ಕಿರುತೆರೆಯಲ್ಲಿ ೧೮ ವರ್ಷಗಳ ಕಾಲ ಸಂಭಾಷಣೆ ಹಾಗೂ ನಿರ್ದೇಶನ ಕ್ಷೇತ್ರದಲ್ಲಿ ಕೆಲಸ ಮಾಡಿದ
ಎ.ಜಿ. ಶೇಷಾದ್ರಿ, ಈಗ ಮತ್ತೆ ‘ಕಾರಂಜಿ’ಯೊಂದಿಗೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಅಂದಹಾಗೆ ‘ಕಾರಂಜಿ’ ಧಾರಾವಾಹಿ ಸುವರ್ಣ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಪ್ರಸಾರವಾಗಲಿದೆ.

ಕೇವಲ ಏಳು ಪಾತ್ರಗಳನ್ನು ಇಟ್ಟುಕೊಂಡು ರಚಿಸಿರುವ ‘ಕಾರಂಜಿ’ ಉಳಿದ ಧಾರಾವಾಹಿಗಳಂತಲ್ಲ ಎನ್ನುವುದು ಶೇಷಾದ್ರ ಸ್ಪಷ್ಟನೆ. ಪ್ರೀತಿ–ಪ್ರೇಮ, ನೋವು–ನಲಿವು, ವೈರಾಗ್ಯಗಳ ಸಮ್ಮಿಶ್ರಣ ಇದರಲ್ಲಿದೆ ಎಂದರು. ವಾಹಿನಿ ಮುಖ್ಯಸ್ಥ ಸುಧೀಂದ್ರ, ‘ಟೀವಿ ಧಾರಾವಾಹಿ ಎಂದರೆ ಹೀಗೆಯೇ ಇರಬೇಕು ಎಂಬ ಸಿದ್ಧಸೂತ್ರ ಮೀರಿ ಶೇಷಾದ್ರಿ ಇದನ್ನು ರೂಪಿಸಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಚತುರ್ಭಾಷಾ ತಾರೆ ಚಾರುಲತಾ, ಕಾರಂಜಿಯಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಮೊದಲ ಬಾರಿಗೆ ಕಿರುತೆರೆ ಪ್ರವೇಶಿಸಿದ್ದಾರೆ. ‘ಈವರೆಗೆ ಪ್ರೇಕ್ಷಕರು ನನ್ನನ್ನು ಹುಡುಕಿಕೊಂಡು ಚಿತ್ರಮಂದಿರಕ್ಕೆ ಬರುತ್ತಿದ್ದರು. ಈಗ ನಾನೇ ಅವರ ಮನೆಗಳಿಗೆ ಹೋಗುತ್ತಿದ್ದೇನೆ’ ಎಂದರು. ವೀಣಾ ಸುಂದರ್, ಲಕ್ಷ್ಮೀ, ನಿಶಾ, ಬೃಂದಾ, ಮುರಳೀಧರ, ಮಹೇಶ್ ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.