುತ್ತಿರುವ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ವೈರಸ್‌ ಹರಡುವಿಕೆ ಮೇಲೆ ನಿಗಾ ವಹಿಸಲು ತಜ್ಞರ ತಂಡ ರಚಿಸುವುದಾಗಿ ಹೇಳಿದೆ.ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಾಡ್ಡಾ ಅವರು ಉನ್ನತಮಟ್ಟದ ಸಭೆ ನಡೆಸಿದ್ದು, ವಿವಿಧ ದೇಶಗಳಲ್ಲಿ ‘ಜಿಕಾ’ ಹರಡುತ್ತಿರುವ ಬಗ್ಗೆ ಚರ್ಚೆ ನಡೆಸಿ ದೇಶದಲ್ಲಿ ಪರಿಸ್ಥಿತಿಯ ಮೇಲೆ ನಿಗಾ ಇಡುವುದು, ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.‘ಜಿಕಾ’ ಹರಡಬಲ್ಲ ಈಡೀಸ್ ಇಜಿಪ್ತಿ ಸೊಳ್ಳೆಯು ಶುದ್ಧ ನೀರಿನಲ್ಲೂ ಸಂತಾನೋತ್ಪತ್ತಿ ಮಾಡುತ್ತದೆ. ಹೀಗಾಗಿ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರಲ್ಲಿ ತಮ್ಮ ಜವಾಬ್ದಾರಿ ಹಾಗೂ ಪಾತ್ರ ಕುರಿತು ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದ್ದಾರೆ.ಕೊಲಂಬಿಯಾ ಮತ್ತು ಇಕ್ವಿಡಾರ್ ದೇಶಗಳು ವೈರಸ್ ಭೀತಿ ಹಿನ್ನೆಲೆಯಲ್ಲಿ 2018ರ ವರೆಗೆ ಗರ್ಭಧರಿಸದಂತೆ ಮಹಿಳೆಯರಿಗೆ ಮುನ್ನೆಚ್ಚರಿಕೆ ನೀಡಿವೆ.ಫ್ರಾನ್ಸ್‌ನಲ್ಲಿ ಐವರಿಗೆ ‘ಜಿಕಾ’(ಪ್ಯಾರಿಸ್ ವರದಿ): ವಿದೇಶ ಪ್ರವಾಸ ಕೈಗೊಂಡಿದ್ದ ರಾಷ್ಟ್ರದ ಐವರಿಗೆ ‘ಜಿಕಾ’ ವೈರಸ್ ಸೋಂಕು ತಗುಲಿದೆ ಎಂದು ಫ್ರಾನ್ಸ್‌ನ ಆರೋಗ್ಯ ಸಚಿವಾಲಯ ಶುಕ್ರವಾರ ಹೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.