ಬೆಂಗಳೂರು: ಮಹದೇವಪುರ ಕ್ಷೇತ್ರದ ಭೈರತಿ ಸಮೀಪದ ರಾಂಪುರ ಕೆರೆಯೂ ರಾಸಾಯನಿಕ ತ್ಯಾಜ್ಯಗಳಿಂದ ಸಂಪೂರ್ಣವಾಗಿ ಕಲುಷಿತಗೊಂಡಿದೆ. ಬೆಳ್ಳಂದೂರು ಕೆರೆಯಲ್ಲಿ ನೊರೆ ಉತ್ಪತ್ತಿಯಾಗುವ ಮಾದರಿಯಲ್ಲೇ ರಾಂಪುರ ಕೆರೆಯಲ್ಲಿಯೂ ಭಾರೀ ನೊರೆ ಕಾಣಿಸಿಕೊಂಡಿದೆ.

ಅಲ್ಲದೆ ಕೆರೆಯಿಂದ ದುರ್ನಾತವೂ ಹೊರಸೂಸುತ್ತಿದೆ. ಈ ಹಿನ್ನೆಲೆಯಲ್ಲಿ ರಾಂಪುರ ಸೇರಿದಂತೆ ಕೆರೆಯ ಸುತ್ತಮುತ್ತಲಿನ ಊರುಗಳಾದ ಮಾರಗೊಂಡನಹಳ್ಳಿ, ಕೆ.ಚನ್ನಸಂದ್ರ, ಕನಕನಗರ, ಚಳ್ಳಕೆರೆ, ಆದೂರು, ವೀರೇನಹಳ್ಳಿ, ಹಿರಂಡನಹಳ್ಳಿ, ಕಿತ್ತಗನೂರು, ಮೇಡಹಳ್ಳಿ ಸೇರಿದಂತೆ ಹದಿನೈದಕ್ಕೂ ಹೆಚ್ಚು ಊರುಗಳ ಜನತೆಗೆ ನರಕದ ದರ್ಶನವಾಗುತ್ತಿದೆ. ಈ ಕೆರೆ ಕೃಷ್ಣರಾಜಪುರ ಹಾಗೂ ಮಹದೇವಪುರ ಕ್ಷೇತ್ರಗಳೆರಡರ ಮಧ್ಯಭಾಗದಲ್ಲಿದೆ.

ಬಿದರಹಳ್ಳಿ ಹೋಬಳಿ ವ್ಯಾಪ್ತಿಯ ರಾಂಪುರ ಸವೇ ನಂ.71ರಲ್ಲಿ ಒಟ್ಟು 107 ಎಕರೆ ವಿಸ್ತೀರ್ಣವನ್ನು ಹೊಂದಿರುವ ಕೆರೆಯಲ್ಲಿ ಒಂದು ವರ್ಷದಿಂದ ಈಚೆಗೆ ನೀರಿನ ಪ್ರಮಾಣ ಇಳಿಕೆಯಾಗಿದೆ. ಕೆರೆಯಲ್ಲಿ ಗಿಡಗಂಟಿಗಳು ಬೆಳೆದಿವೆ. ಇದರಿಂದ ತ್ಯಾಜ್ಯಯುಕ್ತ ನೀರು ಮುಂದಕ್ಕೆ ಹರಿದು ಹೋಗದೆ ಕೆರೆಯಲ್ಲಿ ಮಡುಗಟ್ಟಿ ನಿಲ್ಲುತ್ತಿದೆ.

ಬಹುಮುಖ್ಯವಾಗಿ ಶಿವಾಜಿನಗರ, ಹೆಬ್ಬಾಳ, ಹೊರಮಾವು, ಹೆಣ್ಣೂರು ಕೆರೆಗಳಿಂದ ಹಾಗೂ ಸುತ್ತಮುತ್ತಲಿನ ಅನೇಕ ಅಪಾರ್ಟ್ಮೆಂಟ್ಗಳಿಂದ ಹೊರಬರುವ ಒಳಚರಂಡಿ ನೀರು ಶುದ್ಧೀಕರಣಗೊಳ್ಳದೆ ದಿನವೂ ಸದ್ದಿಲ್ಲದೆ ರಾಂಪುರ ಕೆರೆಯ ಒಡಲಿಗೆ ಬಂದು ಸೇರುತ್ತಿದೆ. ಹೀಗಾಗಿಯೇ ಕೆರೆಯ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದೆ.

ಕೆರೆಗೆ ರಾಂಪುರ ಹಾಗೂ ಮಾರಗೊಂಡನಹಳ್ಳಿ ಬಳಿ ಎರಡು ಕಡೆಗಳಲ್ಲಿ ಕೆರೆ ಕೋಡಿಗಳಿದ್ದು, ಎರಡೂ ಕೋಡಿಗಳಲ್ಲಿ ಹೇರಳವಾಗಿ ನೊರೆ ಉತ್ಪತ್ತಿಯಾಗುತ್ತಿದೆ. ಕೋಡಿ ಕೆಳಗೆ ಸುಮಾರು 2–3 ಕಿ.ಮೀ ಉದ್ದಕ್ಕೂ ಹರಿಯುವ ಕೊಳಕು ನೀರಿನ ಮೇಲೆ ಐದಾರು ಅಡಿಗಳಷ್ಟು ಎತ್ತರಕ್ಕೆ ನೊರೆ ತೇಲಿಕೊಂಡು ಹೋಗುತ್ತಿದೆ. ಇದರಿಂದಾಗಿ ಜನತೆ ಆತಂಕ ಕ್ಕೊಳಗಾಗಿದ್ದಾರೆ. ಬೆಳ್ಳಂದೂರಿನಲ್ಲಿ ಉಂಟಾದ ಸಮಸ್ಯೆ ರಾಂಪುರದಲ್ಲಿಯೂ ಉಂಟಾಗಿದೆ.

ಕಳೆದ ವರ್ಷ ಕೆರೆ ಕಲುಷಿತಗೊಂಡು ಸೊಳ್ಳೆಗಳ ಹಾವಳಿ ಹೆಚ್ಚಾಗಿ ರಾಂಪುರ ದಲ್ಲಿ ಡೆಂಗಿ ಕಾಣಿಸಿಕೊಂಡಿತ್ತು. ಆರೋಗ್ಯ ಸಚಿವರಾಗಿದ್ದ ಯು.ಟಿ.ಖಾದರ್ ರಾಂಪುರ ಕೆರೆಗೆ ಭೇಟಿ ನೀಡಿದ್ದರು. ಸ್ಥಳೀಯ ಶಾಸಕ ಅರವಿಂದ ಲಿಂಬಾವಳಿ ಕೂಡ ಕೆರೆ ಪರಿಶೀಲನೆ ನಡೆಸಿದ್ದರು.

ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಬಂದು ಕೆರೆ ನೀರನ್ನು ಪರೀಕ್ಷೆ ಮಾಡಿ ನೀರು ರಾಸಾಯನಿಕ ತ್ಯಾಜ್ಯಗಳಿಂದ ಕಲುಷಿತಗೊಂಡಿರುವುದನ್ನು ದೃಢಪಡಿಸಿದ್ದರು. ಆದರೆ, ಇದುವರೆಗೂ ಕೆರೆಗೆ ತ್ಯಾಜ್ಯ ಸೇರದಂತೆ ತಡೆಗಟ್ಟಲು ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿ ಪಿ.ಮುನಿರಾಜು ದೂರಿದರು.

ಕೆರೆಯ ದಂಡೆಗೆ ಹೊಂದಿಕೊಂಡಿರುವ ರಾಂಪುರ ಹಾಗೂ ಮಾರಗೊಂಡನಹಳ್ಳಿಯಲ್ಲಿ ಹೊಸದಾಗಿ ಕೊರೆದ ಕೊಳವೆಬಾವಿಗಳಲ್ಲಿ ದುರ್ನಾತಯುಕ್ತ ನೀರು ಬರುತ್ತಿದೆ. ಹೀಗಾಗಿ ಕುಡಿಯುವ ನೀರಿಗೆ ತೀವ್ರ ತೊಂದರೆಯಾಗಿದೆ. ಅನಿವಾರ್ಯವಾಗಿ ದೂರದ ಊರುಗಳಿಂದ ನೀರನ್ನು ಕೊಂಡು ತರುವಂತಾಗಿದೆ ಎಂದು ಮಾರಗೊಂಡನಹಳ್ಳಿ ನಿವಾಸಿ ದೊಡ್ಡಯಲ್ಲಪ್ಪ ಅಳಲನ್ನು ತೋಡಿಕೊಂಡರು.

ಕೆರೆ ಕಲುಷಿತಗೊಂಡು ಸೊಳ್ಳೆಗಳ ತವರುಮನೆಯಂತಾಗಿದೆ. ಹೀಗಾಗಿ ಹಗಲು ವೇಳೆಯಲ್ಲಿಯೇ ಮನೆಗಳಲ್ಲಿ ನೆಮ್ಮದಿಯಿಂದ ಇರಲು ಆಗುತ್ತಿಲ್ಲ. ಸೊಳ್ಳೆಗಳ ಕಾಟ ಅತಿಯಾಗಿದೆ. ಗ್ರಾಮಸ್ಥರು ಭಯದಿಂದಲೇ ಬದುಕುವಂತಾಗಿದೆ ಎಂದು ಅವರು ತಿಳಿಸಿದರು.

ಕೆರೆಯ ಪಶ್ಚಿಮ ಭಾಗದಲ್ಲಿರುವ ಕೆರೆಕಟ್ಟೆಯ ಮೇಲಿನ ರಸ್ತೆಯ ಮೇಲಿಂದ ಬಿಬಿಎಂಪಿ ಲಾರಿಗಳು ಕೆರೆಗೆ ಕಸವನ್ನು ಸುರಿದು ಹೋಗುತ್ತಿವೆ. ಹೀಗಾಗಿ ಕೆರೆಯ ದಂಡೆಯಲ್ಲಿ ಸುರಿದ ಕಸ ಕೊಳೆತು ದುರ್ನಾತ ಬರುತ್ತಿದೆ. ಹೀಗಾಗಿ ಕೃಷ್ಣರಾಜಪುರದಿಂದ ಕೆ.ಚೆನ್ನಸಂದ್ರ ಮೂಲಕ ಬಿಳಿಶಿವಾಲೆಯಿಂದ ಯಲಹಂಕ, ದೇವನಹಳ್ಳಿ ಕಡೆಗೆ ಹೋಗುವವರು ಕೆರೆ ಕಟ್ಟೆಯ ಮೇಲೆ ಮೂಗು ಮುಚ್ಚಿಕೊಂಡು ಹೋಗುವಂತಾಗಿದೆ.

ಕೆರೆ ಒತ್ತುವರಿ: ಕೆರೆಗೆ ವ್ಯವಸ್ಥಿತವಾದ ತಂತಿಬೇಲಿ ಅಳವಡಿಸದ ಕಾರಣ ಮಾರಗೊಂಡನಹಳ್ಳಿ, ಕೆ.ಚನ್ನಸಂದ್ರ ಹಾಗೂ ರಾಂಪುರ ಗ್ರಾಮದ ಕಡೆಯಿಂದ ಕೆರೆ ದಂಡೆ ಒತ್ತುವರಿಯಾಗಿದೆ. ಇನ್ನು ಹೊರಮಾವು, ಬಿಳಿಶಿವಾಲೆ, ಗೆದ್ದಲಹಳ್ಳಿ ಕಡೆಯಿಂದ ಕೆರೆಗೆ ನೇರ ಸಂಪರ್ಕವನ್ನು ಹೊಂದಿರುವ ನೂರು ಅಡಿಗಳಷ್ಟು ಅಗಲದ ರಾಜಕಾಲುವೆಗಳು ಸಂಪೂರ್ಣವಾಗಿ ಒತ್ತುವರಿಯಾಗಿವೆ. ಕೆರೆಯ ಸುತ್ತಮುತ್ತ ಮೀಸಲು ಪ್ರದೇಶ ಉಲ್ಲಂಘನೆ ಆಗಿರುವುದು ಕಂಡುಬರುತ್ತಿದೆ.

ರೈತರಿಗೆ ವರವಾಗಿತ್ತು: 15 ವರ್ಷಗಳ ಹಿಂದೆ ರಾಂಪುರ ಕೆರೆಯ ನೀರನ್ನು ನಂಬಿ ಸಾವಿರಾರು ರೈತರು ವ್ಯವಸಾಯ ಮಾಡುತ್ತಿದ್ದರು. ದನಕರುಗಳಿಗೆ ಕುಡಿಯಲು ಹಾಗೂ ಮನೆಯಲ್ಲಿ ದಿನ ಬಳಕೆಗೂ ಕೂಡ ಕೆರೆಯ ನೀರನ್ನೇ ಬಳಸುತ್ತಿದ್ದರು. ಮೀನುಗಾರಿಕೆಯನ್ನು ನಡೆಸುತ್ತ ಜೀವನ ಸಾಗಿಸುತ್ತಿದ್ದರು. ಹೀಗಾಗಿ ಕೆರೆ ರೈತರಿಗೆ ಮೀನುಗಾರರಿಗೆ ವರವಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.