ಶನಿವಾರ, ಜೂನ್ 12, 2021
23 °C

ಭಾರಿ ಮಳೆ: ಕೊಚ್ಚಿ ಹೋದ ಅತಿ ವೇಗದ ಚೀನೀ ರೈಲುಮಾರ್ಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್ (ಪಿಟಿಐ): ನಿರಂತರ ಮಳೆಯ ಪರಿಣಾಮವಾಗಿ ಕೇಂದ್ರ ಚೀನಾದ ಹುಬೇಯಿ ಪ್ರಾಂತದಲ್ಲಿ  ಅಳವಡಿಸಲಾಗಿದ್ದ ಹೊಸ ಅತಿ ವೇಗದ ರೈಲು ಹಳಿ ವ್ಯವಸ್ಥೆ ಕುಸಿದಿದ್ದು  ಈಗಾಗಲೇ ಪೆಟ್ಟು ತಿಂದಿರುವ ಚೀನೀ ರೈಲ್ವೇ ರಂಗಕ್ಕೆ ಇನ್ನೊಂದು ಹೊಡೆತ ಬಿದ್ದಿದೆ.

 

ಸುದ್ದಿ ತಿಳಿಯುತ್ತಿದ್ದಂತೆಯೇ ಅಧಿಕಾರಿಗಳು ರೈಲು ಹಳಿಯ ದುರಸ್ತಿಗಾಗಿ ನೂರಾರು ಕಾರ್ಮಿಕರನ್ನು ಕಳುಹಿಸಿದ್ದಾರೆ.ಪ್ರಾಂತೀಯ ರಾಜಧಾನಿ ವುಹಾನ್ ಮತ್ತು ಯಿಚಾಂಗ್ ನಗರನ್ನು ಸಂಪರ್ಕಿಸುವ ಹನ್ಯಿ ಅತಿ ವೇಗದ ರೈಲು ಮೇ ಆರಂಭದಲ್ಲಿ ಕಾರ್ಯಾರಂಭ ಮಾಡುವ ನಿರೀಕ್ಷೆ ಇತ್ತು. ಆದರೆ ಸತತ ಮಳೆಯ ಕಾರಣ ರೈಲ್ವೇಹಳಿಯ ಪರೀಕ್ಷಾ ಓಡಾಟದ ಬಳಿಕ ಕುಸಿದು ಬಿದ್ದಿದೆ.ಕ್ವಿಯಾನ್ಜಿಯಾಂಗ್ ನಗರದ ಬಳಿ ಸುಮಾರು 300 ಮೀಟರ್ ಉದ್ದದ ರೈಲ್ವೇ ಹಳಿಯ ಮಾರ್ಗವೇ ಶುಕ್ರವಾರ ಕೊಚ್ಚಿಕೊಂಡು ಹೋಗಿದೆ.ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ತೀವ್ರ ತೊಂದರೆ ಉಂಟು ಮಾಡುತ್ತಿದೆ ಎಂದು ಕಾರ್ಮಿಕರನ್ನು ಉಲ್ಲೇಖಿಸಿ ಸರ್ಕಾರಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.ಚೀನೀ ರೈಲ್ವೇಯ 12ನೇ ಬ್ಯೂರೋ ಸಮೂಹ ಕಂಪೆನಿ ಮೂಲಕ ನಿರ್ಮಾಣಗೊಂಡ 291 ಕಿ.ಮೀ. ಉದ್ದದ ಹನ್ಯಿ ರೈಲ್ವೇ ಮಾರ್ಗವು ಕೇಂದ್ರ ಚೀನಾದಲ್ಲಿ ಅತ್ಯಂತ ಪ್ರಮುಖ  ಅತಿ ವೇಗದ ರೈಲು ಎಂದು ಪರಿಗಣಿಸಲ್ಪಟ್ಟಿತ್ತು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.