ಸೋಮವಾರ, ಜೂನ್ 14, 2021
25 °C

ಭಾರತ ಮೊದಲ ಎದುರಾಳಿ ಪಾಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೀರ್‌ಪುರ (ಪಿಟಿಐ): ಮಹೇಂದ್ರ ಸಿಂಗ್‌ ದೋನಿ ಸಾರಥ್ಯದ ಭಾರತ ತಂಡ ಮಾರ್ಚ್‌ 21ರಂದು ನಡೆಯಲಿ ರುವ ಪ್ರಧಾನ ಸುತ್ತಿನ ಉದ್ಘಾಟನಾ ಪಂದ್ಯದಲ್ಲಿ ಸಾಂಪ್ರದಾಯಿಕ ಎದು ರಾಳಿ ಪಾಕಿಸ್ತಾನದ ಸವಾಲನ್ನು ಎದುರಿಸಲಿದೆ. ಈ ಪಂದ್ಯ ಮೀರ್‌ಪುರದ ಷೇರ್ ಎ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದೆ.ತಂಡ ಸೇರಿಕೊಂಡ ಫ್ಲೆಚರ್‌: ಭಾರತ ತಂಡದ ಕೋಚ್‌ ಡಂಕನ್ ಫ್ಲೆಚರ್‌ ಶನಿ ವಾರ ಇಲ್ಲಿ ತಂಡವನ್ನು ಸೇರಿ ಕೊಂಡರು. ‘ಫ್ಲೆಚರ್‌ ಕೋಚ್‌ ಆಗಿ ಮುಂದು ವರಿಯಲಿದ್ದಾರೆ. ಅವರನ್ನು ತೆಗೆದು ಹಾಕುವ ಬಗ್ಗೆ ನಮ್ಮ ಮುಂದೆ ಯಾವುದೇ ಯೋಚನೆಯಿಲ್ಲ. ಬಿಸಿಸಿಐ ಅಧ್ಯಕ್ಷ ಎನ್‌. ಶ್ರೀನಿವಾಸನ್‌ ಅವರು ಫ್ಲೆಚರ್‌ಗೆ ಎಚ್ಚರಿಕೆ ನೀಡಿದ್ದಾರೆ ಎನ್ನುವ ವಿಷಯ ಸತ್ಯವಲ್ಲ’ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್‌ ಪಟೇಲ್‌ ಹೇಳಿದ್ದಾರೆ.ಇತ್ತೀಚಿನ ಟೂರ್ನಿಗಳಲ್ಲಿ ಭಾರತ ಕಳಪೆ ಪ್ರದರ್ಶನ ನೀಡಿರುವುದಕ್ಕೆ ಕಾರಣವೇನೆಂದು ಕೇಳಿ ಬಿಸಿಸಿಐ ಫ್ಲೆಚರ್‌ ಅವರಿಗೆ ನೋಟಿಸ್‌ ಜಾರಿ ಮಾಡಿತ್ತು.

ಸ್ಫೂರ್ತಿಯ ಪಂದ್ಯ: ‘ಒತ್ತಡದಲ್ಲಿ ಭಾರತದ ವಿರುದ್ಧ ಪಂದ್ಯ ಆಡುವುದು ಸಾಕಷ್ಟು ಸ್ಫೂರ್ತಿ ತುಂಬುತ್ತದೆ’ ಎಂದು ಪಾಕ್‌ ತಂಡದ ನಾಯಕ ಮಹಮ್ಮದ್‌ ಹಫೀಜ್‌ ಹೇಳಿದ್ದಾರೆ.‘ನಾನು ಪ್ರತಿ ಸಲವೂ ಹೇಳುತ್ತಿರು ತ್ತೇನೆ. ಭಾರತ ವಿರುದ್ಧ ಪಂದ್ಯ ಸಾಕ ಷ್ಟು ಒತ್ತಡದಿಂದ ಕೂಡಿರುತ್ತದೆ. ಅಷ್ಟೇ ರೋಚಕವಾಗಿರುತ್ತದೆ. ಎರಡೂ ತಂಡ ಗಳ ಮೇಲೆ ಅಭಿಮಾನಿಗಳ ಒತ್ತಡವಿರು ತ್ತದೆ’ ಎಂದು ಅವರು ನುಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.