ಶುಕ್ರವಾರ, ಜೂನ್ 18, 2021
22 °C

ಭಾರತದ ಜೊತೆಗಿನ ವ್ಯಾಪಾರ ಸಂಬಂಧ ವೃದ್ಧಿ, ನಿಯಮ ಸಡಿಲ: ಪಾಕ್ ಇಂಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಭಾರತದ ಜೊತೆಗಿನ ವ್ಯಾಪಾರ ಸಂಬಂಧವನ್ನು ಸಹಜ ಸ್ಥಿತಿಗೆ ತರಲು ಪಾಕಿಸ್ತಾನ ಬಯಸುತ್ತಿದ್ದು, ಇದಕ್ಕಾಗಿ ಕಳೆದ ನಲವತ್ತು ವರ್ಷಗಳಿಂದ ರಾಷ್ಟ್ರದಲ್ಲಿ ಜಾರಿಯಲ್ಲಿರುವ ಹಲವು ನಿಯಮಗಳನ್ನು ಸಡಿಲಗೊಳಿಸುವ ಸ್ಪಷ್ಟ ಸೂಚನೆಯನ್ನು ನೀಡಿದೆ.`ಆದರೆ ದೇಶದ ಈ ನಿಲುವು ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯಕ್ಕೆ ಅಡ್ಡಿಯಾಗಿರುವ ಹಾಗೂ ಕಳೆದ 60 ವರ್ಷಗಳಿಂದ ಸಮಸ್ಯೆಯಾಗಿಯೇ ಉಳಿದಿರುವ ಕಾಶ್ಮೀರದಂತಹ ಸಂಕೀರ್ಣ ವಿಷಯಗಳಿಗೆ ಸಂಬಂಧಪಡುವುದಿಲ್ಲ~ ಎಂದು ವಿದೇಶಾಂಗ ಸಚಿವೆ ಹೀನಾ ರಬ್ಬಾನಿಖರ್ ಸ್ಪಷ್ಟಪಡಿಸಿದ್ದಾರೆ.`ಭಾರತದೊಂದಿಗಿನ ಸಹಜ ವ್ಯಾಪಾರ ಸಂಬಂಧದಿಂದ ಉಭಯ ರಾಷ್ಟ್ರಗಳೂ ಲಾಭ ಪಡೆಯುವ ವಿಶ್ವಾಸ ನಮಗಿದೆ. ಇದರೊಂದಿಗೆ ಇದು ಪಾಕಿಸ್ತಾನದ ಆರ್ಥಿಕತೆಯ ಉತ್ತೇಜನಕ್ಕೂ ನಾಂದಿ ಹಾಡಲಿದೆ~ ಎಂದು ಖರ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಭಾರತದಿಂದ ಆಮದು ಮಾಡಿಕೊಳ್ಳಲು ಬಯಸದ ವಸ್ತುಗಳಿರುವ `ನಿರ್ಬಂಧಿತ ಪಟ್ಟಿ~ಗೆ ಸಚಿವ ಸಂಪುಟ ಅನುಮತಿ ನೀಡಿದ ಮರುದಿನವೇ ಸಚಿವೆ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಷರಫ್ ಬಂಧನಕ್ಕೆ ಮನವಿ

ಇಸ್ಲಾಮಾಬಾದ್ (ಪಿಟಿಐ): ಬೆನಜೀರ್ ಭುಟ್ಟೊ ಹತ್ಯೆ ಪ್ರಕರಣದ ವಿಚಾರಣೆಗಾಗಿ, ಪಾಕಿಸ್ತಾನದ ಮಾಜಿ ಸೇನಾ ಆಡಳಿತಾಧಿಕಾರಿ ಪರ್ವೇಜ್ ಮುಷರಫ್ ಅವರನ್ನು ಬಂಧಿಸಲು `ಕಟ್ಟೆಚ್ಚರದ ನೋಟಿಸ್~ ಹೊರಡಿಸುವಂತೆ ಅಧಿಕಾರಿಗಳು ಇಂಟರ್‌ಪೋಲ್‌ಗೆ ಅಧಿಕೃತ ಮನವಿ ಮಾಡಿಕೊಂಡಿದ್ದಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.