ಇಸ್ಲಾಮಾಬಾದ್ (ಪಿಟಿಐ): 2007ರಲ್ಲಿ ಭಾರತದಲ್ಲಿ ಸಂಭವಿಸಿದ ಸಮ್ಜೋತಾ ರೈಲು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯದಾನದಲ್ಲಿ ವಿಳಂಬವಾಗುತ್ತಿದೆ ಮತ್ತು ಇದಕ್ಕೆ ಸಂಬಂಧಿಸಿದಂತೆ ಭಾರತ ಸ್ಪಷ್ಟನೆ ನೀಡಬೇಕೆಂದು ಪಾಕಿಸ್ತಾನದ ‘ಸಮ್ಜೋತಾ ಸಂತ್ರಸ್ತರ ಕ್ರಿಯಾ ಸಮಿತಿ’ ಆಗ್ರಹಿಸಿದೆ.

ಇಂತಹದೊಂದು ಆಗ್ರಹವನ್ನು ಈ ಸಮಿತಿಯು ಪಾಕಿಸ್ತಾನದ ಪ್ರಮುಖ ದೈನಿಕಗಳಲ್ಲಿ ಕಾಲು ಪುಟದಷ್ಟು ಜಾಹೀರಾತು ನೀಡುವ ಮೂಲಕ ಪ್ರಕಟ ಮಾಡಿರುವುದು ವಿಶೇಷವಾಗಿದೆ. ‘ಜಾತ್ಯತೀತ ಭಾರತ ಎಂಬ ಗೌರವ ಹೊಂದಿರುವ ಭಾರತವು ದುರಂತದ ಸಂತ್ರಸ್ತರಿಗೆ ಸ್ಪಷ್ಟನೆ ನೀಡಬೇಕು’ ಎಂದು ಈ ಜಾಹೀರಾತಿನಲ್ಲಿ ಆಗ್ರಹಿಸಲಾಗಿದೆ. ಈ ವಾಕ್ಯದ ಹಿಂಬದಿಯಲ್ಲಿ ಅಳುತ್ತಿರುವ ಮಗುವಿನ ಜೊತೆಯಲ್ಲಿರುವ ಮಹಿಳೆಯ ಹಾಗೂ ದಹಿಸುತ್ತಿರುವ ರೈಲಿನ ಚಿತ್ರವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.