ರಿಯೊ ಡಿ ಜನೈರೊ: ಎರಡನೇ ಗೇಮ್ನಲ್ಲಿ ಸಿಂಧು 20–10 ರಲ್ಲಿ ಮುನ್ನಡೆ ಸಾಧಿಸಿದ್ದರು. ‘ಮ್ಯಾಚ್ ಪಾಯಿಂಟ್’ ಗಿಟ್ಟಿಸಲು ಭಾರತದ ಆಟಗಾರ್ತಿ ಸರ್ವ್ ಮಾಡಿದರು. ಸ್ವಲ್ಪ ಸಮಯದ ರ್ಯಾಲಿಯ ಬಳಿಕ ಸಿಂಧು ಹಾಫ್ ಸ್ಮ್ಯಾಷ್ ಸಿಡಿಸಿದರು. ಜಪಾನ್ನ ನೊಜೊಮಿ ಒಕುಹರ ಷಟಲ್ ಅನ್ನು ಬಹಳ ಪ್ರಯಾಸದಿಂದ ಹಿಂದಿರುಗಿಸಿದರು.

ಷಟಲ್ ತುಂಬಾ ಎತ್ತರದಲ್ಲಿ ಎದುರಾಳಿಯ ಕೋರ್ಟ್ನತ್ತ ಹಾರಿತು. ಅದನ್ನೇ ಕಾಯುತ್ತಿದ್ದ ಸಿಂಧು ತಮ್ಮ ದೇಹದ ಪೂರ್ಣ ಶಕ್ತಿಯನ್ನು ಬಲಗೈನಲ್ಲಿ ಸಂಚ ಯಿಸಿಕೊಂಡು ಸ್ಮ್ಯಾಷ್ ಸಿಡಿಸಿದರು. ಆ ಬಿರುಸಿನ ಹೊಡೆತಕ್ಕೆ ಒಕುಹರ ಬಳಿ ಯಾವುದೇ ಉತ್ತರವಿರ ಲಿಲ್ಲ. ಷಟಲ್ ನೆಲಕ್ಕೆ ಬೀಳುತ್ತಿದ್ದಂತೆಯೇ ಭಾರತದ ಬ್ಯಾಡ್ಮಿಂಟನ್ನಲ್ಲಿ ಹೊಸ ಚರಿತ್ರೆ ಸೃಷ್ಟಿಯಾಯಿತು.

ಒಲಿಂಪಿಕ್ ಕೂಟದ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಬ್ಯಾಡ್ಮಿಂಟನ್ ಸ್ಪರ್ಧಿ ಎನಿಸಿಕೊಂಡ ಪಿ.ವಿ. ಸಿಂಧು ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆದರು. ಟಿ.ವಿ. ಮೂಲಕ ಪಂದ್ಯ ವೀಕ್ಷಿಸುತ್ತಿದ್ದ ಭಾರತದ ಕೋಟ್ಯಂತರ ಅಭಿಮಾನಿಗಳು ಸಂಭ್ರಮದಲ್ಲಿ ಮಿಂದೆದ್ದರು.

ಶುಕ್ರವಾರ ನಡೆಯುವ ಫೈನಲ್ನಲ್ಲಿ ಅವರು ಸ್ಪೇನ್ನ ಕ್ಯಾರೊಲಿನಾ ಮರಿನ್ ವಿರುದ್ಧ ಪೈಪೋಟಿ ನಡೆಸುವರು. ದಿನದ ಮತ್ತೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ವಿಶ್ವ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಮರಿನ್ 21–14, 21–16 ರಲ್ಲಿ ಲಿ ಕ್ಸುಯೆರುಯಿ ವಿರುದ್ಧ ಗೆದ್ದರು.

ಸಿಂಧು ಫೈನಲ್ನಲ್ಲಿ ಗೆದ್ದರೂ, ಸೋತರೂ ಅವರ ಸಾಧನೆ ಭಾರತದ ಬ್ಯಾಡ್ಮಿಂಟನ್ನಲ್ಲಿ ಅಚ್ಚಳಿಯದೇ ಉಳಿಯಲಿದೆ. ಏಕೆಂದರೆ ಬ್ಯಾಡ್ಮಿಂಟನ್ನಲ್ಲಿ ಯಾರೂ ಇದುವರೆಗೆ ಭಾರತಕ್ಕೆ ಒಲಿಂಪಿಕ್ಸ್ ಬೆಳ್ಳಿ ಅಥವಾ ಚಿನ್ನ ತಂದಿತ್ತಿಲ್ಲ. ಸೈನಾ ನೆಹ್ವಾಲ್ 2012ರ ಲಂಡನ್ ಕೂಟದಲ್ಲಿ ಕಂಚು ಜಯಿಸಿದ್ದು ಭಾರತದ ಸ್ಪರ್ಧಿಯ ಇದುವರೆಗಿನ ಅತ್ಯುತ್ತಮ ಸಾಧನೆ ಎನಿಸಿದೆ.

ಎದುರಾಳಿಯ ದೌರ್ಬಲ್ಯವನ್ನು ಅರಿತು ಆಡಿದರೆ ಗೆಲುವು ಪಡೆಯ ಬಹುದು ಎಂಬುದನ್ನು ಹೈದರಾಬಾದ್ನ ಆಟಗಾರ್ತಿ ಗುರುವಾರ ತೋರಿಸಿಕೊಟ್ಟರು.

ಎದುರಾಳಿ ತನ್ನಷ್ಟು ಎತ್ತರ ಹಾಗೂ ದೈಹಿಕ ಸಾಮರ್ಥ್ಯ ಹೊಂದಿಲ್ಲ ಎಂಬುದನ್ನು ಅರಿತಿದ್ದ ಸಿಂಧು ಅದಕ್ಕೆ ತಕ್ಕಂತೆ ಆಟದ ತಂತ್ರ ರೂಪಿಸಿದ್ದರು. ಜಪಾನ್ನ ಆಟಗಾರ್ತಿಯನ್ನು ಅಂಗಳ ವಿಡೀ ಓಡಾಡುವಂತೆ ಮಾಡಿದರು. ದೀರ್ಘ ರ್ಯಾಲಿಗಳ ಮೂಲಕ ತಾಳ್ಮೆ ಪರೀಕ್ಷಿಸಿದರು. ಇದರ ನಡುವೆ ಬಿಲ್ಲಿನಿಂದ ಬಿಟ್ಟ ಬಾಣದಂತೆ ಕೆಲವೊಂದು ಸ್ಮ್ಯಾಷ್ಗಳನ್ನೂ ಸಿಡಿಸಿದರು.

ಉತ್ತಮ ಆರಂಭ: ಮೊದಲ ಗೇಮ್ನಲ್ಲಿ 4–1 ರಲ್ಲಿ ಮುನ್ನಡೆ ಪಡೆದ ಸಿಂಧು ಆರಂಭದಲ್ಲೇ ಎದುರಾಳಿಯ ಮೇಲೆ ಒತ್ತಡ ಹೇರಿದರು. ಒಕುಹರ ಮಾಡಿದ ಸ್ವಯಂಕೃತ ತಪ್ಪುಗಳ ನೆರವು ಪಡೆದರಲ್ಲದೆ, ಮುನ್ನಡೆಯನ್ನು 8–4ಕ್ಕೆ ಹೆಚ್ಚಿಸಿಕೊಂಡರು. ದೀರ್ಘ ರ್್ಯಾಲಿ ಆಡುವತ್ತ ಗಮನ ನೀಡಿದ ಸಿಂಧು ಷಟಲ್ ಹಿಂದಿರುಗಿಸುವಾಗ ಪ್ರತಿ ಹೊಡೆತದಲ್ಲೂ ವೇಗ ವನ್ನು ಬದಲಾಯಿ ಸಲು ಪ್ರಯತ್ನಿಸಿದರು. ಅದೇ ರೀತಿ ನಿಖರ ಡ್ರಾಪ್ ಶಾಟ್ಗಳನ್ನೂ ಪ್ರಯೋಗಿಸಿದರು.

ಸೊಗಸಾದ ‘ಕ್ರಾಸ್ಕೋಟ್’ ಹೊಡೆತದ ಮೂಲಕ 9–6 ರಲ್ಲಿ ಮೇಲುಗೈ ಸಾಧಿಸಿದ ಸಿಂಧು, ಅನಂತರ ಮುನ್ನಡೆ 11–6ಕ್ಕೆ ಹೆಚ್ಚಿಸಿಕೊಂಡರು.
ಹಾಫ್ ಸ್ಮ್ಮಾಷ್ ಮತ್ತು ಡ್ರಾಪ್ಗಳ ಮೂಲಕ ಎದುರಾಳಿಯನ್ನು ಅಂಗಳದ ಮೂಲೆ ಮೂಲೆಗೂ ಓಡಿಸಿ 14–10 ಹಾಗೂ 18–16 ರಲ್ಲಿ ಮೇಲುಗೈ ಪಡೆದರು. ಆ ಬಳಿಕ ಎರಡು ಪಾಯಿಂಟ್ ಕಲೆಹಾಕಿ 29 ನಿಮಿಷಗಳಲ್ಲಿ ಮೊದಲ ಗೇಮ್ ಗೆದ್ದುಕೊಂಡರು.

ಎರಡನೇ ಗೇಮ್ನಲ್ಲಿ ಸಿಂಧು 3–0 ರಲ್ಲಿ ಮುನ್ನಡೆ ಸಾಧಿಸಿದರು. ಮರುಹೋರಾಟ ತೋರಿದ ಒಕುಹರ 5–3 ರಲ್ಲಿ ಮೇಲುಗೈ ಪಡೆದರು. ಅನಂತರ ಕೆಲಹೊತ್ತು ಜಿದ್ದಾಜಿದ್ದಿನ ಪೈಪೋಟಿ ನಡೆದು 5–5 ಹಾಗೂ 8–8 ರಲ್ಲಿ ಸಮಬಲ ಕಂಡುಬಂತು.

ಜಪಾನ್ನ ಆಟಗಾರ್ತಿ ಸಿಂಧು ಅವರನ್ನು ಅಂಗಳದ ಹಿಂಭಾಗದಲ್ಲೇ ಇರುವಂತೆ ನೋಡಿಕೊಳ್ಳಲು ಪ್ರಯತ್ನಿಸಿದರು. ಆದರೆ ಅಂಗಳದ ಹಿಂಭಾಗದಲ್ಲಿದ್ದರೂ ಮೇಲಕ್ಕೆ ಜಿಗಿದು ಪ್ರಬಲ ಸ್ಮ್ಯಾಷ್ಗಳನ್ನು ಸಿಡಿಸಿದ ಭಾರತದ ಆಟಗಾರ್ತಿ ಎದುರಾಳಿಯ ತಂತ್ರ ಫಲಿಸದಂತೆ ನೋಡಿಕೊಂಡರು.

11–10 ರಲ್ಲಿ ಮುನ್ನಡೆ ಪಡೆದ ಸಿಂಧು ವಿರಾಮಕ್ಕೆ ತೆರಳಿದರು. ಕಿರು ಅವಧಿಯ ವಿರಾಮದ ಬಳಿಕ ಕೋರ್ಟ್ಗೆ ಮರಳಿದ ಸಿಂಧು ತಾವು ಕಲಿತ ಎಲ್ಲ ವಿದ್ಯೆಗಳನ್ನು ‘ಬ್ರಹ್ಮಾಸ್ತ್ರ’ದಂತೆ ಪ್ರಯೋಗಿಸಿ ಸತತ 10 ಪಾಯಿಂಟ್ ಕಲೆಹಾಕಿ ಸಾಂಬಾ ನಾಡಿನ ನೆಲದಲ್ಲಿ ಗೆಲುವಿನ ನೃತ್ಯ ಮಾಡಿದರು.

ಮುಖ್ಯಾಂಶಗಳು
* 49 ನಿಮಿಷಗಳಲ್ಲಿ ಗೆಲುವು ಪಡೆದ ಭಾರತದ ಆಟಗಾರ್ತಿ
* ಜಪಾನ್ನ ನೊಜೊಮಿ ಒಕುಹರ ವಿರುದ್ಧ ಜಯ
* ಇಂದು ಚಿನ್ನದ ಪದಕಕ್ಕಾಗಿ ಹೋರಾಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.