ಭಾರತದಲ್ಲಿ ಔದ್ಯೋಗಿಕ ಸೇವೆಗೆ ವಿಪುಲ ಅವಕಾಶ

ಸೋಮವಾರ, ಜೂಲೈ 22, 2019
27 °C

ಭಾರತದಲ್ಲಿ ಔದ್ಯೋಗಿಕ ಸೇವೆಗೆ ವಿಪುಲ ಅವಕಾಶ

Published:
Updated:

ಮೆಲ್ಬರ್ನ್ (ಪಿಟಐ): ಭಾರತ ಸೇರಿದಂತೆ ಏಷ್ಯಾದ ಹಲವು ರಾಷ್ಟ್ರಗಳಲ್ಲಿ ಕುಶಲ ಕಾರ್ಮಿಕರ ತೀವ್ರ ಅಭಾವವಿದ್ದು, ಈ ರಾಷ್ಟ್ರಗಳಿಗೆ ಔದ್ಯೋಗಿಕ ಮತ್ತು ಶೈಕ್ಷಣಿಕ ತರಬೇತಿ ಸೇವೆಗಳನ್ನು ಒದಗಿಸಲು ಆಸ್ಪ್ರೇಲಿಯಾ ಮುಂದಾಗಬೇಕು ಎಂದು ಶಿಕ್ಷಣ ಸಚಿವ ಕ್ರಿಸ್ ಇವಾನ್ಸ್ ಸಲಹೆ ನೀಡಿದ್ದಾರೆ.ಇದೇ ವೇಳೆ, ಪ್ರಸ್ತುತ, ಇಂತಹ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವಲ್ಲಿ ಸರ್ಕಾರ ಹಿಂದೆ ಬಿದ್ದಿದೆ ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಪರ್ಥ್‌ನಲ್ಲಿ ಈಚೆಗೆ ನಡೆದ ಆಸ್ಪ್ರೇಲಿಯಾ- ಭಾರತ ಕೌಶಲ ಸುಧಾರಣೆ ಸಮಾವೇಶದಲ್ಲಿ ಮಾತನಾಡಿದ ಅವರು, `50 ಕೋಟಿ ಜನರ ಕೌಶಲವನ್ನು ಮೇಲ್ದರ್ಜೆಗೇರಿಸುವ ಗುರಿಯನ್ನು ಭಾರತ ಹೊಂದಿದ್ದು, ಇದೊಂದು ದೊಡ್ಡ ಸವಾಲಾಗಿದೆ; ಇದನ್ನು ಸಾಧಿಸುವ ನಿಟ್ಟಿನಲ್ಲಿ ಆ ರಾಷ್ಟ್ರವು ವಿದೇಶಗಳಿಗೆ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಅವಕಾಶ ನೀಡಲಿದೆ~ ಎಂದು ಇವಾನ್ಸ್ ಹೇಳಿದ್ದಾರೆ.ವಿಶ್ವದರ್ಜೆಯ ತರಬೇತಿ ಹಾಗೂ ಮುಂದುವರಿದ ಶಿಕ್ಷಣ  (ಟಫೆ) ವ್ಯವಸ್ಥೆ ಹೊಂದಿರುವ ಆಸ್ಟ್ರೇಲಿಯಾವು ಭಾರತಕ್ಕೆ ನೆರವು ನೀಡಲು ಬೇಕಾದ ಸಂಪನ್ಮೂಲವನ್ನೆಲ್ಲಾ ಹೊಂದಿದೆ ಎಂದು ಅಭಿಪ್ರಾಯಪಟ್ಟರು.

ಆಸ್ಟ್ರೇಲಿಯಾ ಭಾರತ ಶೈಕ್ಷಣಿಕ ಪರಿಷತ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry