ಬುಧವಾರ, ಮೇ 19, 2021
22 °C

ಭಾರತದಿಂದ ಹಕ್ಕು ಪ್ರತಿಪಾದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ (ಪಿಟಿಐ): ಪರಮಾಣು ತಂತ್ರಜ್ಞಾನ ರಫ್ತು ನಿಯಂತ್ರಣ ಅಧಿಕಾರ ಹೊಂದಿರುವ ನಾಲ್ಕು ಸಂಸ್ಥೆಗಳಲ್ಲಿ ಸದಸ್ಯತ್ವ ಪಡೆಯಲು ಪ್ರಬಲ ಆಕಾಂಕ್ಷಿಯಾಗಿರುವ ಭಾರತ, ಈ ನಿಟ್ಟಿನಲ್ಲಿ ಪರಮಾಣು ತಂತ್ರಜ್ಞಾನ ಪ್ರಸರಣ ನಿಷೇಧ ಕುರಿತು ತನ್ನ ಬದ್ಧತೆಯನ್ನು ವಿಶ್ವಸಂಸ್ಥೆಗೆ ಮತ್ತೆ ಖಾತರಿ ಪಡಿಸಿದೆ.ಜಾಗತಿಕ ಮಟ್ಟದಲ್ಲಿ ಪರಮಾಣು ತಂತ್ರಜ್ಞಾನ ಪ್ರಸರಣ ನಿಷೇಧದ ಮಹತ್ವ ಮತ್ತು ಅಗತ್ಯ ಸಾರಿ ಹೇಳುವ ಸಾಮರ್ಥ್ಯ ತನಗಿದ್ದು, ಇಂತಹ ಇಚ್ಛೆಯೂ ಇದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮುಂದೆ ಅರುಹಿದೆ. ಆದ್ದರಿಂದ ಪರಮಾಣು ತಂತ್ರಜ್ಞಾನ ರಫ್ತು ನಿಯಂತ್ರಣ ಅಧಿಕಾರ ಹೊಂದಿರುವ ನಾಲ್ಕು ಸಂಸ್ಥೆಗಳು ಭಾರತವನ್ನು ಸದಸ್ಯ ರಾಷ್ಟ್ರವನ್ನಾಗಿ ಪರಿಗಣಿಸುವುದು ತಾರ್ಕಿಕ ನಡೆಯೇ ಆಗುತ್ತದೆ ಎಂದೂ ಹೇಳಿದೆ.ಅತ್ಯಂತ ಸೂಕ್ಷ್ಮವಾಗಿರುವ ಪರಮಾಣು ತ್ರಂತಜ್ಞಾನ ಪ್ರಸರಣಕ್ಕೆ ಭಾರತ ಯಾವತ್ತೂ ಮೂಲವಾಗಿಲ್ಲ. ಬದಲಿಗೆ ಈ ತಂತ್ರಜ್ಞಾನದ ರಫ್ತು ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸಿ ಅಂತರರಾಷ್ಟ್ರೀಯ ಮಟ್ಟಕ್ಕೆ ಸರಿಸಮವಾಗಿ ಸುರಕ್ಷತೆ ಕಾಯ್ದುಕೊಳ್ಳಲು ಬಯಸುತ್ತದೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಯಾಗಿರುವ ಹರ್‌ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.ಪರಮಾಣು ಪೂರೈಕೆದಾರರ ಗುಂಪು (ಎನ್‌ಎಸ್‌ಜಿ), ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಸಂಘಟನೆ (ಎಂಟಿಸಿಆರ್), ಆಸ್ಟೇಲಿಯಾ ಗುಂಪು ಮತ್ತು ವಾಸೆನಾರ್ ಒಪ್ಪಂದ -ಇವು ಪರಮಾಣು ತಂತ್ರಜ್ಞಾನ ರಫ್ತು ನಿಯಂತ್ರಣ ಅಧಿಕಾರ ಹೊಂದಿರುವ ನಾಲ್ಕು ಸಂಘಟನೆಗಳಾಗಿವೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.