ಭಾಷಾ ಮಾಧ್ಯಮ ವಿವಾದ: ಸುಪ್ರೀಂಕೋರ್ಟ್ ಪೂರ್ಣಪೀಠಕ್ಕೆ

ಗುರುವಾರ , ಜೂಲೈ 18, 2019
22 °C

ಭಾಷಾ ಮಾಧ್ಯಮ ವಿವಾದ: ಸುಪ್ರೀಂಕೋರ್ಟ್ ಪೂರ್ಣಪೀಠಕ್ಕೆ

Published:
Updated:

ನವದೆಹಲಿ (ಪಿಟಿಐ): ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಕಡ್ಡಾಯಗೊಳಿಸುವ ಪ್ರಕರಣವನ್ನು ಸುಪ್ರೀಂಕೋರ್ಟ್ ಶುಕ್ರವಾರ ಪೂರ್ಣಪೀಠಕ್ಕೆ ವರ್ಗಾಯಿಸಿದೆ.ಈ ವಿವಾದಕ್ಕೆ ಸಂಬಂಧಿಸಿದಂತೆ ಇಂದು ಸುಪ್ರೀಂಕೋರ್ಟ್ ತೀರ್ಪು ನೀಡಬೇಕಿತ್ತು. ಆದರೆ ಪ್ರಕರಣವನ್ನು ದ್ವಿಸದಸ್ಯ ಪೀಠವು  ಪೂರ್ಣಪೀಠಕ್ಕೆ (ಸಂವಿಧಾನ ಪೀಠ) ವರ್ಗಾವಣೆ ಮಾಡಿದ್ದು ಈ ವಿವಾದಕ್ಕೆ ಸಂಬಂಧಿಸಿದಂತೆ ಐದು ಪ್ರಶ್ನೆಗಳಿಗೆ  ಸ್ಪಷ್ಟನೆ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಇದರಿಂದ ಭಾಷಾ ಮಾಧ್ಯಮ ವಿವಾದ ಮತ್ತಷ್ಟು ಕಗ್ಗಂಟಾಗಿದೆ.1994ರಲ್ಲಿ ರಾಜ್ಯ ಸರ್ಕಾರ ಎಲ್ಲಾ ಶಾಲೆಗಳು ಕನ್ನಡದಲ್ಲೇ ಪ್ರಾಥಮಿಕ ಶಿಕ್ಷಣ ನೀಡಬೇಕು ಎನ್ನುವ ಭಾಷಾ ಮಾಧ್ಯಮ ನೀತಿಯ ಆದೇಶ ಹೂರಡಿಸಿತ್ತು. ಇದನ್ನು ಪ್ರಶ್ನಿಸಿ ಖಾಸಾಗಿ ಶಾಲೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಖಾಸಾಗಿ ಶಾಲೆಗಳು ಭಾಷಾ ಮಾಧ್ಯಮ ನೀತಿ ಪಾಲಿಸಲು ಬರುವುದಿಲ್ಲ ಎಂದು 2008ರಲ್ಲಿ ಹೈಕೋರ್ಟ್ ತೀರ್ಪು ನಿಡಿತ್ತು.ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry