ಭಾನುವಾರ, ಜೂನ್ 20, 2021
29 °C

ಭೂಮಿ ಮೇಲ್ಪದರ ರೂಪುಗೊಂಡಿದ್ದು 4.4 ಶತಕೋಟಿ ವರ್ಷಗಳ ಹಿಂದೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌ (ಪಿಟಿಐ): ಭೂಮಿಯ ಮೇಲ್ಪದರವು 4.4 ಶತಕೋಟಿ ವರ್ಷಗಳ ಹಿಂದೆ ಮತ್ತು ಸೌರ ಮಂಡಳ ವ್ಯವಸ್ಥೆ ನಿರ್ಮಾಣವಾದ 16 ಕೋಟಿ ವರ್ಷಗಳ ನಂತರ ನಿರ್ಮಾಣ­ವಾಗಿದೆ ಎಂದು ಹೊಸ ಅಧ್ಯಯನ­ವೊಂದು ಬಹಿರಂಗ­ಪಡಿಸಿದೆ.ಭೂಮಿಯ ಇತಿಹಾಸದ ಕುರಿತು ಅಧ್ಯಯನ ನಡೆಸಿದ ಸಂಶೋಧಕರು ಖನಿ­ಜಾಂಶವಿರುವ ಆಸ್ಟ್ರೇಲಿಯಾದ ಜ್ಯಾಕ್‌ ಹಿಲ್ಸ್‌ ಮತ್ತು ಭೂಮಿಯ ಆರಂಭಿಕ ತಣ್ಣನೆಯ ಮೇಲ್ಪದರವು 4.4 ಶತಕೋಟಿ ವರ್ಷಗಳ ಹಿಂದೆ ನಿರ್ಮಾ­ಣವಾಗಿದೆ ಎಂದು ಹೇಳಿದ್ದಾರೆ.ಆಸ್ಟ್ರೇಲಿಯಾದ ಖನಿಜಾಂಶವಿರುವ ಬೆಟ್ಟದ ಮೇಲ್ಪದರದ ಒಂದು ಚೂರನ್ನು ತೆಗೆದುಕೊಂಡು ಅದನ್ನು ಸಂಶೋಧನೆಗೆ ಒಳಪಡಿಸ­ಲಾ­ಯಿತು. ನಂತರ ಅದನ್ನು ಚಿತ್ರಗಳ ಮೂಲಕ ವಿಶ್ಲೇಷಿಸಿ ಭೂಮಿ ವಾಸ­ಯೋಗ್ಯ ಗ್ರಹವಾಗಿ ಹೇಗೆ ಮಾರ್ಪಟ್ಟಿತು ಎಂಬುದನ್ನು ತಿಳಿದುಕೊಳ್ಳಲಾಗಿದೆ.ವಿಸ್ಕಾನ್ಸಿನ್‌ ಮೆಡಿಸನ್‌ ವಿಶ್ವವಿ­ದ್ಯಾ­ನಿಲಯದ ಭೂಗೋಳಶಾಸ್ತ್ರ ಪ್ರಾಧ್ಯಾ­ಪಕ ಜಾನ್‌ ವ್ಯಾಲಿ ಅವರ ನೇತೃತ್ವದ ಅಂತರರಾಷ್ಟ್ರೀಯ ಸಂಶೋಧಕರ ತಂಡ ಈ ಮಾಹಿತಿಯನ್ನು ಬಹಿರಂಗ­ಗೊಳಿಸಿದೆ.ಬೆಂಕಿಯ ಉಂಡೆಯಂತಿದ್ದ ಭೂಮಿಯು ಕ್ರಮೇಣ ವಾಸಯೋಗ್ಯ ಹೇಗಾಯಿತು ಎನ್ನುವುದರ ಕುರಿತು ಈ ಸಂಶೋಧನೆ ಬೆಳಕು ಚೆಲ್ಲಿದೆ.

‘ಭೂಮಿ ತಣ್ಣಗಾಗಿ ವಾಸಯೋಗ್ಯ­ವಾಯಿತು ಎನ್ನುವ ಪರಿಕಲ್ಪನೆ ನಿಜ­ವಾಗಿದೆ. ಈ ಸಂಶೋಧನೆಯು ವಾಸ­ಯೋಗ್ಯ ಗ್ರಹಗಳು ಹೇಗೆ ರೂಪು­ಗೊಳ್ಳುತ್ತವೆ ಎಂಬುದನ್ನು ತಿಳಿಯಲು ಅನುಕೂಲಕರವಾಗಲಿದೆ ಎಂದು ವ್ಯಾಲಿ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.